ಶಹಾಬಾದ ನಗರದಲ್ಲಿ ಬೌದ್ಧ ಧರ್ಮದ ಪಂಚಶೀಲ ಧ್ವಜ ದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ನಗರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಜ. 8 ರಂದು ಬೌದ್ಧ ಧರ್ಮದ ಪಂಚಶೀಲ ಧ್ವಜ ದಿನದ ಅಂಗವಾಗಿ ಧ್ವಜಾರೋಹಣವನ್ನು ಬೌದ್ಧ ಉಪಾಸಕರಿಂದ ಮಾಡಲಾಯಿತು.
ಧಮ್ಮ ಉಪಾಸಕ ಶಿವಶಾಲ ಪಟ್ಟಣಕರ್ ಪಂಚಶೀಲ ತತ್ವ ಬೋಧಿಸಿ ಮಾತನಾಡಿದ ಅವರು, ಬುದ್ಧನ ಪಂಚಶೀಲ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿ ಕೊಳ್ಳಬೇಕು, ಶಾಂತಿ ಸ್ಥಾಪನೆ ಮಾಡಿದ ಧರ್ಮ ಬುದ್ಧನ ಧರ್ಮ, ಭಾರತದಲ್ಲಿ ಬುದ್ಧ ಧರ್ಮ ಹುಟ್ಟಿದರೂ ಪ್ರಚಾರ ಇಲ್ಲದಿದ್ದರಿಂದ ಕಡಿಮೆ ಸಂಖ್ಯೆಯಲ್ಲಿ ಅನುಯಾಯಿಗಳಿದ್ದಾರೆ, ಅಲ್ಲದೆ ಸುಖಕರ ಜೀವನಕ್ಕೆ ಅಷ್ಟಾಂಗ ಮಾರ್ಗ ಅಳವಡಿಕೊಳ್ಳಬೇಕು, ಆಸೆಯೇ ದುಃಖಕ್ಕೆ ಮೂಲ ಎಂದು ಅಂದೇ ಹೇಳಿದ್ದಾರೆ ಅವುಗಳನ್ನು ಪಾಲಿಸೋಣ ಎಂದರು.
ಈ ಸಂಧರ್ಭದಲ್ಲಿ ಸತೀಶ ಕೋಬಾಳಕರ, ಮಹಾದೇವ ತರನಳ್ಳಿ, ಮರೇಪ್ಪ ಬಣಮಿಕರ, ಸುಭಾಷ ಸಾಕ್ರೆ, ಶಿವಕುಮಾರ ಜಮಾದಾರ, ಪುನೀತ್ ಹಳ್ಳಿ, ಸುಜಾತ ತೆಗನೂರ, ನಾಗಾರ್ಜುನ ಪಂಚಿ, ಪರಶುರಾಮ ಸಂಕನೂರ ಸೇರಿದಂತೆ ಅನೇಕರು ಇದ್ದರು.