Oplus_0

ಶಹಾಬಾದಲ್ಲಿ ಜಾನಪದದ ಸುಗ್ಗಿ ಸಂಭ್ರಮ, ಕನ್ನಡ ಸಾಹಿತ್ಯಕ್ಕೆ ಜನಪದ ಕೊಡುಗೆ ಅಪಾರ: ದೇವರಮನಿ

ನಾಗಾವಿ ಎಕ್ಸಪ್ರೆಸ್

ಶಹಾಬಾದ: ಕೂಡಲ ಸಂಗಮ ಹಳೆ ಶಹಾಬಾದ ಶಾಲೆಯ ಆವರಣಲ್ಲಿ ಕನ್ನಡ ಜಾನಪದ ಪರಿಷತ್ತು ವತಿಯಿಂದ ಸುಗ್ಗಿಯ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಜಾನಪದ ಪರಿಷತ್ತಿನ ಅದ್ಯಕ್ಷ ರಾಜಶೇಖರ ದೇವರಮನಿ ಸುಗ್ಗಿ ಸಂಭ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ, ನಾಡುನುಡಿ, ಸುಗ್ಗಿಯ ಸಂಭ್ರಮ, ಪರಂಪರೆ, ಕುರಿತು ಇಂದಿನ ಪಿಳಿಗೆಗೆ ಜೋಗುಳ ಪದ, ಹಂತಿಯ ಹಾಡು, ಕನ್ನಡ ಸಾಹಿತ್ಯಕ್ಕೆ ಜನಪದ ಕೊಡುಗೆ ಅಪಾರ ಅದನ್ನು ಉಳಿಸಿ ಬೆಳಸಿ ಮುಂದಿನ ಪೀಳಿಗೆಗೆ ಕೊಂಡೆಯುವದು ಯುವಜನರ ಕರ್ತವ್ಯವಾಗಿದೆ ಎಂದು ಹೇಳಿದರು.

ಕಲಾವಿದರಾದ ಸುಗಂದ ಶಹಾಪೂರ, ಶಶಿಕಲಾ ಸೂರ, ಶಾಂತಬಾಯಿ ಪೋತನ್ಯರ, ಭೀಮಬಾಯಿ ಜಾನಪದ ಗೀತೆ ಹಾಡಿ ಮನ ರಂಜಿಸಿದರು. ಮುಖ್ಯ ಅತಿಥಿಯಾಗಿ ಅಂಬಿಕಾ ಜಿಂಗಾಡೆ, ಸವಿತಾ ಬೆಳಗುಂಪಿ, ರೇಖಾ ವಿಶ್ವಕರ್ಮ, ವೇದಿಕೆ ಮೇಲೆ ಇದ್ದರು. ಮಹಿಳಾ ಕಲಾವಿದರಿಗೆ ಸನ್ಮಾನ ಮತ್ತು ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ತಾರಾಬಾಯಿ ವಿಶ್ವಕರ್ಮ, ಗಿರಿಜಾ ಪಾಟೀಲ್, ವಿದ್ಯಾವತಿ ಹಡಪದ, ಸೃತಿ ನಂದಿಧ್ವಜ, ಪ್ರೀತಿ ಸೇರಿದಂತೆ ಇನ್ನಿತರ ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!