ಶಹಾಬಾದಲ್ಲಿ ಶಿವಶರಣ ಮಾದರ ಚನ್ನಯ್ಯ ನವರ 975 ನೇ ಜಯಂತ್ಯೋತ್ಸವ, ಮಾದಾರ ಚೆನ್ನಯ್ಯ ಶ್ರೇಷ್ಠ ಶಿವಭಕ್ತನಾಗಿದ್ದರು: ಶರಣಪ್ಪ ಹದನೂರ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಮಾದಿಗರ ಕುಲತಿಲಕ ಶಿವಶರಣ ಮಾದಾರ ಚೆನ್ನಯ್ಯನವರು 12ನೇ ಶತಮಾನದ ಶ್ರೇಷ್ಠ ಗುಪ್ತ ಶಿವಭಕ್ತನಾಗಿದ್ದ ಎಂದು ನಗರ ಸಭೆ ಮಾಜಿ ಅಧ್ಯಕ್ಷ ಶರಣಪ್ಪ ಹದನೂರ ಹೇಳಿದರು.
ಅವರು ನಗರದ ವಾರ್ಡ್ ನಂ. 27 ರಲ್ಲಿ ಶಿವಶರಣ ಮಾದರ ಚನ್ನಯ್ಯ ನವರ 975 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಕ್ಷಾತ್ ಶಿವನೇ ಅವರ ಗುಪ್ತ ಭಕ್ತಿ ಬಯಲು ಮಾಡಲು ಅವನ ಗುಡಿಸಲಿಗೆ ಬಂದು ಅಂಬಲಿಯನ್ನು ಕುಡಿದ, ಅಂತಹ ಮಾದಾರ ಚನ್ನಯ್ಯನವರು ಮಾದರ ಕುಲದಲ್ಲಿ ಹುಟ್ಟಿದರೂ ವೇದವನ್ನು ಓದುವವರು ಅವರನ್ನು ಪೂಜಿಸುವ ಮಟ್ಟಕ್ಕೆ ಬೆಳೆದರು ಎಂದರು.
ಮಾದಿಗ ಸಮಾಜದ ಮುಖಂಡ ರಾಜು ಮುಕ್ಕಣ್ಣ ಮಾತನಾಡಿ, 12ನೇ ಶತಮಾನದಲ್ಲಿ ದೇವರು, ದೇಸವಸ್ಥಾನಗಳು ಶ್ರೀಮಂತರ ಸೊತ್ತಾಗಿದ್ದವು, ದೀನ-ದಲಿತರಿಗೆ ಪ್ರವೇಶ ನೀರಾಕರಿಸಲಾಗಿತ್ತು, ಇದರಿಂದ ಬೆಸತ್ತ ಶಿವಶರಣ ಮಾದರ ಚೆನ್ನಯ್ಯನವರು ವಚನಗಳ ಮೂಲಕ ಅಸಮಾನತೆ ಬಗ್ಗೆ ಹೇಳಿ ಸಮ ಸಮಾಜವನ್ನು ಕಟ್ಟಲಿಕ್ಕೆ ಶ್ರಮಿಸಿದ್ದರು ಎಂಬುವುದು ಲಭ್ಯವಾದ ಅವರ 10 ವಚನಗಳಿಂದ ತಿಳಿದು ಬರುತ್ತದೆ,
ಹನ್ನೆರಡನೇ ಶತಮಾನದಲ್ಲಿ ಕಾಯಕ ತತ್ವದ ಮೂಲಕ ಹೆಸರುವಾಸಿಯಾದ ಮಾದಾರ ಚನ್ನಯ್ಯ ಅವರ ಆದರ್ಶಗಳನ್ನು ಯುವ ಜನತೆ ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭೀಮರಾಯ ಮುದ್ನಾಳ್, ಅತಿಥಿಗಳಾಗಿ ಕನಕಪ್ಪ ದಂಡಗುಳಕರ, ಚಂದ್ರಕಾಂತ ಗೊಬ್ಬೂರ ಮಾತನಾಡಿದರು.
ವೇದಿಕೆ ಮೇಲೆ ಶಿವರಾಜ ಕೋರೆ, ಮರಲಿಂಗ, ರಿಚರ್ಡ್ ವಾಡಿ, ಮಹ್ಮದ ಖದೀರ ಇದ್ದರು. ಸಮಾರಂಭದಲ್ಲಿ ಶಿವರಾಜ ಜೀನಕೇರಿ, ಅಮರ ಕೋರೆ, ಮಲ್ಲೇಶಿ ಸೈದಾಪೂರ, ಶಿವಪ್ಪ, ಹಣಮಂತ ತರನಳ್ಳಿ, ಮಲ್ಲಪ್ಪ, ರಾಜು ದೇವದುರ್ಗ, ಮರೇಪ್ಪ ಹಳ್ಳಿ, ರಮೇಶ, ಯಲ್ಲಪ್ಪ ಕುಕ್ಕುಂದಿ, ರವಿ, ಶಂಕರ, ಅವಿನಾಶ ಕುಕ್ಕುಂದಿ, ಶ್ರೀನಿವಾಸ ತಂಗದಡಗಿ, ಅವಿನಾಶ, ದತ್ತು ಮಾಸ್ಟರ, ಶ್ರೀಮತಿ ಬಾಲಮ್ಮ, ಗಂಗಮ್ಮ, ಭಾಗಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮೋಹನ ಹಳ್ಳಿ ಸ್ವಾಗತಿಸಿದರು, ಮರಲಿಂಗ ಯಾದಗಿರಿ ನಿರೂಪಿಸಿದರು, ಸಂತೋಷ ಹುಲಿ ವಂದಿಸಿದರು