Oplus_0

ಏಪ್ರಿಲ್ 22, 23 ರಂದು ಶಹಾಬಾದನಲ್ಲಿ ಡಾ. ಅಂಬೇಡ್ಕರ್ ಜಯಂತಿ, ಪ್ರಬುದ್ಧ ನಿರ್ಮಾಣಕ್ಕಾಗಿ ಭೀಮ ಉತ್ಸವ:  ಶಂಕರ ಅಳ್ಳೋಳ್ಳಿ 

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 134 ನೇ ಜಯಂತ್ಯೋತ್ಸವ ಅಂಗವಾಗಿ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಕಲ್ಯಾಣ ಕರ್ನಾಟಕದಲ್ಲಿ ಭೀಮ ಉತ್ಸವ ಹಾಗೂ 1949ರ ಬಿಟಿಎಂಸಿ ಕಾಯ್ದೆ ರದ್ದು ಮತ್ತು ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ ಜರಗಲಿದೆ ಎಂದು ಜಯಂತ್ಯೋತ್ಸವ ಮಿತಿಯ ಅಧ್ಯಕ್ಷ ಶಂಕರ ಅಳ್ಳೋಳಿ ಹಾಗೂ ಗೌರವಾಧ್ಯಕ್ಷ ಸುರೇಶ ಮೆಂಗನ್ ಅವರು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುದುವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಕರಪತ್ರ ಬಿಡುಗಡೆ ಮಾಡಿ ನಂತರ ಜಂಟಿಯಾಗಿ ಮಾತನಾಡಿದ ಅವರು, ನಗರದ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ಏಪ್ರಿಲ್ 22 ಸಾಯಂಕಾಲ 5 ಗಂಟೆಗೆ ಭಾರಿ ಬಹಿರಂಗ ಸಭೆ ನಡೆಯಲಿದ್ದು, ಈ ಸಭೆಗೆ ಡಾ.ಬಿ. ಆರ್ ಅಂಬೇಡ್ಕರ್ ಅವರ ಮರಿ ಮೊಮ್ಮಗ ರಾಜರತನ್ ಅಂಬೇಡ್ಕರ್ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಏ. 23 ರಂದು ಸಾಯಂಕಾಲ 4 ಗಂಟೆಗೆ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ಪ್ರತಿಮೆವರೆಗೂ ಭವ್ಯವಾದ ಮೆರವಣಿಗೆ ವಿವಿಧ ಕಲಾತಂಡಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಹಾಗೂ ಅಂಬೇಡ್ಕರ್ ಅವರ ಜೀವನದ ಕೆಲವು ಘಟನೆಗಳ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಪೂಜ್ಯ ವರಜ್ಯೋತಿ ಬಂತೇಜಿ, ಹಾಗೂ ಶಾಸಕರು, ಸಚಿವರು ಮತ್ತು ರಾಜ್ಯ ದಲಿತ ನಾಯಕರು ಪ್ರಗತಿಪರರು, ಸ್ಥಳೀಯ ಎಲ್ಲಾ ಸಮಾಜದ ಮುಖಂಡರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಹಿರಂಗ ಸಭೆಯ ವೇದಿಕೆಗೆ ದಲಿತ ಚಿಂತಕ, ಹೋರಾಟಗಾರ ಡಾ. ಮಲ್ಲೇಶಿ ಸಜ್ಜನ್ ವೇದಿಕೆ ಎಂದು ಹೆಸರಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಾಗರಾಜ ಸಿಂಗೆ, ಕೃಷ್ಣಪ್ಪ ಕರಣಿಕ, ಶರಣು ಪಗಲಾಪುರ, ರಾಜೇಶ್ ಯನಗುಂಟಿಕರ, ಅಲ್ಲಮಪ್ರಭು ಮಸ್ಕಿ, ಬಸವರಾಜ ಮಯೂರ, ರಾಜು ಜಂಬಗಿ, ಸತೀಶ್ ಕೋಬಾಳಕರ, ಮಲ್ಲಣ್ಣ ಮಸ್ಕಿ, ಪಿಎಸ ಮೇತ್ರಿ, ಪ್ರವೀಣ ರಾಜನ, ಶಿವಕುಮಾರ ಜಮಾದಾರ, ಮಲ್ಲಿಕಾರ್ಜುನ ಕಟ್ಟಿಮನಿ, ಸ್ನೇಹಿತ ಜಾಯಿ, ಶಿವಶಾಲ ಪಟ್ಟಣ, ಮೋಹನ ಹಳ್ಳಿ, ಭರತ್ ಧನ್ನಾ, ಮನೋಹರ ಕೋಳೂರ, ಪುನೀತ ಹಳ್ಳಿ, ರಾಜು ಕಾಳನೂರ, ಮಲ್ಲಣ್ಣ ದೊಡ್ಡಿ, ರಾಜು ಭೋರಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!