ಶಾಸಕ ಬಸವರಾಜ ಮತ್ತಿಮುಡ್ ಜೊತೆ ಸಿಪಿಐ ಅನುಚಿತ ವರ್ತನೆ ಖಂಡನೀಯ: ಗುಂಡು ಮತ್ತಿಮುಡ್
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ನಗರದ ಸ್ಟೇಷನ್ ಬಜಾರ ಪೋಲೀಸ ಠಾಣೆಯ ಸಿಪಿಐ ಶಕೀಲ ಅಂಗಡಿ ಅವರು ದಲಿತ ಶಾಸಕ ಬಸವರಾಜ ಮತ್ತಿಮುಡ್ ಅವರ ವಿರುದ್ಧ ಏಕವಚನದಲ್ಲಿ ನಿಂದಿಸಿ ಅವರನ್ನು ಅವಮಾನ ಮಾಡುವ ಮೂಲಕ ದಲಿತರ ಜೊತೆ ಅನುಚಿತ ವರ್ತನೆ ಮಾಡುತ್ತಿರುವುದು ಖಂಡನೀಯ ಎಂದು ಚಿತ್ತಾಪುರ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಗುಂಡು ಮತ್ತಿಮುಡ್ ಅವರು ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಗುತ್ತಿಗೆದಾರ ಸಚಿನ ಪಾಂಚಾಳ ಆತ್ಮಹತ್ಯೆ ಡೆತ್ ನೋಟ್ ನಲ್ಲಿ ಬಿಜೆಪಿ ಮುಖಂಡರ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ ಬಸವರಾಜ ಮತ್ತಿಮುಡ್ ಅವರು ಸ್ಟೇಷನ ಬಜಾರ ಪೋಲಿಸ ಠಾಣೆಗೆ ಕೇಸ ನೀಡಲು ಹೋದಾಗ ಸುಮಾರು 3 ರಿಂದ 4 ಗಂಟೆಯವರೆಗೂ ಸಿಪಿಐ ಶಕೀಲ ಅಂಗಡಿ ಅವರು ಶಾಸಕ ಬಸವರಾಜ ಮತ್ತಿಮುಡ್ ಅವರನ್ನು ಸತಾಯಿಸಿದಲ್ಲದೇ ಅವರನ್ನು ಏಕವಚನದಲ್ಲಿ ನಿಂದಿಸಿ ಶಾಸಕರ ವಿರುದ್ಧ ಅನುಚಿತವಾಗಿ ನಡೆದುಕೊಂಡಿದ್ದು ಸರಿಯಲ್ಲ ಎಂದು ತಿಳಿಸಿದ್ದಾರೆ.
ದಲಿತ ಶಾಸಕನಿಗೆ ಕನಿಷ್ಠ ಗೌರವ ನೀಡಿಲ್ಲ ಇದು ಕೇವಲ ಅವರಿಗೆ ಮಾಡಿದ ಅವಮಾನವಲ್ಲ, ಇಡೀ ದಲಿತ ಮುಖಂಡರಿಗೆ ಮಾಡಿದ ಅವಮಾನ. ಪ್ರತಿ ಹತ್ತು ನಿಮಿಷಕ್ಕೆ ಹೊರಹೋಗಿ ನಿರ್ದೇಶನ ತೆಗದುಕೊಂಡು ಬಂದು ಅವರಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಅವರನ್ನು ಅಮಾನತ್ತು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೂಡಲೇ ಸ್ಟೇಷನ ಬಜಾರ ಪೋಲಿಸ ಠಾಣೆಯ ಸಿಪಿಐ ಶಕೀಲ ಅಂಗಡಿ ಅವರು ಶಾಸಕ ಬಸವರಾಜ ಮತ್ತಿಮುಡ್ ಬಳಿ ಕ್ಷಮೆ ಕೇಳಬೇಕು. ಒಂದು ವೇಳೆ ಸಿಪಿಐ ಶಕೀಲ ಅಂಗಡಿ ಅವರು ಶಾಸಕರ ಬಳಿ ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.