ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿಗೆ ಚಿತ್ತಾಪುರ ಶಿಲ್ಪ ಕಲಾವಿದ ವೀರಣ್ಣ ಶಿಲ್ಪಿ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಎರಡು ವರ್ಷದ (2022, 2023) ಗೌರವ ಪ್ರಶಸ್ತಿ ಹಾಗೂ 2023ರ ‘ಶಿಲ್ಪಶ್ರೀ ಪ್ರಶಸ್ತಿ’ ಪ್ರಶಸ್ತಿಗೆ ತಲಾ ಹತ್ತು ಕಲಾವಿದರು ಆಯ್ಕೆಯಾಗಿದ್ದಾರೆ ಎಂದು ರಿಜಿಸ್ಟ್ರಾರ್ ಆರ್. ಚಂದ್ರಶೇಖರ ತಿಳಿಸಿದ್ದಾರೆ.
ಈ ಪೈಕಿ 2023 ಗೌರವ ಪ್ರಶಸ್ತಿಗೆ ಚಿತ್ತಾಪುರ ಪಟ್ಟಣದ ಶಿಲ್ಪ ಕಲಾವಿದ ವೀರಣ್ಣ ಶಿಲ್ಪಿ (ಸಂಪ್ರದಾಯ ಶಿಲ್ಪ) ಭಾಜನರಾಗಿದ್ದು, 50 ಸಾವಿರ ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ನಲ್ಲಿ ನಡೆಯಲಿರುವ ಶಿಲ್ಪಕಲಾ ಪ್ರದರ್ಶನದಲ್ಲಿ ಪ್ರಶಸ್ತಿ ಹಾಗೂ ಬಹುಮಾನ ವಿತರಣೆ ಸಮಾರಂಭ ಏರ್ಪಡಿಸುವುದಾಗಿ ರಿಜಿಸ್ಟ್ರಾರ್ ಆರ್. ಚಂದ್ರಶೇಖರ ತಿಳಿಸಿದ್ದಾರೆ.
ಚಿತ್ತಾಪುರ ಪಟ್ಟಣದ ಖ್ಯಾತ ಶಿಲ್ಪ ಕಲಾವಿದ ವೀರಣ್ಣ ಶಿಲ್ಪಿ ಅವರು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಸೇರಿದಂತೆ ಸರ್ವ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳು ಸಲ್ಲಿಸಿದ್ದಾರೆ.