Oplus_0

ಶಿವಲಿಂಗದ ಮೇಲೆ ಕಾಲಿಟ್ಟಿದ್ದು ತಪ್ಪು, ಶಿವನಿಗಿಂತ ದೊಡ್ಡವರು ಯಾರೂ ಇಲ್ಲ: ಕಂಬಳೇಶ್ವರ ಶ್ರೀ

 

ಕಲ್ಯಾಣ ಕರ್ನಾಟಕ ವಿಕಾಸ ಪಥದ ರಥಯಾತ್ರೆಗೆ ಚಿತ್ತಾಪುರಕ್ಕೆ ಭವ್ಯ ಸ್ವಾಗತ

 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಶಿವನ ಸ್ವರೂಪ ಶಿವಲಿಂಗದ ಮೇಲೆ ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರು ಕಾಲಿಟ್ಟಿದ್ದು ತಪ್ಪು ಈ ಘಟನೆಯನ್ನು ನಾನು ಖಾರವಾಗಿ ಖಂಡಿಸುತ್ತೇನೆ ಎಂದು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ ಚಿತ್ತಾಪುರ ಸಹಯೋಗದಲ್ಲಿ ಕೊತ್ತಲ ಸ್ವರ್ಣ -2025 ಹಾಗೂ 7ನೇ ಭಾರತೀಯ ಸಂಸ್ಕೃತಿ ಉತ್ಸವ ಅಂಗವಾಗಿ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ವಿಕಾಸ ಪಥ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಲಿಂಗದ ಮೇಲೆ ಕಾಲಿಟ್ಟಿದ್ದು ಶಿವಭಕ್ತರಿಗೆ ಬಹಳ ನೋವುಂಟು ಮಾಡಿದೆ, ಪರಮಾತ್ಮನಿಗಿಂತ ಯಾರೂ ದೊಡ್ಡವರಿಲ್ಲ, ಮನುಷ್ಯನಿಗೆ ಅಹಂಕಾರ ಬಂದಾಗ ಇಂತಹ ಘಟನೆಗಳು ನಡೆಯುತ್ತವೆ. ಇಂತಹ ಘಟನೆಗಳು ಮತ್ತೇ ಮರುಕಳಿಸಬಾರದು ಈ ಘಟನೆ ಕುರಿತು ದೂರ ದೂರದ ಅನೇಕರು ನಮಗೆ ಕೇಳುತ್ತಿದ್ದಾರೆ ಹೀಗಾಗಿ ನಮಗೂ ಕೂಡ ನೋವಾಗಿದೆ ಎಂದರು.

ಬಸವರಾಜ ಪಾಟೀಲ ಸೇಡಂ ಅವರ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಮತ್ತು ಯಶಸ್ವಿಯಾಗಿ ನಡೆಯಲಿವೆ ಕಳೆದ 2010 ರಲ್ಲಿ ಕಲಬುರ್ಗಿ ಕಂಪು ಕಾರ್ಯಕ್ರಮ ಇನ್ನೂ ಕಣ್ಣೆದುರು ಇದೆ, ಅವರೊಬ್ಬ ಈ ಭಾಗದ ಆದರ್ಶ ಸಾಂಸ್ಕೃತಿಕ ನಾಯಕರು ಎಂದು ಬಣ್ಣಿಸಿದರು.

ಸೇಡಂ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಮಹಾಸ್ವಾಮಿಗಳು ಮಾತನಾಡಿ, ಕಲ್ಯಾಣ ಕರ್ನಾಟಕ ವಿಕಾಸ ಪಥದ ರಥಯಾತ್ರೆ 7 ಜಿಲ್ಲೆಗಳು, 48 ತಾಲೂಕುಗಳಲ್ಲಿ ಸಾಗಿ ಬಂದಿದೆ ಕಳೆದ ಆಗಸ್ಟ್ 22 ರಂದು ಗುರುಮಠಕಲ್ ದಿಂದ ಪ್ರಾರಂಭವಾಗಿ ಪ್ರಸ್ತುತ ಚಿತ್ತಾಪುರ ಕ್ಕೆ ಬಂದಿದೆ. ಇಲ್ಲಿವರೆಗೆ 5 ಸಾವಿರ ಕಿಲೋಮೀಟರ್ ಕ್ರಮಿಸಿದೆ. ಸೇಡಂ ತಾಲೂಕಿನ ಬೀರನಳ್ಳಿ ರಸ್ತೆಯಲ್ಲಿ 29 ಜನವರಿ 2025 ರಿಂದ 6 ಫೆಬ್ರವರಿ 2025ರ ವರೆಗೆ 11 ದಿನಗಳ ಕಾಲ ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು, 240 ಎಕರೆ ಭೂಮಿಯಲ್ಲಿ 22 ಕೋಟಿ ಖರ್ಚಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ 30 ಲಕ್ಷ ಜನರು ಭಾಗವಹಿಸುವ ಅಂದಾಜಿದೆ ಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಆಹ್ವಾನಿಸಿದರು.

ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಪ್ರಮುಖರಾದ ಅಣ್ಪಾರಾವ ಪಾಟೀಲ ಮುಡಬೂಳ, ಚಂದ್ರಶೇಖರ ಸಾತನೂರ, ಮಲ್ಲಣ್ಣ ಮಾಸ್ಟರ್ ಮುಡಬೂಳ, ರವೀಂದ್ರ ಸಜ್ಜನಶೆಟ್ಟಿ, ಆನಂದ ಪಾಟೀಲ ನರಿಬೋಳ, ನಾಗರಾಜ ರೇಷ್ಮಿ, ಬಸವರಾಜ ಸಂಕನೂರ, ಶರಣಬಸಪ್ಪ ಸಾತನೂರು, ಬಸವರಾಜ ಬೊಮ್ಮನಹಳ್ಳಿ, ಅನೀಲ್ ವಡ್ಡಡಗಿ, ಸಂತೋಷ ಹಾವೇರಿ, ವಿಷ್ಣುವರ್ಧನ್ ರೆಡ್ಡಿ, ಮನೋಹರ ಹಡಪದ, ನಾಗರಾಜ ಕುಲಕರ್ಣಿ, ದೇವಿಂದ್ರ ಅರಣಕಲ್, ಕರಿಬಸಯ್ಯ ಶಾಸ್ತ್ರಿ, ರಮೇಶ್ ಕಾಳನೂರ ಸೇರಿದಂತೆ ಶಾಲಾಮಕ್ಕಳು ಇದ್ದರು.

ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಅವಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವೀರೇಂದ್ರ ಬಂಟನಳ್ಳಿ ಪ್ರಾರ್ಥಿಸಿದರು, ಅಂಬರೀಷ್ ಸುಲೇಗಾಂವ ಸ್ವಾಗತಿಸಿದರು, ಚಂದ್ರಶೇಖರ ಅವಂಟಿ ನಿರೂಪಿಸಿದರು. ಇದಕ್ಕೂ ಮುಂಚೆ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಕಲ್ಯಾಣ ಕರ್ನಾಟಕ ವಿಕಾಸ ಪಥದ ರಥಯಾತ್ರೆ ಪ್ರಮುಖ ಬೀದಿಗಳಲ್ಲಿ ನಡೆಯಿತು. ಪಿಎಸ್ಐ ಶ್ರೀಶೈಲ್ ಅಂಬಾಟಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!