Oplus_0

ಶಿವಯೋಗಿ ಸಿದ್ದರಾಮೇಶ್ವರರ ಸೇವೆ ಅಮೋಘ: ಕಂಬಳೇಶ್ವರ ಶ್ರೀ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಶಿವಯೋಗಿ ಸಿದ್ಧರಾಮೇಶ್ವರರು 12 ನೇ ಶತಮಾನದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಅವರ ಸಮಕಾಲೀನರಾಗಿದ್ದರು. ಮನುಕುಲಕ್ಕೆ ಅವರು ಸಲ್ಲಿಸಿದ ಸೇವೆ ಅಮೋಘವಾಗಿದೆ ಎಂದು ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಿದ್ಧರಾಮೇಶ್ವರ ಅವರು ಸತ್ಪುರುಷರು ಹಾಗೂ ಕರ್ಮಯೋಗಿಗಳಾಗಿದ್ದರು, ಅಂತಹ ಮಹಾ ಪುರುಷನ ಸ್ಮರಣೆ ಇಂದಿಗೂ ಪ್ರಸ್ತುತ ಎಂದರು.

ಸಿದ್ಧರಾಮೇಶ್ವರ ಇತಿಹಾಸ ಮತ್ತು ಅವರ ಜೀವನ ಚರಿತ್ರೆ ಪ್ರತಿಯೊಬ್ಬರು ಅರಿತುಕೊಳ್ಳಬೇಕು ಈ ನಿಟ್ಟಿನಲ್ಲಿ ಅವರ ವಚನಗಳು  ಹೆಚ್ಚು ಹೆಚ್ಚು ಬೆಳಕಿಗೆ ಬರುವಂತಾಗಬೇಕು ಎಂದರು.

ದಿಗ್ಗಾಂವ ಕಂಚಗಾರಹಳ್ಳಿ ಶ್ರೀ ಮಲ್ಲಯ್ಯ ಮುತ್ಯಾ ಮಾತನಾಡಿ, ದೈತ್ಯ ಶಕ್ತಿ ಬೋವಿ ವಡ್ಡರ ಸಮಾಜ ಹೊಂದಿದೆ, ನಂಬಿಕೆಯ ಜನಾಂಗ ವಡ್ಡರ ಸಮಾಜ, ತಂತ್ರಜ್ಞಾನದಿಂದ ಇಂದು ಪ್ರತಿಯೊಂದು ಸಮಾಜದ ಕುಲಕಸುಬು ಮಾಯಾ ಆಗುತ್ತಿದೆ, ಹೀಗಾಗಿ ವಡ್ಡರ ಸಮಾಜಕ್ಕೆ ತಂತ್ರಜ್ಞಾನದಿಂದ ಬಡತನವಾಗಿದೆ ಆದ್ದರಿಂದ ಇಂದಿನ ಸಮಾಜದಲ್ಲಿ ಸಮುದಾಯದ ಜನರು ಶಿಕ್ಷಿತರಾಗಬೇಕು ಸುಸಂಸ್ಕೃತರಾಬೇಕು ಎಂದು ಹೇಳಿದರು.

ತಹಸೀಲ್ದಾರ್ ನಾಗಯ್ಯ ಹಿರೇಮಠ ಉದ್ಘಾಟನೆ ಮಾಡಿದರು. ಸಮಾಜದ ಪುಜ್ಯರಾದ ಮಾರುತಿ ತಾತನವರು, ಬೋವಿ ವಡ್ಡರ ಸಮಾಜದ ತಾಲೂಕು ಅಧ್ಯಕ್ಷ ಹಣಮಂತ ಚೌದರಿ ಕಟ್ಟಿಮನಿ, ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ತಾಪಂ ಇಓ ಮೊಹಮ್ಮದ್ ಅಕ್ರಂ ಪಾಷಾ, ಸಿಪಿಐ ಚಂದ್ರಶೇಖರ ತಿಗಡಿ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್, ಪಿಎಸ್ಐ ಚಂದ್ರಾಮಪ್ಪ, ತಾಪಂ ಎಡಿ ಪಂಡಿತ ಸಿಂಧೆ, ಉಪನ್ಯಾಸಕ ಡಾ. ಗಣೇಶ ಪವಾರ, ಮುಖಂಡರಾದ ಭೀಮಣ್ಣ ಸಾಲಿ, ಮಲ್ಲಿಕಾರ್ಜುನ ಕಾಳಗಿ, ಜಗದೀಶ್ ಚವ್ಹಾಣ, ರಾಜೇಶ್ ಕಾಶಿ, ವಿಠಲ್ ಕಟ್ಟಿಮನಿ, ದಿನೇಶ್ ಚೌದರಿ, ಹಣಮಂತ ವಡ್ಡರ್, ಶಾಂತಾಬಾಯಿ, ಮೀನಾಕ್ಷೀ, ಸಂಜು ಬುಳಕರ್, ರವಿ ವಿಟ್ಕರ್, ಮಹೇಶ ಎನ್. ಕಾಶಿ, ವೆಂಕಟೇಶ್ ಇಂಗಳಗಿ, ತಮ್ಮಣ್ಣ ಭೋಸಗಿ, ಸುಭಾಶ್ಚಂದ್ರ ಪವಾರ್, ವೆಂಕಟೇಶ್ ಹರವಾಳ, ರಾಮು ಹರವಾಳ ಸೇರಿದಂತೆ ಇತರರು ಇದ್ದರು.

ಪಶುವೈದ್ಯಾಧಿಕಾರಿ ಡಾ. ಶಂಕರ್ ಕಣ್ಣಿ ಸ್ವಾಗತಿಸಿದರು, ಸಂತೋಷಕುಮಾರ್ ಶಿರನಾಳ್ ನಿರೂಪಿಸಿದರು, ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್ ವಂದಿಸಿದರು. ಕಾರ್ಯಕ್ರಮದ ಮುನ್ನ ಪಟ್ಟಣದ ಪ್ರಮುಖ ಸಿದ್ದರಾಮೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ಸಿದ್ದರಾಮೇಶ್ವರರು ವಚನಕಾರರಾಗಿದ್ದರು. ಸಮಾಜದಲ್ಲಿನ ಅಂಕುಡೊಂಕು ತಿದ್ದಿದರು ಜೊತೆಗೆ ಕೆರೆ–ಬಾವಿಗಳನ್ನು ಕಟ್ಟಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ”.- ನಾಗಯ್ಯ ಹಿರೇಮಠ ತಹಸೀಲ್ದಾರ್ ಚಿತ್ತಾಪುರ.

Spread the love

Leave a Reply

Your email address will not be published. Required fields are marked *

error: Content is protected !!