ಶೌಚಾಲಯ ನೆನೆಗುದಿಗೆ ಪುರಸಭೆ ಸದಸ್ಯರ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ.21 22 ಸಂಬಂಧಿಸಿದಂತೆ ಬಾಹರಪೇಟ್ ಏರಿಯಾದಲ್ಲಿ 2018-19 ನೇ ಸಾಲಿನಲ್ಲಿ ಶೌಚಾಲಯ ನಿರ್ಮಣಗೊಡು 5 ವರ್ಷ ಆದರೂ ಇಲ್ಲಿವರೆಗೆ ಜನರಿಗೆ ಉಪಯೋಗವಾಗದೇ ನೆನೆಗುದಿಯಲ್ಲಿದೆ ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಎಂದು ಪುರಸಭೆ ಸದಸ್ಯರಾದ ಪ್ರಭು ಗಂಗಾಣಿ, ರಮೇಶ್ ಬೊಮ್ಮನಹಳ್ಳಿ ಆರೋಪಿಸಿದ್ದಾರೆ.
ನೆನೆಗುದಿಯಲ್ಲಿದ್ದ ಶೌಚಾಲಯವನ್ನು ಕೂಡಲೇ ಅದನ್ನು ಸುಧಾರಣೆ ಮಾಡಿ ಮಹಿಳೆಯರಿಗೆ ಉಪಯೋಗವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಎಲ್ ಇಡಿ ಲೈಟ್ ರಿಪೇರಿ ಮೌಡಿಸಿ ಎಂದು ಮನವಿ ಮಾಡಿ ಒಂದು ತಿಂಗಳಾದರೂ ಸಹ ಇಲ್ಲಿವರೆಗೆ ಕಿಂಚಿತ್ತೂ ಗಮನ ಹರಿಸಿಲ್ಲ, ಬೋರವೆಲ್ ಕೆಟ್ಟು ಹೋಗಿ ಒಂದು ವಾರವಾದರೂ ದುರಸ್ತಿ ಮಾಡಿಲ್ಲ, ವಾರ್ಡ್ ನಲ್ಲಿ ಯುಜಿಡಿ ಅವ್ಯವಸ್ಥೆಯಿಂದ ರಸ್ತೆ ಮೇಲೆ ಹೊಲಸು ಹರಿಯುತ್ತದೆ ಇದರಿಂದ ದುರ್ನಾತ ಹರಡಿ ಜನರು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಕೂಡಲೇ ಪುರಸಭೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಪರಿಹಾರ ಕ್ರಮಗಳು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.