ಶ್ರೀ ಸಿಮೆಂಟ್ ಕಂಪೆನಿಯ ಭಾರಿ ವಾಹನಗಳು ಓಡಾಟ ತಡೆಹಿಡಿಯಲು ಆಗ್ರಹಿಸಿ ಕರವೇ ಯಿಂದ ರಸ್ತೆ ತಡೆ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸೇಡಂ ತಾಲೂಕು ವ್ಯಾಪ್ತಿಯ ಕೊಡ್ಲಾ ದ ಶ್ರೀ ಸಿಮೆಂಟ್ ಕಾರ್ಖಾನೆಯಿಂದ ಡೋಣಗಾಂವ, ಭಂಕಲಗಾ, ಹೊಸೂರ, ಸಾತನೂರ, ಎಜುಕೇಶನ್ ಹಬ್ ಚಿತ್ತಾಪುರ, ಕರದಾಳ ಮಾರ್ಗವಾಗಿ ಪ್ಯಾಕಿಂಗ್ ಪ್ಲಾಂಟಿನ ಸೂಲಹಳ್ಳಿ ವರಿಗೆ ಪ್ರತಿದಿನ ಸುಮಾರು 25 ಭಾರಿ ವಾಹನಗಳು ಹೋಗಿ ಬರುವುದನ್ನು ತಡೆಹಿಡಿಯಬೇಕು ಹಾಗೂ ವಾಹನಗಳ ಓಡಾಟದಿಂದ ಹದಗೆಟ್ಟ ರಸ್ತೆ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಕರವೇ ನಾರಾಯಣ ಗೌಡ ಬಣದ ನೇತೃತ್ವದಲ್ಲಿ ಮುಖಂಡರು ಗುರುವಾರ ಕರದಾಳ ಕ್ರಾಸ್ ಬಳಿ ರಸ್ತೆ ತಡೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕರವೇ ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಮಾತನಾಡಿ, ಶ್ರೀ ಸಿಮೆಂಟ್ ಕಾರ್ಖಾನೆಯಿಂದ ಡೋಣಗಾಂವ, ಭಂಕಲಗಾ, ಹೊಸೂರ, ಸಾತನೂರ, ಎಜುಕೇಶನ್ ಹಬ್ ಚಿತ್ತಾಪುರ, ಕರದಾಳ ಮಾರ್ಗವಾಗಿ ಪ್ಯಾಕಿಂಗ್ ಪ್ಲಾಂಟಿನ ಸೂಲಹಳ್ಳಿ ವರಿಗೆ ಪ್ರತಿದಿನ ಸುಮಾರು 25 ಭಾರಿ ವಾಹನಗಳು ಹೋಗಿ ಬರುವುದರಿಂದ ಈ ಮಾರ್ಗದ ಎಲ್ಲಾ ಗ್ರಾಮಗಳ ರಸ್ತೆಯು ಸಂಪೂರ್ಣ ಹದಗೆಟ್ಟು ಹೋಗಿರುತ್ತದೆ. ಇದರಿಂದ ಸರಕಾರಿ ಬಸ್ಸುಗಳಿಗೆ, ರೈತರ ಬಂಡಿ, ವಾಹನಗಳಿಗೆ ತೀವ್ರ ತೊಂದರೆಯಾಗಿದೆ ಅಲ್ಲದೇ ಇದೇ ರಸ್ತೆ ಸುಮಾರು 30-40 ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿದೆ ಎಂದರು.
ಈ ರಸ್ತೆಯಿಂದ 25 ಭಾರಿ ವಾಹನಗಳು ಹೋಗಿ ಬರುವುದರಿಂದ ವಾಹನಗಳ ಧೂಳಿನಿಂದ ತೊಗರಿ, ಜೋಳ, ಕಡ್ಲೆ, ಬೆಳೆಗಳು ನಾಶವಾಗುತ್ತಿವೆ. ಇದರಿಂದ ರೈತರು ಬಹಳ ಸಂಕಷ್ಟವಾಗಿದೆ ಈ ಕುರಿತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ನ.6 ರಂದು ಭಾರಿ ವಾಹನಗಳು ಹೋಗಿ ಬರುವುದನ್ನು ತಡೆ ಹಿಡಯಬೇಕೆಂದು ಅರ್ಜಿ ಸಲ್ಲಿಸಿದರು ಕೂಡ ಯಾವುದೇ ಕ್ರಮ ತೆಗೆದುಕೊಳ್ಳದೆ ಬೇಜವಾಬ್ದಾರಿ ವಹಿಸಿದ್ದಾರೆ ಎಂದು ಕಿಡಿಕಾರಿದರು.
ಸ್ಥಳಕ್ಕೆ ಆಗಮಿಸಿದ ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ ಮರತೂರಕರ್ ಅವರು ಮನವಿ ಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಸಾಬಣ್ಣ ಲಾಡ್ಲಾಪೂರ, ಈಶ್ವರಮ್ಮ ಯಾದವ್, ಗಣೇಶ್ ರಾಠೋಡ ಮಲ್ಲಿನಾಥ ಪೂಜಾರಿ, ಶರಣು ಭಾಗೋಡಿ, ರವಿ ವಿಟ್ಕರ್, ಶಿವರಾಮ್ ಚವ್ಹಾಣ, ಶೇರ್ ಅಲಿ, ರಾಹುಲ್ ಶಾಸ್ತ್ರಿ, ಮೋನಪ್ಪ ಹಾದಿಮನಿ, ವಿನೋದ ಚವ್ಹಾಣ, ಮಾಜೀದ್ ಅಡ್ಡಾವಾಲೆ, ದೇವಪ್ಪ ಮಾಟನಳ್ಳಿ, ಶಿವಕುಮಾರ ಗುತ್ತೇದಾರ ವಾಡಿ, ಭೀಮರಾಯ ಕುಂಬಾರ, ಸುರೇಶ್ ಭಜಂತ್ರಿ, ಪ್ರಿಯಾಂಕಾ ದಿಗ್ಗಾಂವ, ಉಮೇಶ್ ಶಾಬಾದಿ, ರಾಜೇಶ್ ಗುತ್ತೇದಾರ ನಾಲವಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.