ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರದ ನಾಮಫಲಕಕ್ಕೆ ಅವಮಾನಿಸಿದ ಕಿಡಿಗೆಡಿಗಳನ್ನು ಬಂಧಿಸುವಂತೆ ಭೋವಿ ವಡ್ಡರ ಸಮಾಜ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ನಾಸರಜಂಗ ಏರಿಯಾ ದಿಗ್ಗಾಂವ ರಸ್ತೆಯಲ್ಲಿರುವ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರವಿರುವ ನಾಮಫಲಕ ತೆಗೆದು ಹಾಕಿರುವ ಕಿಡಿಗೆಡಿಗಳನ್ನು ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಭೋವಿ ವಡ್ಡರ ಸಮಾಜದ ಮುಖಂಡರು ಗುರುವಾರ ಅರಕ್ಷಕ ಉಪನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಭೋವಿ ವಡ್ಡರ ಸಮಾಜ ತಾಲೂಕು ಅಧ್ಯಕ್ಷ ಹಣಮಂತ.ಜೆ.ಚೌದ್ರಿ ಕಟ್ಟಿಮನಿ ಮಾತನಾಡಿ, ಚಿತ್ತಾಪುರ ಪಟ್ಟಣದ ನಾಸರಜಂಗ ಏರಿಯಾದ ದಿಗ್ಗಾಂವ ರಸ್ತೆಯಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರ ವಿರುವ ನಾಮಫಲಕವನ್ನು ಶ್ರೀ ಸಿದ್ದರಾಮೇಶ್ವರ ಜಯಂತಿಯಂದು ಹಾಕಲಾಗಿತ್ತು ಆದರೆ ಫೆ. 12 ರಾತ್ರಿ ಸಮಯದಲ್ಲಿ ರಾಮು ಭಜಂತ್ರಿ, ರಾಜು ಭಜಂತ್ರಿ, ಕೈಲಾಸ ಭಜಂತ್ರಿ, ಭರತ್ ಭಜಂತ್ರಿ, ಶಾಂತು ಭಜಂತ್ರಿ ಕಿಡಿಗೇಡಿಗಳು ಕೂಡಿಕೊಂಡು ನಮ್ಮ ಸಮಾಜದ ಧರ್ಮ ಗುರುಗಳಾದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರವಿರುವ ನಾಮಫಲಕವನ್ನು ತೆರವುಗೊಳಿಸಿರುತ್ತಾರೆ. ಇದರಿಂದ ಇಡಿ ನಮ್ಮ ಕುಲಕ್ಕೆ ಅಗೌರವ ತೋರಿದಂತಾಗಿರುತ್ತದೆ. ಸದರಿ ಕಿಡಿಗೇಡಿಗಳನ್ನು ಬಂದಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ಪವಾರ ಮಾತನಾಡಿ, ಸದರಿ ಸ್ಥಳದಲ್ಲಿ ಮೊದಲು ಯಾವ ರೀತಿ ಭಾವಚಿತ್ರ ಇರುವ ನಾಮಫಲಕ ಅಳವಡಿಸಲಾಗಿದೆ ಅದೇ ರೀತಿ ಸಿದ್ದರಾಮೇಶ್ವರ ಅವರ ಭಾವಚಿತ್ರ ಇರುವ ನಾಮಪಲಕವನ್ನು ಅಳವಡಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಭಾವಚಿತ್ರದ ನಾಮಫಲಕ ಕಿತ್ತು ಹಾಕಿದ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಈ ರೀತಿ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕ್ರೈಂ ಪಿಎಸ್ಐ ಚಂದ್ರಾಮಪ್ಪ ಮನವಿ ಪತ್ರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸಂತೋಷ್ ಚೌದರಿ, ಮುಖಂಡರಾದ ತಿಮ್ಮಯ್ಯ ಪವಾರ, ತಮ್ಮಣ್ಣ ಬೋಸಗಿ, ವಿಠಲ್ ಕಟ್ಟಿಮನಿ, ಸಂಜೀವಪ್ಪ ಕಲಬುರಗಿಕರ್, ರಾಜೇಶ್ ಕಾಶಿ, ವೆಂಕಟೇಶ್ ಹರವಾಳ, ಬಾಬು ಜೆಸಿಬಿ, ರಾಮು ಹರವಾಳ, ರೆವಣ ಕಾಶಿ, ಈರಣ್ಣ ವಗ್ರಾಣಿ, ಮಹೇಶ್ ಎನ್ ಕಾಶಿ, ಜಗನ್ ಕಾಶಿ ಸೇರಿದಂತೆ ಅನೇಕರು ಇದ್ದರು.