Oplus_0

ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ವತಿಯಿಂದ ಫೆ.15 ರಸಪ್ರಶ್ನೆ ಕಾರ್ಯಕ್ರಮ, ನೊಂದಣಿಗೆ ಫೆ.12 ಕೊನೆ ದಿನ: ಜೈಶೀಲಾ ಬಿರಾದಾರ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ತಾಲೂಕು ಘಟಕ ಚಿತ್ತಾಪುರ ವತಿಯಿಂದ ಚಿತ್ತಾಪುರ ಶೈಕ್ಷಣಿಕ ತಾಲೂಕು ವ್ಯಾಪ್ತಿಯ (ಕಾಳಗಿ, ಶಹಾಬಾದ್ ಹೊರತು ಪಡಿಸಿ) ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ 7 ನೇ, 8 ನೇ ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಆರು ವಿಷಯಗಳ ರಸಪ್ರಶ್ನೆ ಕಾರ್ಯಕ್ರಮವನ್ನು ಹಾಗೂ ಪಟ್ಟಣದ ಅಂಗನವಾಡಿ ವಿದ್ಯಾರ್ಥಿಗಳಿಗೆ ನೃತ್ಯ ಮತ್ತು ಅಭಿನಯ ಗೀತೆ ಸ್ಪರ್ಧೆಗಳನ್ನು ಫೆ.15 ರಂದು ಬೆಳಿಗ್ಗೆ 10.30 ಕ್ಕೆ ಪಟ್ಟಣದ ನಾಗಾವಿ ಕ್ಯಾಂಪಸ್ ನ ಆದರ್ಶ ಶಾಲೆಯಲ್ಲಿ  ಏರ್ಪಡಿಸಲಾಗಿದೆ ಎಂದು ತಾಲೂಕು ಅಧ್ಯಕ್ಷೆ  ಜೈಶೀಲಾ ಬಿರಾದಾರ ತಿಳಿಸಿದ್ದಾರೆ.

ಅದರಂತೆ ಫೆ.7 ರಿಂದ 12 ರವರಿಗೆ ವಿದ್ಯಾರ್ಥಿಗಳಿಗೆ ನೊಂದಣಿ ಕಾರ್ಯ ಗೂಗಲ್ ನಲ್ಲಿ ತುಂಬಲು ಅವಕಾಶವಿದೆ. ಪ್ರತಿಯೊಂದು ಶಾಲೆಯ ಮತ್ತು ತರಗತಿಯ ಒಬ್ಬ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದಕ್ಕೆ ಸಂಬಂಧಪಟ್ಟಂತೆ ಆದೇಶವನ್ನು ನೀಡಿರುತ್ತಾರೆ. ವಿದ್ಯಾರ್ಥಿಗಳ ಜ್ಞಾಪಕ ಶಕ್ತಿ ಮತ್ತು ಜ್ಞಾನರ್ಜನೆಗಾಗಿ ಸ್ಕೂಪ್ಸ್ ನ ಈ ಕಾರ್ಯ ಶ್ಲಾಘನಿಯವಾಗಿದೆ ಎಂದು ತಿಳಿಸಿದ್ದಾರೆ.

ಸ್ಕೂಪ್ಸ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಗುರುಪಾದ ಕೋಗನೂರ ರವರ ಯೋಜನೆ ಮತ್ತು ಮಾರ್ಗದರ್ಶನದಲ್ಲಿ ಸದರಿ ಕಾರ್ಯಕ್ರಮ ಮೂಡಿಬರಲಿದೆ ಎಂದು ತಾಲೂಕು ಅಧ್ಯಕ್ಷೆ  ಜೈಶೀಲಾ ಬಿರಾದಾರ ಮಾಹಿತಿ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!