Oplus_0

ನಾಳೆ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ  ವಾಹನಗಳನ್ನು ಸೂಚಿಸಿದ ಸ್ಥಳದಲ್ಲಿ ಪಾರ್ಕಿಂಗ್ ಮಾಡಿ ಪೊಲೀಸರಿಗೆ ಸಹಕರಿಸಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ (ಜಾತ್ರಾ ಮಹೋತ್ಸವ) ನಾಳೆ ಗುರುವಾರ ಇರುವುದರಿಂದ ದೂರ ದೂರದಿಂದ ಬರುವ ಭಕ್ತಾದಿಗಳಿಗೆ ತೊಂದರೆ ಆಗದಂತೆ ಪಾರ್ಕಿಂಗ್ ಸಮಸ್ಯೆ ಆಗದಂತೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳು ಕೈಗೊಳ್ಳಲಾಗಿದೆ, ಹೀಗಾಗಿ ನಿಗಧಿತ ಗೊತ್ತು ಮಾಡಿದ ಸ್ಥಳಗಳಲ್ಲಿಯೇ ವಾಹನಗಳು ಪಾರ್ಕಿಂಗ್ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಪಿಎಸ್ಐ ಶ್ರೀಶೈಲ್ ಅಂಬಾಟಿ ತಿಳಿಸಿದ್ದಾರೆ.

ನಾಗಾವಿ ಯಲ್ಲಮ್ಮ ದೇವಿಯ ಜಾತ್ರೆಗೆ ಬರುವ ಭಕ್ತಾದಿಗಳು ದಿಗ್ಗಾಂವ ಕ್ರಾಸ್ ದಿಂದ ನಾಗಾವಿ ಯಲ್ಲಮ್ಮ ದೇವಸ್ಥಾನದವರೆಗೆ ರಸ್ತೆಯ ಮೇಲೆ ವಾಹನಗಳನ್ನು ನಿಲ್ಲಿಸಬಾರದು. ಮತ್ತು ಭಕ್ತಾಧಿಗಳ ವಾಹನಗಳಿಗಾಗಿ ಪ್ರತ್ಯೇಕವಾಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ನಾಲ್ಕು ಚಕ್ರಗಳ ವಾಹನಗಳಿಗೆ ಸಂಜೀವಿನಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ, ಮತ್ತು ದ್ವಿ ಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ನಾಗಾವಿ ಎಜುಕೇಷನ್‌ ಹಬ್‌ ನಲ್ಲಿನ ಬಿ.ಸಿ.ಎಮ್ ಹಾಸ್ಟೇಲ್ ಮುಂದುಗಡೆ ಮಾಡಲಾಗಿದೆ, ತಮ್ಮ ವಾಹನಗಳನ್ನು ಸೂಚಿಸಿದ ಸ್ಥಳದಲ್ಲಿ ಪಾರ್ಕಿಂಗ್ ಮಾಡಿ ಪೊಲೀಸರಿಗೆ ಸಹಕರಿಸಬೇಕಾಗಿ ಎಂದು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!