ವಿದ್ಯಾರ್ಥಿಗಳಿಗೆ ಸುಲಭವಾಗಿ ಕಲಿಕೆಯ ಅರಿವು ಮೂಡಿಸುವುದು ಪ್ರತಿಯೊಬ್ಬ ಶಿಕ್ಷಕರ ಜವಬ್ದಾರಿ: ರುದ್ರಸ್ವಾಮಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದಲ್ಲಿ ಸಿಗುವ ಶಿಕ್ಷಣವು ಅವರ ಭವಿಷ್ಯದಲ್ಲಿ ಅತೀ ಮಹತ್ವದ್ದಾಗಿದ್ದು ಈ ಹಂತದಲ್ಲಿ ಮಕ್ಕಳಿಗೆ ಸುಲಭವಾಗಿ ಕಲಿಕೆಯ ಅರಿವು ಮೂಡಿಸುವುದು ಪ್ರತಿಯೊಬ್ಬ ಶಿಕ್ಷಕರ ಜವಬ್ದಾರಿಯಾಗಿದೆ ಎಂದು ತುಮಕೂರು ಸಿದ್ದಗಂಗಾ ಮಠದ ಶಿಕ್ಷಕ ರುದ್ರಸ್ವಾಮಿ ಹೇಳಿದರು.
ಪಟ್ಟಣದ ಎಕ್ಸಲೆಂಟ್ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಕಲಿಕೆಯ ಕುರಿತು ಬೋಧನೆಯನ್ನು ಮಾಡಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವು ಅತೀ ಪ್ರಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಇಂತಹ ಕಠಿಣ ಸವಾಲನ್ನು ಮಕ್ಕಳಿಗೆ ನಾವು ನೀಡುವ ಬೋಧನೆಯು ಪ್ರಮುಖ ಘಟ್ಟವಾಗಿದ್ದು ಅವರ ಭಾವನೆಗಳಿಗೆ ತಕ್ಕಂತೆ ಅವರಿಗೆ ಶಿಕ್ಷಣ ಹಸಿವನ್ನು ಅವರಿಗೆ ಉಣಬಡಿಸುವುದು ಅವಶ್ಯವಾಗಿದ್ದು ಈ ಹಂತದಲ್ಲಿ ನಾವು ಮಕ್ಕಳೊಂದಿಗೆ ಮಕ್ಕಳಾಗಿ ಬೋಧನೆಯನ್ನು ಮಾಡಿಸಬೇಕು ಎಂದರು.
ಶಾಲೆಯ ಮುಖ್ಯಗುರು ಬಸವರಾಜ ಬೊಮ್ಮನಳ್ಳಿ ಮಾತನಾಡಿ, ತುಮಕೂರು ಎಂದರೆ ನೆನಪಾಗುವದು ಡಾ. ಶಿವಕುಮಾರ ಸ್ವಾಮಿಜೀ ಅವರ ಶಿಕ್ಷಣ, ದಾಸೋಹ ಅಂತಹ ಸಂಸ್ಥೆಯ ಹೆಮ್ಮೆಯ ಶಿಕ್ಷಕರು ರುದ್ರಸ್ವಾಮಿ ಅವರು ಸಿದ್ದಗಂಗಾ ಮಠದಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಏಷ್ಯ ಖಂಡದಲ್ಲಿ ಅತ್ಯುತ್ತಮ ಶಿಕ್ಷಕರೆಂದು ಪ್ರಶಸ್ತಿ ಪಡೆದಿರುವುದಲ್ಲದೇ ಪ್ರಪಂಚದ ಸುಮಾರು 73 ದೇಶಗಳಲ್ಲಿ (ಅಮೇರಿಕಾ, ರಷ್ಯಾ, ಶ್ರೀಲಂಕಾ, ಬಾಂಗ್ಲಾದೇಶ, ಜಪಾನ್)ದಂತಹ ಮುಂದುವರೆದ ದೇಶಗಳಲ್ಲಿ ಜ್ಞಾನದಿಂದ ವಿದ್ಯಾರ್ಥಿಗಳಿಗೆ ಸುಲಭವಾಗಿ ಕಲಿಕೆಯ ಅರಿವು ಮೂಡಿಸುತ್ತಿರುವ ರುದ್ರಸ್ವಾಮಿಗಳು ನಮ್ಮ ಸಂಸ್ಥೆಗೆ ಆಗಮಿಸಿ ಮಕ್ಕಳಿಗೆ ಕಲಿಕೆಯ ಬೋಧನೆ ನೀಡಿರುವುದು ನಮ್ಮ ಸಂಸ್ಥೆಗೆ ತುಂಬಾ ಸಂತೊಷವಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಲೆಯ ಬೊದಕ ಶಿಕ್ಷಕರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.