Oplus_0

ತುಮಕೂರು ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಶರಣರ ಜೀವನ ದರ್ಶನ ಕೃತಿ ಲೋಕಾರ್ಪಣೆ

ನಾಗಾವಿ ಎಕ್ಸಪ್ರೆಸ್ ತುಮಕೂರು

ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ ಸಿದ್ಧಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಶರಣರ ಜೀವನದರ್ಶನ ಕೃತಿ ಲೋಕಾರ್ಪಣೆ ಮಾಡಿದರು.

2023 ರಲ್ಲಿ ಸಿದ್ದಗಂಗಾ ಕ್ಷೇತ್ರದಲ್ಲಿ ನಾನು ಮಾಡಿದ ಶರಣರ ಜೀವನ ದರ್ಶನ ಪ್ರವಚನ, ಕೇವಲ ಪ್ರವಚನ ಆಗಿ ಹೋಗದೆ ಅದನ್ನು ಗ್ರಂಥ ರೂಪದಲ್ಲಿ ಹೊರತಂದ ಸಂಪಾದಕ ಪ್ರಕಾಶ್ ಗಿರಿಮಲ್ಲರವರ ಕಾರ್ಯ ಶ್ಲಾಘನೀಯ ಎಂದು ಸೂಗೂರ ಶ್ರೀ ಡಾ. ಶ್ರೀ ಚನ್ನರುದ್ರಮುನಿ ಶಿವಾಚಾರ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೂಗೂರ ಶ್ರೀ ರುದ್ರಮುನೀಶ್ವರ ಸಂಸ್ಥಾನ ಹಿರೇಮಠ ಪೀಠಾಧಿಪತಿ ಡಾ. ಶ್ರೀ ಚನ್ನರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.ತುಮಕೂರು ಕಲಾವಿದರಾದ ಎಂ.ವಿ. ನಾಗಣ್ಣ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಉತ್ತರಾಧಿಕಾರಿ ಶ್ರೀ  ಶಿವಸಿದ್ಧೇಶ್ವರ ಸ್ವಾಮಿಗಳು, ಪ್ರಶಸ್ತಿ ಪುರಸ್ಕೃತ ಯಶವಂತಪುರ ಎ.ಪಿ.ಎಂ.ಸಿ. ಈರುಳ್ಳಿ ಮತ್ತು ಆಲೂಗೆಡ್ಡೆ ಸಗಟು ಮಾರಾಟಗಾರರು ಶಶಿಧರಮೂರ್ತಿ, ಸೇರಿದಂತೆ ಇತರರು ಉಪಸ್ಥಿತರಿದ್ದರು

ಇದೇ ಸಂದರ್ಭದಲ್ಲಿ ಶಿವಕುಮಾರ ಸ್ವಾಮೀಜಿ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ವೆ.ಚಿ. ಅರುಣ್ ಕುಮಾರ್ ಮತ್ತು ತಂಡ, ಬೆಂಗಳೂರು ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Spread the love

Leave a Reply

Your email address will not be published. Required fields are marked *

error: Content is protected !!