ವಸತಿ ಶಾಲೆಗಳಲ್ಲಿ ಸ್ವತಾಲೀಮ್ ಫೌಂಡೇಶನ್ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಿದೆ: ವಿಠೋಬಾ ಪತ್ತಾರ ಅಭಿಮತ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಶಾಲಾ ಶಿಕ್ಷಣ ಇಲಾಖೆಯಲ್ಲಿ ವಸತಿ ಶಾಲೆಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಈ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ನಿಲಯ ಪಾಲಕರು ಮುಖ್ಯಗುರುಗಳ ಪಾತ್ರ ಅತ್ಯಂತ ಪ್ರಶಂಸನೀಯವಾಗಿದೆ. ಅವರಲ್ಲಿ ಸ್ಫೂರ್ತಿ ತುಂಬುತ್ತಾ ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣ ತರಲು ಪ್ರಯತ್ನಿಸುತ್ತಿರುವ ಸ್ವತಾಲೀಮ್ ಫೌಂಡೇಶನ್ ಕೆಲಸ ಸಹಕಾರಿಯಾಗಿದೆ ಎಂದು ಕಲಬುರಗಿ ಉಪಸಮನ್ವಯಾಧಿಕಾರಿ ವಿಠೋಬಾ ಪತ್ತಾರ ಹೇಳಿದರು.
ಸರ್ವ ಶಿಕ್ಷಣ ಅಭಿಯಾನ ಹಾಗೂ ಸ್ವತಾಲೀಮ್ ಫೌಂಡೇಶನ್ ಸಹಯೋಗದೊಂದಿಗೆ ಕೆ.ಜಿ.ಬಿ.ವಿ ಮತ್ತು ಕೆ.ಕೆ.ಜಿ.ಬಿ.ವಿ ಶಾಲೆಯ ನಿಲಯ ಪಾಲಕರಿಗೆ ಮತ್ತು ಮುಖ್ಯಶಿಕ್ಷಕರಿಗೆ ಕಾರ್ಯಕ್ರಮದ ಕಿರು ನೋಟವನ್ನು ಬಿಂಬಿಸುವ ತರಬೇತಿಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದ ಅವರು, ಅವರೊಂದಿಗೆ ನಾವೆಲ್ಲರೂ ಕೈಜೋಡಿಸಿ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಒಟ್ಟು 40 ಕೆಜಿಬಿವಿ ಮತ್ತು ಕೆಕೆಜಿಬಿವಿ ಶಾಲೆಯ ಮುಖ್ಯ ಶಿಕ್ಷಕರು ಭಾಗಿಯಾಗಿ ಗುಂಪು ಚರ್ಚೆಯ ಮೂಲಕ ನಿಲಯ ಪಾಲಕರ ಕೆಲಸ ನಿರ್ವಹಣೆಯಲ್ಲಿ ಅವರ ಪಾತ್ರ ಮತ್ತು ಸ್ಪ ತಾಲೀಮ್ ಫೌಂಡೇಶನ್ ನ ಕಾರ್ಯಕ್ರಮದ ಉಪಯುಕ್ತತೆಯ ಬಗ್ಗೆ ಅವರ ಗ್ರಹಿಕೆಯನ್ನು ಹಂಚಿಕೊಂಡರು, ಬಾಲಕಿಯರು ಮತ್ತು ನಿಲಯ ಪಾಲಕರಲ್ಲಿ ಅವರು ಗಮನಿಸಿದ ಬದಲಾವಣೆಗಳಾದಂತಹ ಸ್ವಚ್ಚತೆ, ಇಂಗ್ಲೀಷ್ ಓದು ಮತ್ತು ಬರವಣಿಗೆಯಲ್ಲಾದ ಬೆಳವಣಿಗೆ ಹಾಗೂ ವರ್ತನೆಯಲ್ಲಾದ ಗಮನಾರ್ಹ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ಶೈಕ್ಷಣಿಕ ಸಂಬಂಧಿತ ಚಟುವಟಿಕೆಗಳಲ್ಲಿ ಬಾಲಕಿಯರೊಂದಿಗ ನಿಲಯ ಪಾಲಕರು ಹೆಚ್ಚು ತೊಡಗಿಸಿಕೊಂಡಿರುವುದಕ್ಕೆ ಅವರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.
ನಾಲ್ಕು ದಿನಗಳ ಕಾಲ ನಿಲಯಪಾಲಕರಿಗೆ 2ನೇ ಹಂತದ ತರಬೇತಿಯಲ್ಲಿ ಮುಂದಿನ 4 ತಿಂಗಳಲ್ಲಿ ಬಾಲಕಿಯರ ಇಂಗ್ಲೀಷ್ ಕಲಿಕೆಯನ್ನು ಇನ್ನಷ್ಟು ಬಲಪಡಿಸಲು ಅವಶ್ಯಕವಿರುವ ವಿಷಯಗಳನ್ನು ಜೀವನ ಕೌಶಲ್ಯದಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆ, ಗುರಿ ನಿರ್ಧರಣೆ, ರ್ಧರಣೆ, ಲಿಂಗತ್ವ ಸಂವೇದನೆ ಮತ್ತು ಸಾಮಾಜಿಕ ಜಾಗೃತಿಯ ಬಗ್ಗೆ ಚಟುವಟಿಕೆ, ಚರ್ಚೆ, ಪಾತ್ರಭಿನಯ ಮತ್ತು ಅವಲೋಕನಗಳ ಮೂಲಕ ಮಾಹಿತಿಯನ್ನು ನೀಡಲಾಯಿತು.
ಮುಖ್ಯವಾಗಿ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ಪ್ರಾಮುಖ್ಯತೆ ನೀಡಲಾಯಿತು. ತರಬೇತಿಯಲ್ಲಿ ಹಾಜರಾದ ಒಟ್ಟು 43 ನಿಲಯ ಪಾಲಕರಿಗೆ ಲ್ಯಾಪ್ ಟಾಪ್ ಗಳನ್ನು ನೀಡಿ ಅವನ್ನು ಪರಿಣಾಮಕಾರಿಯಾಗಿ ಬಾಲಕಿಯರ ಶಿಕ್ಷಣದಲ್ಲಿ ಬಳಸಿಕೊಳ್ಳಲು ಡಿಜಿಟಲ್ ಶಿಕ್ಷಣವನ್ನು ಪ್ರೋತ್ಸಾಹಿಸಲು ಈ ಲ್ಯಾಪ್ ಟ್ಯಾಪ್ ಗಳನ್ನು ಬಳಕೆ ಮಾಡುವಂತೆ ತರಬೇತಿ ನೀಡಲಾಯಿತು.
ತರಬೇತಿ ಕಾರ್ಯಕ್ರಮದಲ್ಲಿ ಸ್ವತಾಲೀಮ್ ನ ರಘುರಾಮನುಜಂ ಹಾಗೂ ಸದಸ್ಯರು ತರಬೇತಿ ನೀಡಿದರು. ಗೊಲ್ಲಾಳಪ್ಪ ಸಂಪನ್ಮೂಲ ವ್ಯಕ್ತಿ ಗೊಲ್ಲಾಳಪ್ಪ ಹಾಜರಿದ್ದರು.