Oplus_0

ವಿಜಯಪುರ ಅತೀ ಚಿಕ್ಕ ವಯಸ್ಸಿನ ಪೈಲಟ್ ಸಮೈರಾ ಅಮೀನ ಹುಲ್ಕೂರಗೆ ಸನ್ಮಾನ, ಮಕ್ಕಳಿಗೆ ಪಾಲಕರ ವಿಚಾರ ಹೇರದೇ ಅವರ ಪ್ರತಿಭೆಗೆ ಪ್ರೋತ್ಸಾಹಿಸಿದರೆ ಸಾಧನೆ ಸಾಧ್ಯ: ಕಂಚ್ಯಾಣಿ.

ನಾಗಾವಿ ಎಕ್ಸಪ್ರೆಸ್

ವಿಜಯಪುರ: ಪಾಲಕರಾದವರು ಮಕ್ಕಳ ಮೇಲೆ ತಮ್ಮ ವಿಚಾರವನ್ನು ಹೇರದೇ ಮಕ್ಕಳಲ್ಲಿಯ ಪ್ರತಿಭೆ ಗುರುತಿಸಿ ಅದಕ್ಕೆ ಪ್ರೋತ್ಸಾಹಿಸಿದರೆ ಮಕ್ಕಳ ಸಾಧನೆ ಸಾಧ್ಯ ಎಂದು ಹಿರಿಯ ಸಾಹಿತಿ ಜಂಬೂನಾಥ ಕಂಚ್ಯಾಣಿ ಅವರು ಹೇಳಿದರು.

ಅವರು ಭೃಂಗಿಮಠ ಕ್ರಿಯಾತ್ಮಕ ವೇದಿಕೆಯು ವಿವಿಧ ಸಾಹಿತಿ, ಸಂಘಟಕರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಅತೀ ಚಿಕ್ಕ ಪೈಲೆಟ್ ಎಂದು‌ ಖ್ಯಾತಯಾದ ಕುಮಾರಿ‌ ಸಮೈರಾ ಅಮೀನ ಹುಲ್ಲುರ ಅವರಿಗೆ ನಾಗರೀಕ ಸನ್ಮಾನ ಹಾಗೂ ಅಂತರ ರಾಷ್ಟ್ರೀಯ ವಿಮಾನ ದಿನಾಚರಣೆ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ‌ ಮಾತನಾಡಿದರು.

ವಿಜಯಪುರದ ಸಮೈರ ನಮ್ಮ ಕರ್ನಾಟಕದ‌ ಕೀರ್ತಿ ತಂದಿದ್ದಾಳೆ, ಇದು ಇಡೀ ರಾಜ್ಯದ ಜನತೆಗೆ ಹೆಮ್ಮೆ ತಂದ ಸಂಗತಿಯಾಗಿದೆ,ಮಕ್ಕಳು ಡಾಕ್ಟರ್, ಇಂಜೀನೀಯರ ಎಂದು ಇಲ್ಲೇ ಸುತ್ತುತ್ತಿರುವ ಜನರ ಮನೋಭಾವ ಬದಲಿಸಿ ಮಕ್ಕಳು ಏನು ಇಷ್ಟ ಪಡುತ್ತಾರೋ ಅವರ ಅಭಿರುಚಿ ಏನಿದೆ,ಅವರೊಳಗೆ ಯಾವ ಶಕ್ತಿ ಅಡಗಿದೆ ಎಂದು ಗುರುತಿಸಿ ಅವರಿಗೆ ಉತ್ತಮ ಶಿಕ್ಷಣ ಕೊಟ್ಟಾಗ ಅಂತಹ ಮಕ್ಕಳು ಗುರಿ ತಲುಪಿ ತಂದೆ ತಾಯಿ ಅಜ್ಜ ಅಜ್ಜಿ, ಊರಿನ‌ ಕೀರ್ತಿ ತರುತ್ತಾರೆ, ಬೀಜೀ ಜೀವನದಿಂದಾಗಿ ಅದೆಷ್ಟೊ ಜನ ಪಾಲಕರು ಮಕ್ಕಳ ಕಡೆ ಗಮನ ಹರಿಸದೇ ಇರುವುದು ಸಹ ವಿಪರ್ಯಾಸ ಎಂದರು. ಈ ಬೀಜೀ ಜೀವನದ ನಡುವೆ ಸಮೈರಾಳ ಸಾಧನೆ ವಿಜಯಪುರದ ಇತಿಹಾಸಕ್ಕೆ ಮತ್ತೆ ಇತಿಹಾಸ ಸೃಷ್ಠಿಸಿದಂತೆ ಆಯಿತು ಎಂದರು.

ಹಿರಿಯ ಸಮಾಜಿಕ ಹೋರಾಟಗಾರ ಪೀಟರ್ ಅಲೆಗ್ಝಾಂಡರ್ ಅವರು ಮಾತನಾಡಿ, ಸಮೈರಾ ಅವಳ ಶ್ರಮ‌ ಸ್ವತ ನಾನು ನೋಡಿದ್ದೇನೆ, ವಿಶೇಷವಾಗಿ ಅವಳ ತಂದೆ ತಾಯಿ ಅವಳಿಗಾಗಿ ಪಟ್ಟ್ ಶ್ರಮ ಅಷ್ಟಿಸ್ಟಲ್ಲ , ಬಹಳ ಯತ್ಮ‌ಮಾಡಿ ಸಮೈರಾಳಿಗೆ ಖರ್ಚು‌ ಮಾಡಿ‌‌ ಪೈಲಾಟ್ ಕೋರ್ಸ್ ಕಲಿಸಿದ್ದು ನಿಜವಾಗಿಯೂ ಶ್ಲಾಘನೀಯ ಸಂಗತಿಯಾಗಿದೆ, ಮಕ್ಕಳ ಸಾಧನೆಯಲ್ಲಿ ಪಾಲಕರ, ಪೋಷಕರ ಪಾತ್ರ ಬಹುಮಹತ್ವದ್ದಾಗಿದೆ. ನಾವು ಮಕ್ಕಳಿಗೆ ಓದಿಗೆ ಮುಕ್ತ ಅವಕಾಶ ಕಲ್ಪಿಸಬೇಕು ಅಂತಹ ಶಿಕ್ಷಣ ವ್ಯವಸ್ಥೆ ಇಂದು‌ ಅಗತ್ಯ ಎಂದ ಅವರು ವಿಜಯಪುರ ವಿಮಾನ ನಿಲ್ದಾಣ ಯಾವಾಗ ಆರಂಭಿಸುತ್ತಾರೋ ಗೊತ್ತಿಲ್ಲ, ಸರಕಾರ ಈ ಬಗ್ಗೆ ವಿಶೇಷ ಕಾಳಜಿವಹಿಸಿ ವಿಜಯಪುರಕ್ಕೆ ಬರುವ ಪ್ರಥಮ ವಿಮಾನವನ್ನು ವಿಜಯಪುರದ ಸಮೈರಾ ಹಾರಿಸುವಂತಾಗಲಿ ಎಂದು ಆಶಿಸಿದರು.

ಕವಯತ್ರಿ ಸಾಹಿತಿ ಸುಜಾತಾ ಚಲವಾದಿ ಮಾತನಾಡಿ, ಬಾಲಕಿಯ ಸಾಧನೆ ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾಧಿಸಿ ತೋರಿಸಿದ ಒಂದು‌ ಮಾದರಿಯಾಗಿದೆ, ಮಹಿಳೆಯರು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದು‌ ಇವಳ ಸಾಧನೆಯಿಂದ ಮತ್ತೆ ಸಾಭೀತಾಗಿದೆ, ಲಿಂಗಭೇಧ, ಜಾತಿ ಧರ್ಮ ಮರೆತು ನೀಡುವ ಶಿಕ್ಷಣದಿಂದ ಉತ್ತಮ ಸಾಧನೆ ಸಾಧ್ಯ ಎಂದರು.

ವಕೀಲರಾದ ದಾನೇಶ ಅವಟಿ ಮಾತನಾಡಿ, ನಮ್ಮೆದುರೇ ಆಟವಾಡಿಕೊಂಡು ಇರುತ್ತಿದ್ದ ಸಮೈರಾ ಸಾಧನೆ ನೋಡಿ ಖುಷಿಯಾಗಿದೆ, ಮಕ್ಕಳು ಯಾರೇ ಇರಲಿ ಅವರ ಪ್ರತಿಭೆಗೆ ಗುರಿತಿಸುವುದು, ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ, ನಮ್ಮ ವಿಜಯಪುರದ ಈ ಯುವತಿಯ ಸಾಧನೆ ನಮಗೆ ಹೆಮ್ಮ ತರುವ ಸಂಗತಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ವರ ಪರ ಸನ್ಮಾನಿಸಿದ ಹಿರಿಯ ವಕೀಲರಾದ ಮಲ್ಲಿಕಾರ್ಜುನ ಗದಗಯ್ಯ ಭೃಂಗಿಮಠ ಮಾತನಾಡಿ, ಸಾಧಕರಿಗೆ ಗುರುತಿಸಿ ಪ್ರೋತ್ಸಾಹಿಸಲು ಸನ್ಮಾನಗಳು ಪೂರಕವಾಗುತ್ತವೆ, ಇನ್ನಷ್ಟು ಎತ್ತರದ ಸಾಧನೆಯ ಶಿಖರವೇರಲು ಪ್ರೇರಣೆಯಾಗುತ್ತವೆ, ನಮ್ಮ ಸುತ್ತಲಿನ ಯಾರೇ ಸಾಧನೆಗೈದರೆ ಅವರಿಗೆ ಸತ್ಕರಿಸಿ, ಸನ್ಮಾನಿಸಿ ಗೌರವಿಸುವ ಸಂಸ್ಕಾರ ಅಗತ್ಯವಿದೆ. ಸನ್ಮಾನಗಳಿಂದ ಸಾಧಕರಿಗೆ ಮತ್ತಷ್ಟು ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ, ಸಮೈರಾ ಅಮೀನ ಹುಲ್ಲೂರು ಇವರ ಸಾಧನೆ ವಿಜಯಪುರದ ವಿಮಾನ ಕ್ಷೇತ್ರಕ್ಕೆ ಮರೆಯಲಾಗದ ಸಾಧನೆಯಾಗಿದೆ ಎಂದು ಬಣ್ಣಿಸಿದರು.

ಸಮೈರಾಳ ಅಜ್ಜ ಇಮಾಮ ಹುಸೇನ ಹುಲ್ಕೂರು  ಮಾತನಾಡಿ, ಸಮೈರಾಳ ಸಾಧನೆ ಇಡೀ ದೇಶದ ಸಾಧನೆಯಾಗಿದೆ, ಇದರಿಂದ ನಮ್ಮ ಖುಷಿ ಉತ್ಸಾಹ ಮುಗಿಲು‌ ಮುಟ್ಟಿದೆ ಎಂದು ತಿಳಿಸಿದರು

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಜಿ.ಬಿರಾದಾರ, ಕಾರ್ಯದರ್ಶಿ ಸುರೇಶ ಚೂರಿ, ಶ್ರೀ ಹವಲ್ದಾರ ಮುಂತಾದವರು ಮಾತನಾಡಿದರು. ಸಮೈರಾಳ ಅಜ್ಜಿ ಶ್ರೀಮತಿ ನೂರಜಾನ್ ಹುಲ್ಲೂರು , ಸಮೈರಾಳ ತಾಯಿ ನಾಝಿಯಾ ಹುಲ್ಲೂರು , ಬಸೀರಾ ದೇಸಾಯಿ ವೇದಿಕೆಯ ಮೇಲಿದ್ದರು. ಕಾರ್ಯಕ್ರಮದಲ್ಲಿ ಮಾಯೊಪ್ಪ ಲೋಕಂಡೆ, ರಾಮು ಪವಾರ್, ಸುಭಾಸ್ ಪವಾರ್, ಅಮೀನ ಹುಲ್ಲೂರು, ಮುಂತಾದವರು ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!