ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣೇಶ ಉತ್ಸವ | ಗಣೇಶ ಮೆರವಣಿಗೆ, ವಿಸರ್ಜನೆ ಸಮಯದಲ್ಲಿ ಯುವಕರು ಜಾಗ್ರತೆ ವಹಿಸಿ: ಭಂಕಲಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗಣೇಶ ಮೆರವಣಿಗೆ ಹಾಗೂ ವಿಸರ್ಜನೆ ಸಮಯದಲ್ಲಿ ಯುವಕರು ಜಾಗ್ರತೆ ವಹಿಸಬೇಕು ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಕಿವಿಮಾತು ಹೇಳಿದರು.
ಸಂತೋಷ ನಗರದ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣೇಶ್ ಉತ್ಸವದ ನಿಮಿತ್ತ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕೆಲ ಕಡೆ ಗಣೇಶ ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಪ್ರಾಣಾಪಾಯದ ಅವಘಡ ಸಂಭವಿಸಿದೆ, ಹೀಗಾಗಿ ಯುವಕರು ಮೆರವಣಿಗೆ ಹಾಗೂ ನದಿಯಲ್ಲಿ ಬಾವಿಯಲ್ಲಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕು ಎಂದು ಒತ್ತಿ ಹೇಳಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಮಾತನಾಡಿ, ಗಣೇಶ ಚತುರ್ಥಿ ಎಲ್ಲರನ್ನೂ ಒಂದು ಗೂಡಿಸುವ ಹಬ್ಬವಾಗಿದೆ ಎಲ್ಲರೂ ಸಂಭ್ರಮ ಪಡುವ ಐಕ್ಯತೆ ಮೂಡಿಸುವ ಹಬ್ಬವಾಗಿದೆ ಎಂದರು. ಗಣೇಶ ಮೆರವಣಿಗೆಯಲ್ಲಿ ಯುವಕರು ಜಾಗ್ರತೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿ, ಗಣೇಶ ಉತ್ಸವ ನಿಮಿತ್ತ ಉಚಿತ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿದ್ದ ಡಾ.ಸಂತೋಷ ಎಲ್ಹೇರಿ ಅವರ ಸಾಮಾಜಿಕ ಸೇವೆ ಅಮೋಘವಾಗಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಡಾ.ಸಂತೋಷ ಎಲ್ಹೇರಿ, ಬಸವರಾಜ ರಾಜೋಳ್ಳಿ, ಪತ್ರಕರ್ತರಾದ ಚಂದ್ರಶೇಖರ ಬಳ್ಳಾ, ರವಿಶಂಕರ ಬುರ್ಲಿ, ಕಾಂಗ್ರೆಸ್ ಮುಖಂಡರಾದ ಶರಣಪ್ಪ ನಾಟೀಕಾರ, ನಾಗಪ್ಪ ಕಲ್ಲಕ್, ಮಲ್ಲಿಕಾರ್ಜುನ ಮುಡಬೂಳಕರ್ ವೇದಿಕೆಯಲ್ಲಿ ಇದ್ದರು.
ಶ್ವೇತಾ ರಾಜೋಳ್ಳಿ, ಆಶಾ ಗುತ್ತೇದಾರ, ಶಿವುಕುಮಾರ ನಾಟೀಕಾರ, ಮಲ್ಲಿಕಾರ್ಜುನ ಅಲ್ಲೂರ, ದತ್ತು ಗುತ್ತೇದಾರ, ದುರ್ಗಾ ಪ್ರಸಾದ್, ಸುರೇಶ್ ಯಾದಗಿರಿಕರ್, ಬಸ್ಸು ದಿಗ್ಗಾಂವ, ಆನಂದ ರಾಜೋಳ್ಳಿ, ಚಂದ್ರಶೇಖರ ನಾಟೀಕಾರ, ಲಕ್ಷ್ಮೀಕಾಂತ ರಾಜೋಳ್ಳಿ ಸೇರಿದಂತೆ ಇತರರು ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪೂಜಾ ನಾಟೀಕಾರ ವಿಜೇತರ ಪಟ್ಟಿ ವಾಚಿಸಿದರು, ರುದ್ರಪ್ಪ ತಾವರೆ ನಿರೂಪಿಸಿದರು.

