ವಾಡಿ ಡಾ.ಬಾಬು ಜಗಜೀವನ ರಾಮ್ ಅವರ 119ನೇ ಜಯಂತ್ಯೋತ್ಸವ ಸಮಿತಿ ರಚನೆ, ಅಧ್ಯಕ್ಷರಾಗಿ ಶರಣು ಮರತೂರ ಆಯ್ಕೆ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಮಾದಿಗ ಸಮಾಜದ ಅಧ್ಯಕ್ಷ ರಾಜು ಮುಕ್ಕಣ್ಣ ಹಾಗೂ ಸಮುದಾಯದ ಹಿರಿಯ ಮುಖಂಡರ ನೇತೃತ್ವದಲ್ಲಿ ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತ್ಯೋತ್ಸವ ಸಮಿತಿಯನ್ನು ರಚಿಸಲಾಯಿತು.
ನೂತನ ಪದಾಧಿಕಾರಿಗಳು:
ಗೌರವಾಧ್ಯಕ್ಷರಾಗಿ ಚಂದಪ್ಪ ಕಟ್ಟಿಮನಿ, ಅಧ್ಯಕ್ಷರಾಗಿ ಶರಣು ಮರತೂರ, ಕಾರ್ಯಾಧ್ಯಕ್ಷರಾಗಿ ಕುಮಾರ ರಾಮಚಂದರ್ ದಾಸ್, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಮುಕ್ಕನಾಳ, ಖಜಾಂಚಿಯಾಗಿ ಅನಿಲ್ ಮುದ್ನಾಳ, ಉಪಾಧ್ಯಕ್ಷರಾಗಿ ರಾಜು ರಾಮಪುರಹಳ್ಳಿ, ಸಿದ್ದಾರ್ಥ್ ಜಂಗಮ್, ಶಶಿ ಅರೋಲಿಕರ್, ಶಿವಕುಮಾರ ತುಮಕೂರಕರ್, ಸಹ ಕಾರ್ಯದರ್ಶಿಗಳಾಗಿ ವಿಜಯಕುಮಾರ ಯಲಗಟ್ಟಿ, ಮಲ್ಲಿಕಾರ್ಜುನ ಚಾಮನಳ್ಳಿ, ಈಶ್ವರ ಹೊಸಮನಿ, ಚಂದು ಕಾಂಬಳೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ನಂತರ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

