ವಾಡಿ ಬಿಜೆಪಿ ಕಛೇರಿಯಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 115 ನೇ ಮನ್ ಕೀ ಬಾತ್ ಕಾರ್ಯಕ್ರಮವನ್ನು ಬಿಜೆಪಿ ಮುಖಂಡರು ವೀಕ್ಷಿಸಿದರು.
ಈ ಸಂಚಿಕೆಯನ್ನು ವಿಕ್ಷೀಸಿದ ನಂತರ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ವಿವಿಧ ವಿಷಯಗಳ ಬಗ್ಗೆ ಮೋದಿಜಿ ದೇಶವಾಸಿಗಳಿಗೆ ಜಾಗೃತಿ ಮೂಡಿಸಿದ್ದಾರೆ, ಅನಿಮೇಷನ್ನಲ್ಲಿ ಭಾರತದ ಸ್ವಾವಲಂಬನೆ, ಸೈಬರ್ ಕೈಂ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮೋದಿಜಿ ಮಾತನಾಡಿದನ್ನು ಅದರಲ್ಲಿ ವಿಶೇಷವಾಗಿ ನಮ್ಮ ಕರ್ನಾಟಕದ ವಿಜಯಪುರ ಜಿಲ್ಲೆಯ ಯುವಕನನ್ನು ಪ್ರಸ್ತಾಪಿಸಿ ಮಾತನಾಡಿದ್ದು ಅವರಿಗಿದ್ದ ಜನಸಾಮಾನ್ಯರ ಕಾಳಜಿ ತೋರಿಸುತ್ತದೆ.
ವಿಡಿಯೋ ಕಾಲ್ ಮೂಲಕ ಪೊಲೀಸ್ ತನಿಖೆ ನೆಪ ಅಥವಾ ಡಿಜಿಟಲ್ ಅರೆಸ್ಟ್ ಮಾಡುವ ವಂಚನೆಯ ಬಗ್ಗೆ ಮೋದಿ ಜಾಗೃತಿ ಮೂಡಿಸಿದ್ದಾರೆ. ಇದಕ್ಕೆ ದೇಶದಲ್ಲೇ ಸುದ್ದಿ ಮಾಡಿದ್ದ ನಮ್ಮ ರಾಜ್ಯದ ವಿಜಯಪುರದ ಸಂತೋಷ್ ಚೌದರಿ ಪ್ರಕರಣವನ್ನು ಉದಾಹರಣೆಗೆ ತೆಗೆದುಕೊಂಡಿದ್ದಾರೆ.
ಸೈಬರ್ ವಂಚನೆ ಹೊಸ ರೂಪ ಪಡೆದುಕೊಂಡಿದೆ. ಪೊಲೀಸ್, ಸಿಬಿಐ, ಇಡಿ ನೆಪದಲ್ಲಿ ಕರೆ ಮಾಡುತ್ತಾರೆ. ಇದಕ್ಕೆ ಡಿಜಿಟಲ್ ಅರೆಸ್ಟ್ ಅಂತಾರೆ. ಡಿಜಿಟಲ್ ಅರೆಸ್ಟ್ ಮೂಲಕ ವಂಚನೆ ಮಾಡಲಾಗುತ್ತಿದೆ. ನಿಮ್ಮ ಬಗ್ಗೆ ಮಾಹಿತಿ ಕಲೆ ಹಾಕಿ ಬಹಳಷ್ಟು ಕಾನ್ಫಡೆನ್ಸ್ ಮೂಲಕ ಮಾತನಾಡುವ ವಂಚಕರು ಭಯದ ವಾತಾವರಣ ನಿರ್ಮಾಣ ಮಾಡಿ, ನಿಮ್ಮನ್ನು ಹೆದರಿಸುತ್ತಾರೆ. ಸಮಯದ ಒತ್ತಡ ಹಾಕಿ ಬಂಧನದ ಆತಂಕ ನಿರ್ಮಿಸುತ್ತಾರೆ. ಡಿಜಿಟಲ್ ಅರೆಸ್ಟ್ ವಂಚನೆಗೆ ಎಲ್ಲ ವಯಸ್ಸಿನ ಜನರು ಬಲಿಯಾಗುತ್ತಿದ್ದಾರೆ. ತಮ್ಮ ದುಡಿಮೆ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಕಾಲ್ ಬಂದರೆ ಆತಂಕಗೊಳ್ಳದೇ ನಿಮ್ಮ ಯಾವುದೇ ಮಾಹಿತಿ ನೀಡಬೇಡಿ ಎಂದು ದೇಶದ ಜನರಿಗೆ ತಿಳಿಸಿದ್ದಾರೆ ಇಂತಹ ಅನೇಕ ವಿಷಯಗಳ ಬಗ್ಗೆ ಮಾತನಾಡಿ ನಮ್ಮನ್ನು ಎಲ್ಲಾ ರೀತಿಯಿಂದ ರಕ್ಷಿಸಿ, ನಮ್ಮ ದೇಶದ ಸ್ವಾಭಿಮಾನವನ್ನು ಎತ್ತಿಹಿಡಿಯುವಂತ ಕಾರ್ಯದಲ್ಲಿ ನಿರತರಾಗಿರುವುದು ನಮಗೆಲ್ಲ ಹೆಮ್ಮೆ ಅನಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ವಿಠಲ್ ವಾಲ್ಮೀಕ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಅಯ್ಯಣ್ಣ ದಂಡೋತಿ, ಶಕೀಲ ಪಟೇಲ್,ಇಲಿಯಾಸ್ ಪಟೇಲ್, ಆನಂದ ಶಿರವಾಳ, ಮಂಜುನಾಥ ಸ್ವಾಮಿ ಸೇರಿದಂತೆ ಇತರರು ಇದ್ದರು.