ವಾಡಿ ಪುರಸಭೆಯಲ್ಲಿ ಕಸದ ಬುಟ್ಟಿಯಲ್ಲಿ ಗೊಲಮಾಲ್, ತನಿಖೆ ಕೈಗೊಂಡು ಸೂಕ್ತ ಕ್ರಮಕ್ಕೆ ಬಿಜೆಪಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಪುರಸಭೆಯ ಕಸದ ಬುಟ್ಟಿ ಖರೀದಿಯಲ್ಲಿನ ಲಕ್ಷಾಂತರ ರೂಪಾಯಿಗಳ ಗೂಲಮಾಲ್ ಮಾಡಿ ವಿತರಣೆಯಲ್ಲೂ ತಾರತಮ್ಯ ಮಾಡಿದೆ ಇದರ ಬಗ್ಗೆ ತನಿಖೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಪಟ್ಟಣದಲ್ಲಿ 2020-21ನೇ ಸಾಲಿನ 15ನೇ ಹಣಕಾಸಿನಲ್ಲಿ ಮಂಜೂರಾದ ಕಸದ ಬುಟ್ಟಿಗಳನ್ನು ಈ 2024-25ರಲ್ಲಿ ಅದನ್ನು ಕೆಲವೊಂದು ವಾರ್ಡ್ ಗಳಲ್ಲಿ ಬೇಕಾಬಿಟ್ಟಿಯಾಗಿ ವಿತರಣೆ ಮಾಡಿ ಅದರ ಅಂಕಿ ಅಂಶಗಳನ್ನು ಸಹ ಸಮರ್ಪಕವಾಗಿ ನೊಂದಾಯಿಸದೆ ಇಲ್ಲಿನ ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದಾರೆ.
ವಾರ್ಡ್ ಸಂಖ್ಯೆ 23, 21, 22, 09, 10, 04, 01, 02 ರಲ್ಲಿ ಇನ್ನೂ ಹಂಚಿಕೆಯಾಗಿಲ್ಲ,ಇದರ ಹಂಚಿಕೆಯನ್ನು ಈ ಸಾಲಿನ ಟೆಂಡರ್ ನಲ್ಲಿ ಮಾರ್ಪಡಿಸಿ ಲಕ್ಷಾಂತರ ರೂಪಾಯಿನ್ನು ಕಸದ ಬುಟ್ಟಿಯ ಹೆಸರಿನಲ್ಲಿ ಲಪಟಾಯಿಸುವ ಯೋಜನೆ ಹಾಕಿಕೊಂಡಿರುವ ಮಾಹಿತಿ ಬಂದಿದೆ, ಬಡ ಅಂಗವಿಕಲರಿಗಾಗಿ ಬಂದಿರುವ ಲಕ್ಷಾಂತರ ರೂಪಾಯಿಗಳ ಎಂಟು ಹತ್ತು ತ್ರಿಚಕ್ರ ವಾಹನಗಳು ಕೂಡಾ ವಿತರಣೆ ಮಾಡದೆ ಹಾಗೆ ಕೊಳೆಯುತ್ತಿವೆ ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಒಂದು ವರ್ಷದ ಹಿಂದೆಯೇ ಇಲ್ಲಿನ ಅವ್ಯವಹಾರದ ಸಂಪೂರ್ಣ ಮಾಹಿತಿ ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಮೇಲಾಧಿಕಾರಿಗಳು ಸಹ ಇದರಲ್ಲಿ ಶಾಮೀಲಾಗಿರುವ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದ್ದಾರೆ
ಇದನ್ನು ಈಗಲಾದರೂ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇಲ್ಲದೇ ಹೋದರೆ ನಾವು ಸಾರ್ವಜನಿಕ ಸಂಪತ್ತಿನ ರಕ್ಷಣೆಗಾಗಿ ಕೆಲವೇ ದಿನಗಳಲ್ಲಿ ಪುರಸಭೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪತ್ರದ ಮೂಲಕ ಎಚ್ಚರಿಸಿದ್ದಾರೆ.