ವಾಡಿ ಗೇಟ್ ಹತ್ತಿರ ರೈಲ್ವೆ ಹಳಿಗಳ ದುರಸ್ತಿ ಕಾರ್ಯ ಆರಂಭ, ಇಂದು, ನಾಳೆ ರೈಲ್ವೆ ಗೇಟ್ ಬಂದ್: ಸಂಚಾರ ಸ್ಥಗಿತ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣ ಸಮೀಪದ ನವೀನ್ ಪೆಟ್ರೋಲ್ ಪಂಪ್ ಹತ್ತಿರ ಇರುವ ರೈಲ್ವೆ ಹಳಿಗಳ ದುರಸ್ತಿ ಕಾರ್ಯ ಆರಂಭವಾಗಿದೆ. ಇದರಿಂದ ಇಂದು ಮತ್ತು ನಾಳೆ ವರೆಗೆ ರೈಲ್ವೆ ಗೇಟ್ ಬಂದ್ ಮಾಡಿ ರೈಲ್ವೆ ಹಳಿಗಳ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಪ್ರಯಾಣಿಕರು ಸಹಕರಿಸಲು ಸೆಂಟ್ರಲ್ ರೈಲ್ವೆ ವಾಡಿ ಕ್ಲಸ್ಟರ್ ಅಧಿಕಾರಿ ಉಪೇಂದ್ರ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಿಂದ ಬರುವ ವಾಹನಗಳು ವಾಡಿ ಪಟ್ಟಣದ ಹೃದಯ ಭಾಗದಿಂದ ಹಾದು ಕಲಬುರಗಿ ಜಿಲ್ಲೆಗೆ ಇದೇ ಮಾರ್ಗದಿಂದ ಭಾರಿ ಪ್ರಮಾಣದಲ್ಲಿ ಸಂಚಾರಿಸುತ್ತವೆ. ಹಾಗಾಗಿ ಯಾದಗಿರಿ ಹೆದ್ದಾರಿಯಿಂದ ಬರುವ ವಾಹನಗಳು ಪಟ್ಟಣದ ಹೊರವಲಯದ ಬಳಿರಾಮ್ ಚೌಕ್ ಬೈಪಾಸ್ ರಸ್ತೆ ಮೂಲಕ ಸಂಚಾರಿಸಬೇಕು ಎಂದು ತಿಳಿಸಲಾಗಿದೆ.