ವಾಡಿ ಕಂದಾಯ ನಿರೀಕ್ಷಕ ಅಂಬೇಕರ್ ವರ್ಗಾವಣೆಗೆ ಒತ್ತಾಯ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದಲ್ಲಿರುವ ಖಾತಾ ನಕಲು ಮುಟೇಶನ ಮಾಡಿಕೊಳ್ಳಲು ವಿಳಂಬ ಮಾಡುತ್ತಿರುವ ಕಂದಾಯ ನಿರೀಕ್ಷಕ ಈಶ್ವರ ಅಂಬೇಕರ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸದರಿ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಶ್ರೀರಾಮ್ ರಾಠೋಡ ವಾಡಿ ಒತ್ತಾಯಿಸಿದ್ದಾರೆ.
ವಾಡಿ ಪಟ್ಟಣದ ಮನೆಗಳನ್ನು ಮುಟೇಶನ ಹಾಗೂ ಖಾತಾ ನಕಲು ನೀಡಲು ತಮ್ಮ ಪುರಸಭೆ ಇಲಾಖೆಯ ಅಧಿಕಾರಿಗಳ ಕಾಲಹರಣ ಮಾಡುತ್ತಾ ಸುಮಾರು 5-6 ತಿಂಗಳಿಂದ ಖಾತಾ ನಕಲು ನೀಡುತ್ತಿಲ್ಲಾ, ಹಾಗೂ 01 ವರ್ಷಗಳಿಂದ ಮುಟೇಶನ ಸಹ ಮಾಡುತ್ತಿಲ್ಲಾ ಕೇಳಲು ಹೋದರೆ ಸರ್ವರ ಇರುವುದಿಲ್ಲ, ಅದು ಇದು ಇಲ್ಲ ಎಂದು ಹೇಳುತ್ತಾ, ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಮೇಲಾಗಿ ಕಡುಬಡವರಿಗೆ ಸಹ ಸತಾಯಿಸುತ್ತಾ ಇದ್ದಾನೆ. ಇದರಿಂದ ಮನೆಯ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಬಹಳ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಮೇಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರೂ ಇದುವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಈಗಾಗಲೇ ಸಚಿವರಿಗೆ ಸಹ ದೂರು ನೀಡಲಾಗಿದೆ. ಅದರೂ ಕೂಡ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಆದ್ದರಿಂದ ಇವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸೇಡಂ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.