Oplus_0

ಬಸವ ಮಹೋತ್ಸವ, ಐವರು ಸಾಧಕರಿಗೆ ಬಸವ ಶ್ರೀ ಪ್ರಶಸ್ತಿ ಪ್ರಧಾನ | ಗುಣಮಟ್ಟ ಶಿಕ್ಷಣ ನೀಡುತ್ತಿರುವ ಬಸವ ಶಿಕ್ಷಣ ಸಂಸ್ಥೆಯ ಸೇವೆ ಇತರರಿಗೆ ಮಾದರಿ: ಹೇರೂರು 

ನಾಗಾವಿ ಎಕ್ಸಪ್ರೆಸ್ 

ವಾಡಿ: ದೇಶದಲ್ಲಿ ಶಿಕ್ಷಣ ವ್ಯಾಪಾರಿಕರಣವಾಗಿದೆ. ಬಡ ಮಕ್ಕಳಿಗೆ ಶಿಕ್ಷಣ ಗಗನ ಕುಸುಮಾಗಿದೆ. ಆದರೆ ಇಲ್ಲಿನ ಬಸವ ಶಿಕ್ಷಣ ಸಂಸ್ಥೆ ಬಡ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುತ್ತಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಬಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಮಡಿವಾಳಪ್ಪ ಹೇರೂರು ಹೇಳಿದರು.

ಪಟ್ಟಣದ ಬಲರಾಮ ಚೌಕ್ ಶ್ರೀ ಬಸವ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಶ್ರೀ ಬಸವ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಹಾಗೂ ಬಸವ ಮಹೋತ್ಸವ ಸಮಾರಂಭದಲ್ಲಿ ಬಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಗಣಿ, ಕಂಪನಿ ಕಾರ್ಮಿಕರು ಇರುವ ಪ್ರದೇಶದಲ್ಲಿ ಕಾರ್ಮಿಕರ ಬಡ ಮಕ್ಕಳಿಗೆ ಗುಣಮಟ್ಟ ಮೌಲ್ಯಾಧಾರಿತ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿದ್ದಾರೆ. ಮಕ್ಕಳಿಗೆ ಸಮಾನತೆಯ ಸಂಸ್ಕಾರ ನೀಡಲಾಗುತ್ತಿದೆ. ಹೆಣ್ಣು, ಗಂಡು ತಾರತಮ್ಯ ಮಾಡದೇ, ಬಸವಣ್ಣನ ಸಾಮಾಜಿಕ ಕ್ರಾಂತಿ ಸಂಸ್ಥೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಹೀಗೆ ಬಸವಣ್ಣನ ವಿಚಾರಧಾರೆಯ ಮೇಲೆ ಶಾಲೆ ಸಾಗಲಿ ಎಂದು ಹಾರೈಸಿದರು.

ಶೈಕ್ಷಣಿಕ ಕಲಿಕಾ ಕ್ಷೇತ್ರದ ಪ್ರಶಸ್ತಿಗೆ ಭಾಜನರಾದ ಡಾ.ಜ್ಯೋತಿ ಆರ್.ತೆಗನೂರ ಮಾತನಾಡಿ, ಶಿಕ್ಷಣ ಒಂದು ವೆಪನ್ ಇದ್ದಂತೆ. ಮಕ್ಕಳ ಓದಿನ ಕಡೆ ಪಾಲಕರು ಗಮನ ಹರಿಸಿ. ಪ್ರತಿದಿನ ಮಕ್ಕಳ ಕಲಿಕಾ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.

ಚಿತ್ತಾಪುರ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಹಾಗೂ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಬಸವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ ಪಾಟೀಲ, ಸ್ವಾಮಿ ನಾರಾಯಣ ಡೆವಲಪರ್ಸ್ ನಿರ್ದೇಶಕ ವಿಜಯ ರಾಠೋಡ, ಭಾರತೀಯ ಆರ್ಕಿಟೆಕ್ಟ್ ಸಂಸ್ಥೆಯ ಖಜಾಂಚಿ ರವೀಂದ್ರ ತೆಗನೂರ ಹಾಗೂ ನಿವೃತ್ತ ಎಡಿಪಿಐ ಶರಣಪ್ಪ ಮದ್ದನ್, ನಾಗರಡ್ಡಿ ಗೋಪಸೇನ, ಶರಣಗೌಡ ಪಾಟೀಲ ಚಾಮನೂರ, ನಾಗಯ್ಯ ಸ್ವಾಮಿ ಮಠಪತಿ, ನಾಗಯ್ಯ ಸ್ಥಾವರಮಠ ಹರಸೂರ ಕಲ್ಲಪ್ಪ ಸೂಲಹಳ್ಳಿ, ಸಿದ್ದಯ್ಯ ಶಾಸ್ತ್ರಿ ನಂದೂರುಮಠ ಇದ್ದರು.

ರಜನಿ ಪಾಟೀಲ ಶಾಲಾ ವಾರ್ಷಿಕ ವರದಿ ಮಂಡಿಸಿದರು. ಬಸವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ ಪಾಟೀಲ ಸ್ವಾಗತಿಸಿದರು, ಜಗದೇಶ ನಗನೂರ ನಿರೂಪಿಸಿದರು, ಮುಖ್ಯ ಶಿಕ್ಷಕಿ ಕವಿತಾ ಪಾಟೀಲ ವಂದಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಜ್ಯೋತಿ ಆರ್.ತೆಗನೂರ, ಅರ್ಚನಾ ಹಿರೇಮಠ, ಚಂದ್ರಕಲಾ ಶೀತಲ್ ಜೈನ್, ಸಿದ್ದಣ್ಣ ಮುಗುಟಿ, ಪತ್ರಕರ್ತ ಮಡಿವಾಳಪ್ಪ ಹೇರೂರು ಅವರಿಗೆ “ಬಸವ ಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

“ವಿವಿಧೆಡೆ ನೆಲೆಗೊಳ್ಳುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡಿಮೆ ಶುಲ್ಕದಲ್ಲಿ ಬಡ ಮಕ್ಕಳ ಭವಿಷ್ಯ ಬರೆಯುವ ಮೂಲಕ ಸಾಮಾಜಿಕ ಸೇವೆಗೆ ಸಿದ್ಧವಾಗಬೇಕು. ಆಗ ಮಾತ್ರ ಶಿಕ್ಷಣ ದಾಸೋಹಕ್ಕೆ ಅರ್ಥ ಬರುತ್ತದೆ”.-ಶ್ರೀ ಸೋಮಶೇಖರ ಶಿವಾಚಾರ್ಯರು ಕಂಬಳೇಶ್ವರ ಮಠ ಚಿತ್ತಾಪುರ.

Spread the love

Leave a Reply

Your email address will not be published. Required fields are marked *

error: Content is protected !!