Oplus_0

ವಾಡಿಯಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಂದ ಸದಸ್ಯತ್ವ ನೊಂದಣಿ

ನಾಗಾವಿ ಎಕ್ಸಪ್ರೆಸ್

ವಾಡಿ:ಪಟ್ಟಣದ ಬಲರಾಮ ಚೌಕನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹನುಮಾನ ನಗರದ ನಿವಾಸಿ ವಿಜಯ ಕುಮಾರ ರಾಠೋಡ ರಿಗೆ ಬಿಜೆಪಿ ಸದಸ್ಯತ್ವ ನೊಂದಾಯಿಸಿ ಪಕ್ಷದ ಕಾರ್ಯಕರ್ತರಿಗೆ ಸದಸ್ಯತ್ವ ಅಭಿಯಾನ ದಲ್ಲಿ ಸಕ್ರಿಯವಾಗುವಂತೆ ಕರೆ ನೀಡಿದರು.

ಯಾದಗಿರಿ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಪಾರ್ಥಿವ ಶರೀರದ ಅಂತಿಮ‌ ದರ್ಶನವನ್ನು ಪಡೆದು ಕಲಬುರಗಿ ಹೋಗುವಾಗ ಬಲರಾಮ ಚೌಕದಲ್ಲಿ ಜಮಾಯಿಸಿದ ಕಾರ್ಯಕರ್ತರನ್ನು ಭೇಟಿಯಾಗಿ ಮಾತನಾಡಿ, ಈ ಸದಸ್ಯತ್ವ ಅಭಿಯಾನ ಕೇವಲ ಪಕ್ಷದ ಸದಸ್ಯತ್ವವನ್ನು ದುಪ್ಪಟ್ಟು ಮಾಡುವ ಉದ್ದೇಶ ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಆಂದೋಲನಕ್ಕೆ ಬಲ ನೀಡುವುದಾಗಿದೆ. ಜೊತೆಗೆ ಈ ಐತಿಹಾಸಿಕ ಅಭಿಯಾನದಿಂದ ರಾಷ್ಟ್ರೀಯ ಮಟ್ಟದಿಂದ ಹಿಡಿದು ರಾಜ್ಯ, ಜಿಲ್ಲೆ, ಗ್ರಾಮ ಮತ್ತು ಬೂತ್ ಮಟ್ಟದವರೆಗೆ ಪಕ್ಷವನ್ನು ಮುಟ್ಟಿಸುವುದಾಗಿದೆ. ಈ ಮೂಲಕ ಪ್ರತಿ ಬೂತ್ ಗಳಲ್ಲಿ ಈ ಅಭಿಯಾನ ದಿಂದ ಚುನಾವಣೆ ಗೆಲ್ಲಲು ಬಲ ಸಿಕ್ಕಂತಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ಮಾಜಿ ಸಚಿವ ರಾಜೂಗೌಡ, ಶಾಸಕರಾದ ಬಸವರಾಜ ಮತ್ತಿಮೂಡ್, ಡಾ.ಅವಿನಾಶ ಜಾಧವ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ, ಅಮರನಾಥ ಪಾಟೀಲ, ಪಿ.ರಾಜು, ಮುಖಂಡರಾದ ಚಂದು ಪಾಟೀಲ, ನಿತೀನ್ ಗುತ್ತೇದಾರ,‌ ವಿಠಲ ವಾಲ್ಮೀಕ ನಾಯಕ, ವಾಡಿ ಅಧ್ಯಕ್ಷ ವೀರಣ್ಣ ಯಾರಿ, ರಾಮು ರಾಠೋಡ, ಹಣಮಂತ ಚವ್ಹಾಣ, ಹರಿ ಗಲಾಂಡೆ,ರವಿ ಸಿಂದಗಿ, ಆನಂದ ಇಂಗಳಗಿ, ರಾಜು ಪವಾರ, ರವಿ ಜಾಧವ, ಹೀರಾ ನಾಯಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!