Oplus_0

ಯಾದಗಿರಿ: ಕಾಡ್ಲೂರು ಪೆಟ್ರೋಲ್ ಪಂಪ್ ನಿಂದ ಲಕ್ಷ್ಮೀ ದೇವಸ್ಥಾನದ ರಸ್ತೆ ಸುಧಾರಣೆಗೆ ನಗರಸಭೆ ಚಾಲನೆ

ನಾಗಾವಿ ಎಕ್ಸಪ್ರೆಸ್

ಯಾದಗಿರಿ: ನಗರದ ವಾರ್ಡ್ ನಂಬರ್ 25 ಮತ್ತು 26 ರಲ್ಲಿ ಬರುವ ಲಕ್ಷ್ಮಿ ನಗರದ ಬಡಾವಣೆಯ ಕಾಡ್ಲೂರು ಪೆಟ್ರೋಲ್ ಪಂಪ್ ನಿಂದ ಲಕ್ಷ್ಮೀ ದೇವಸ್ಥಾನದ ರಸ್ತೆ ಸುಧಾರಣೆಗೆ ನಗರಸಭೆ ಚಾಲನೆ ನೀಡಿದ್ದರಿಂದ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿ ಬಿದ್ದಿರುವ ತೆಗ್ಗುಗಳನ್ನು ಡಾಂಬರೀಕರಣ ಮಾಡುವ ಮುಖಾಂತರ ರಸ್ತೆ ರಿಪೇರಿ ಮಾಡಿ ಸುಧಾರಣೆ ಮಾಡಲಾಯಿತು ನಗರಸಭೆ ಅಧ್ಯಕ್ಷೆ ಕು .ಲಲಿತಾ ಅನಪುರ್ ಆದೇಶದ ಮೇರೆಗೆ ಪೌರಾಯುಕ್ತ ರಜನಿಕಾಂತ್ ಶೃಂಗೇರಿ ಕಾಮಗಾರಿಯನ್ನು ಕೈಗೊಂಡಿದ್ದಾರೆ.

ನಗರಸಭೆ ವತಿಯಿಂದ ಕೈಗೊಂಡಿರುವ ಕಾಮಗಾರಿಯಿಂದ ವಾರ್ಡಿನ ನಿವಾಸಿಗಳು ಹರ್ಷ ವ್ಯಕ್ತಪಡಿಸಿ, ನಗರಸಭೆ ಅಧ್ಯಕ್ಷ ಮತ್ತು ಸದಸ್ಯರಿಗೆ  ಹಾಗೂ ಅಧಿಕಾರಿಗಳಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.

ವಾರ್ಡಿನ ನಗರಸಭೆ ಸದಸ್ಯ ಹಣಮಂತ ಇಟಗಿ, ಗುತ್ತಿಗೆದಾರ ಪಿರ ಅಹ್ಮದ್, ಮಾಜಿ ಎಪಿಎಂಸಿ ಅಧ್ಯಕ್ಷ ಶರಣಗೌಡ ಕಾಳ ಬೆಳಗುಂದಿ, ಬಿಜೆಪಿ ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ್ ಕಡೆಸೂರ್, ಬಿಜೆಪಿ ಯುವ ನಾಯಕ ಪ್ರಜ್ವಲ್ ಮುಂತಾದ ಮುಖಂಡರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!