ಯಾದಗಿರಿ ಬಿಜೆಪಿ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅಂತಿಮ ದರ್ಶನ ಪಡೆದ ವಿಜಯೇಂದ್ರ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಅಂತಿಮ ದರ್ಶನವನ್ನು ಪಡೆಯಲು ಯಾದಗಿರಿ ಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬುಧವಾರ ಅವರ ಸ್ವ ಗೃಹದಲ್ಲಿ ಇರಿಸಿದ ಪಾರ್ಥಿವ ಶರೀರದ ಮೇಲೆ ಮಾಲಾರ್ಪಣೆ ಮಾಡಿ ಅಂತಿಮ ದರ್ಶನವನ್ನು ಪಡೆದರು.
ಈ ವೇಳೆ ಅವರ ಪುತ್ರ ಮಹೇಶ್ ರೆಡ್ಡಿ ಮುದ್ನಾಳ, ಪುತ್ರಿ ರಶ್ಮಿ ಹಾಗೂ ಸಹೋದರರಾದ ರಾಚನಗೌಡ ಮುದ್ನಾಳ ಹನುಮಂತ ರೆಡ್ಡಿ ಮುದ್ನಾಳ ಶರಣಗೌಡ ಮುದ್ನಾಳ ಕುಟುಂಬದ ಸದಸ್ಯರನ್ನು ಸಾಂತ್ವಾನ ಹೇಳಿ ನಿಮ್ಮ ಜೊತೆ ನಾನು ಪಕ್ಷ ಸದಾ ಇರುತ್ತದೆ ಎಂದು ಧೈರ್ಯ ಹೇಳಿದರು.
ಅವರ ಜೊತೆಯಲ್ಲಿ ಮಾಜಿ ಸಚಿವ ರಾಜುಗೌಡ, ಶಾಸಕರಾದ ಬಿ.ಜಿ ಪಾಟೀಲ್ ಡಾ. ಅವಿನಾಶ್ ಜಾಧವ, ಬಸವರಾಜ ಮತ್ತಿಮೂಡ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಅಮರನಾಥ ಪಾಟೀಲ, ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ದೇವೇಂದ್ರನಾಥ ನಾದ್, ವೆಂಕಟರೆಡ್ಡಿ ಅಬ್ಬೆತುಮಕೂರ, ಗುರು ಕಾಮಾ, ಹಣಮಂತ ಇಟಗಿ, ಪರಶುರಾಮ್ ಕುರುಕುಂದಿ, ಲಿಂಗಾರೆಡ್ಡಿ ಗೌಡ ಭಾಸರೆಡ್ಡಿ, ವೀರಣ್ಣಗೌಡ ಪರಸರೆಡ್ಡಿ ಸೇರಿದಂತೆ ರಾಜಕೀಯ ಗಣ್ಯರು, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡಿದ್ದರು.