ಯಾದಗಿರಿ ಗಣತಿಗೆ ಸಹಕರಿಸಲು ಮಾದಿಗರ ಮನೆಗೆ ಸ್ಟಿಕ್ಕರ್ ಹಚ್ಚುವ ಕಾರ್ಯಕ್ರಮಕ್ಕೆ ದೇವಿಂದ್ರನಾಥ್ ನಾದ್ ಚಾಲನೆ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಪರಿಶಿಷ್ಟರ ಗಣತಿ ಸಂದರ್ಭದಲ್ಲಿ ಗಣತಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾದಿಗರ ಮನೆ ಸ್ಟಿಕ್ಕರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ಸಮಾಜದ ಹಿರಿಯ ಮುಖಂಡ ದೇವಿಂದ್ರನಾಥ್ ನಾದ್ ಹೇಳಿದರು
ತಾಲೂಕಿನ ಮುಂಡರಗಿ ಗ್ರಾಮದಲ್ಲಿ ಸೋಮವಾರ ಸ್ಟಿಕ್ಕರ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ಒಳ ಮೀಸಲಾತಿ ಜಾರಿಗಾಗಿ ಪರಿಶಿಷ್ಟ ಜಾತಿಯಲ್ಲಿನ ಮೂಲ ಜಾತಿಗಳ ಸಮೀಕ್ಷೆಗಾಗಿ ಮನೆಮನೆಗೆ ಭೇಟಿ ನೀಡಿದಾಗ ಒಳ ಮೀಸಲಾತಿ ಜಾತಿ ಗಣತಿಯಲ್ಲಿ ನಮ್ಮ ಮೂಲ ಜಾತಿ ಮಾದಿಗ ಎಂದು ಸ್ವಾಭಿಮಾನದಿಂದ ಹೇಳಿ ಸಹಕರಿಸಬೇಕು ಎಂದು ಸ್ಟಿಕ್ಕರ್ ಹಂಚುವ ಮೂಲಕ ಸಮಾಜದ ಬಂಧುಗಳಿಗೆ ಕರೆ ನೀಡಿದರು. ಯಾದಗಿರಿ ಜಿಲ್ಲೆಯಾದ್ಯಂತ ಮಾದಿಗರ ಮನೆಗಳಿಗೆ ಸ್ಟಿಕ್ಕರ್ ಹಚ್ಚುವ ಕಾರ್ಯಕ್ರಮವನ್ನು ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ಹಣಮಂತ ಇಟಗಿ, ಆಂಜನೇಯ ಬಬಲಾದ್, ಮಲ್ಲಿಕಾರ್ಜುನ್ ಜಲ್ಲಪ್ಪನೂರ್, ಮಲ್ಲಿಕಾರ್ಜುನ್ ಬಬಲಾದಿ ಸೇರಿದಂತೆ ಕಾರ್ಯಕರ್ತರು ಇದ್ದರು.