Oplus_0

ಯಾದಗಿರಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ಪೂರ್ವಭಾವಿ ಸಭೆ | ಸಮಾಜದ ಅಭಿವೃದ್ಧಿ ಗೆ ಸರ್ವರ ಸಹಕಾರ ಮುಖ್ಯ: ಭೀಮಾಶಂಕರ ಸ್ವಾಮಿಗಳು

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ಯಾವುದೇ ಒಂದು ಸಮಾಜ ಅಭಿವೃದ್ಧಿ ಆಗಬೇಕಾದರೆ ಸಮಾಜದಲ್ಲಿನ ಸರ್ವರ ಸಹಕಾರ ಅತಿ ಮುಖ್ಯವಾಗಿದೆ ಎಂದು ಶ್ರೀ ಬಾಲಯೋಗಿ ರಾಜೇಂದ್ರ ಮಹಾರಾಜರ ಆಶ್ರಮದ ಅನುಷ್ಠಾನ ಮೂರ್ತಿ ಶ್ರೀ ಭೀಮಾಶಂಕರ ಸ್ವಾಮಿಗಳು ಅಭಿಪ್ರಾಯಪಟ್ಟರು.

ನಗರದ ಬಾಲರಾಜೇಂದ್ರ ಮಹಾರಾಜರ ಆಶ್ರಮದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವದ ಪೂರ್ವಭಾವಿ ಸಭೆ ಹಾಗೂ ಆರ್ಯ ಈಡಿಗ ಸಮಾಜದ ಪದಾಧಿಕಾರಿಗಳ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಯಾವುದೇ ಒಂದು ಸಮಾಜ ಹಾಗೂ ಸಮಾಜದ ಜನಾಂಗದವರು ಒಂದು ಒಳ್ಳೆಯ ಸ್ಥಾನಮಾನಗಳನ್ನು ಪಡೆಯಬೇಕಾದರೆ ಸಮಾಜದಲ್ಲಿ ಇರುವ ಎಲ್ಲಾರ ಸಹಕಾರದ ಜೊತೆಗೆ ಪರಿಶ್ರಮವು ಕೂಡ ಅತೀ ಮುಖ್ಯವಾಗಿದೆ ಎಂದರು.

ಆರ್ಯ ಈಡಿಗ ಸಮಾಜ ಕೇವಲ ಒಂದೇ ಜಾತಿಗೆ ಸೀಮಿತವಾಗದೆ ಎಲ್ಲಾ ಸಮಾಜದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜನಾಂಗವಾಗಿದೆ. ನಾರಾಯಣ ಗುರುಗಳು ಹೇಳಿದಂತೆ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎನ್ನುವ ಸಂದೇಶದಂತೆ ನಡೆದುಕೊಳ್ಳುವ ಸಮಾಜವಾಗಿದೆ‌ ಈ ಸಮಾಜದಲ್ಲಿ ಹುಟ್ಟಿದ ಎಲ್ಲರು ಪುಣ್ಯವಂತರು ಎಂದು ಹೇಳಿದರು.

ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಮಹೇಂದ್ರ ಕುಮಾರ ಅನಪುರ ಮಾತನಾಡಿ, ಸಮಾಜದಲ್ಲಿ ಶಾಂತಿ ಸಂದೇಶ ಸಾರಿ ಎಲ್ಲರು ಒಂದೇ ಎಂದು ಹೇಳಿದ ಮಹಾ ಮನವಾತವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಎಲ್ಲರು ಕೈ ಜೋಡಿಸಬೇಕು ಈ ನಿಟ್ಟಿನಲ್ಲಿ ಗುರುಗಳ ಸಂದೇಶವನ್ನು ಜಗತ್ತಿಗೆ ಸಾರುವ ಕೆಲಸವನ್ನು ಎಲ್ಲರು ಸೇರಿ ಮಾಡೋಣ ಎಂದರು.

ಸಭೆಯಲ್ಲಿ ರಾಜ್ಯ ವಿಶೇಷ ಆಹ್ವಾನಿತ ಸದಸ್ಯರಾದ ನಾಗರಾಜಗೌಡ ಮಾನಸಗಲ್ ಹಾಗೂ ಯುವ ಘಟಕದ ಜಿಲ್ಲಾಧ್ಯಕ್ಷ ಬಾಲಾಜಿ ಪೊಲೀಸ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಯ್ಯ ಗುಂಡಗುರ್ತಿ, ಸೂರ್ಯಕಾಂತ್ ಯರಗೋಳ, ದೇವಪ್ಪ ರಾಚನಳ್ಳಿ, ನಂದಕುಮಾರ್ ಜಿಲಾಲಾಪುರ, ಚಂದ್ರಯ್ಯ ಬೆಳಗೇರಿ, ವೆಂಕಟೇಶ್ ಬದ್ದೆಪಳ್ಳಿ, ರಘು ಸೈದಾಪುರ, ಪ್ರಕಾಶ್ ಶಾಂತು ಹೆಗ್ಗಾನಗೇರ ಮಾರೆಪ್ಪ ಇಬ್ರಾಹಿಂಪುರ, ಮಂಜುನಾಥ್, ಆನಂದ್ ವೆಂಕೋಬ, ಶರಣು ಮಲ್ಲಳ್ಳಿ, ವಿಟ್ಟಲ್, ವಿಶ್ವನಾಥ್ ರವೂರ್ ಸೇರಿದಂತೆ ಇನ್ನಿತರರು ಇದ್ದರು.

ಇದೇ ಸಂದರ್ಭದಲ್ಲಿ ಆರ್ಯ ಈಡಿಗ ಸಮಾಜದ ಜಿಲ್ಲಾ ಘಟಕ ಸೇರಿದಂತೆ ನಗರ ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳ ವಿವರ:

ಜಿಲ್ಲಾ ಸಹ ಕಾರ್ಯದರ್ಶಿ ಲಕ್ಷ್ಮಿಕಾಂತ್ ನಿಡಜಿಂತಿ, ನಗರ ಘಟಕದ ಗೌರವಾಧ್ಯಕ್ಷ ನರುಗೌಡ ಮಾನಸಗಲ್, ನಗರಾಧ್ಯಕ್ಷ ಮಾರುತಿ ಕಲಾಲ್, ಉಪಾಧ್ಯಕ್ಷರಾಗಿ ಮಂಜುನಾಥ್ ಸುಂಕಾಪುರ, ಬಸವರಾಜ ಮಾಚನೂರ್, ಕಾಶಪ್ಪ ಮುಸ್ತೂರ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಅಡಗೋಳ್, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಶಾಬಾದಿ, ಸಹ ಕಾರ್ಯದರ್ಶಿ ಪ್ರಕಾಶ್ ಬಳಿಚಕ್ರ, ಕಾನೂನು ಸಲಹೆಗಾರರಾಗಿ ವಿಜಯ ಯರಗೋಳ್ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Spread the love

Leave a Reply

Your email address will not be published. Required fields are marked *

You missed

error: Content is protected !!