Oplus_0

ಯಾದಗಿರಿಯಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ, ನಾಡುನುಡಿಗೆ ಕಂಕಣಬದ್ಧರಾಗಿ ಹೋರಾಡಬೇಕು: ವೆಂಕೋಬ್

ನಾಗಾವಿ ಎಕ್ಸಪ್ರೆಸ್

ಯಾದಗಿರಿ: ಇಂದಿನ ಯುಗದಲ್ಲಿ ಕನ್ನಡ ಭಾಷೆ, ನೆಲ, ಜಲ, ನೀರು ರಕ್ಷಣೆಗೆ ಎಲ್ಲರೂ ಕಂಕಣಬದ್ಧರಾಗಿ ಹೋರಾಡಬೇಕು ಎಂದು ನಿವೃತ್ತ ಉಪನ್ಯಾಸಕ ವೆಂಕೋಬ್ ಹೇಳಿದರು.

ನಗರದ ಮಾತಾ ಮಾಣಿಕೇಶ್ವರಿ ನಗರದಲ್ಲಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಜಿಲ್ಲಾ ಘಟಕ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲರೂ ಮೊದಲು ಕನ್ನಡದಲ್ಲಿ  ಮಾತನಾಡಬೇಕು, ಕನ್ನಡ ಭಾಷೆಯ ಬೆಳವಣಿಗೆಗೆ ಮನೆಯಿಂದಲೇ ಪ್ರಾರಂಭವಾಗಬೇಕು ಎಂದು ಹೇಳಿದರು.

ಇಂದು ಇಂಗ್ಲೀಷ್ ವ್ಯಾಮೋಹಕ್ಕೆ ಜನರು ಮಾರುಹೋಗುತ್ತಿದ್ದಾರೆ ಇದನ್ನು ತಡೆಯುವುದು ಅತಿ ಅವಶ್ಯಕವಾಗಿದೆ, ಕನ್ನಡದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಕನ್ನಡ ನಾಡಿಗೆ ಎಂಟು ಜ್ಞಾನಪೀಠ ಪ್ರಶಸ್ತಿ ದೊರತಿವೆ, ಇದು ಕನ್ನಡದ ಶಕ್ತಿ ಎಂದರು.

ಅತೀ ಹೆಚ್ಚು ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾದರೆ ಕನ್ನಡದಲ್ಲಿ ನಪಾಸ ಆಗುತ್ತಿದ್ದಾರೆ, ಕನ್ನಡದ ಜೊತೆಗೆ ಇನ್ನಿತರ ಭಾಷೆಗಳನ್ನು ಇಂದಿನ ಯುಗದಲ್ಲಿ ಅತಿ ಅವಶ್ಯಕವಾಗಿದೆ, ಜನನಿ ಜನ್ಮಭೂಮಿ ಯಾವತ್ತು ಗೌರವವನ್ನು ಕೊಡಬೇಕೆಂದು ಹೇಳಿದರು.

ಸುವರ್ಣ ಕರ್ನಾಟಕ ವೇದಿಕೆ ಜಿಲ್ಲಾ ಘಟಕದಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ನಗರದಲ್ಲಿ ಉತ್ತಮ ವಾತಾವರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಥಮ ದರ್ಜೆ ಗುತ್ತಿಗೆದಾರ ಶಾಂತಗೌಡ ಪಗಲಪುರ್ ನೆರವೇರಿಸಿದರು, ಆಹಾರ ಸುರಕ್ಷಾ ಅಧಿಕಾರಿಗಳಾದ ಆಂಜನೇಯ ವೆಂಕಟೇಶ್ ಇಂಡಿಪುರ್, ಬಿಜೆಪಿ ಮುಖಂಡರಾದ ಶರಣಗೌಡ ಕ್ಯಾತನಾಳ, ವನಪ್ಪ ಮಾಸ್ಟರ್, ಕೃಷ್ಣಮೂರ್ತಿ ಕುಲಕರ್ಣಿ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ್ ಕಡೆಸೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳು ಭರತನಾಟ್ಯ ಅದ್ದೂರಿಯಾಗಿ ಮಾಡಿದರು. ಗಾಯಕರಾದ ನಿತೀಶ್ ದೇಸಾಯಿ ಸಂಗಡಿಗರು ರಸ ಮಂಜರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Spread the love

Leave a Reply

Your email address will not be published. Required fields are marked *

You missed

error: Content is protected !!