ಯಾಗಾಪೂರ ಗ್ರಾಮ ಪಂಚಾಯಿತಿಯಲ್ಲಿ ಮಾಜಿ ಅಧ್ಯಕ್ಷರು ಮಾಡಿದ ಅವ್ಯವಹಾರ ಆರೋಪ ಸತ್ಯಕ್ಕೆ ದೂರ, ಯಾವುದೇ ತನಿಖೆಗೆ ಸಿದ್ಧ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಯಾಗಾಪೂರ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕೂಡಿಕೊಂಡು 15 ನೇ ಹಣಕಾಸಿನ ಕಾಮಗಾರಿ ಹಾಗೂ ಅಂಗವಿಕಲ ಶೇ.5 ಪ್ರತಿಶತ ಅನುದಾನದಲ್ಲಿ ಹೊಲಿಗೆ ಯಂತ್ರಗಳಲ್ಲಿ ಅವ್ಯವಹಾರ ಆಗಿದೆ ಎಂದು ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮದನ್ ಅವರು ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ ಯಾವುದೇ ತನಿಖೆಗೆ ಸಿದ್ಧ ಎಂದು ಗ್ರಾ.ಪಂ ಅಧ್ಯಕ್ಷೆ ಶಾಂತಾಬಾಯಿ ಡೊಂಗುರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ ಪೂಜಾರಿ ಉತ್ತರಿಸಿದ್ದಾರೆ.
ಈ ಕುರಿತು ಸ್ವಷ್ಟನೆ ನೀಡಿದ ಅವರು, ಯಾಗಾಪೂರ ಗ್ರಾಮ ಪಂಚಾಯತನ ಅಧ್ಯಕ್ಷರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಣ ದುರುಪಯೋಗ ಮಾಡಿದ್ದಾರೆಂದು ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಯಾಗಾಪೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 3 ಕಂದಾಯ ಗ್ರಾಮಗಳು 11 ತಾಂಡಾಗಳು ಇದ್ದು ಗ್ರಾ.ಪಂ.ವ್ಯಾಪ್ತಿ ದೊಡ್ಡದಿದ್ದು ಕುಡಿಯುವ ನೀರಿನ ಮೋಟಾರುಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು ನಿರ್ವಹಣಾ ವೆಚ್ಚ ಹೆಚ್ಚಾಗಿದ್ದು ಸದರಿ ವಿಷಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಏಜೆನ್ಸಿಗಳ ಮುಖಾಂತರ ಹಣ ಪಾವತಿಸಲಾಗಿದೆ. 15 ನೇ ಹಣಕಾಸು ಕ್ರೀಯಾ ಯೋಜನೆಯಂತೆ ಪೂರ್ಣಗೊಂಡ ಅಭಿವೃದ್ಧಿ ಕಾಮಗಾರಿಗಳು ನಿಯಮಾನುಸಾರ ಹಣ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೂರ್ಣಗೊಂಡ ಯಾವುದೇ ಬಿಲ್ಲುಗಳನ್ನು ಹಣ ಪಾವತಿಸದೆ ಬಾಕಿ ಇರಿಸಿಕೊಂಡಿರುವುದಿಲ್ಲ. ಅಂಗವಿಕಲರ ಕಲ್ಯಾಣಕ್ಕಾಗಿ ಗ್ರಾ.ಪಂ. ಸಾಮಾನ್ಯ ಸಭೆ ತೀರ್ಮಾನಿಸಿದಂತೆ ಹೊಲಿಗೆ ಯಂತ್ರ ಖರೀದಿಸಿ 18 ಅಕ್ಟೋಬರ್ 2024 ರಂದು ಸಾಮಾನ್ಯ ಸಭೆಯಲ್ಲಿ ಗ್ರಾಮವಾರು ಫಲಾನುಭವಿಗಳಿಗೆ ಸದಸ್ಯರ ಮುಖಾಂತರ ಹೊಲಿಗೆ ಯಂತ್ರ ವಿತರಿಸಲಾಗಿದೆ. ಸದರಿ ಆರೋಪ ಮಾಡುವುದಕ್ಕೆ ಕಾರಣವೆಂದರೆ ಗ್ರಾ.ಪಂ. ಸದಸ್ಯ ವಸಂತ ಖೂಬ್ಯಾ ಕರದಾಳ ಗ್ರಾ.ಪಂ.ಕಾರ್ಯದರ್ಶಿ ಚಂದ್ರಕಾಂತ ಹಾಗೂ ಕರವಸೂಲಿಗಾರ ಸಂತೋಷರವರ ಮುಖಾಂತರ ಹಿರಾಮಣಿ ತಾಂಡಾದ ಚಂದ್ರಕಾಂತ ಕಾರ್ಯದರ್ಶಿಯರವರ ಪತ್ನಿ ವಂದನಾ ಹಾಗೂ ಮುಂಗಿ ತಾಂಡಾದ 7 ಫಲಾನುಭವಿಗಳ ಹೆಸರನ್ನು ಪಿ.ಎಂ.ಎ.ವಾಯ್ ಯೋಜನೆ ಅಡಿ ನೊಂದಾಯಿಸಿ ಸದರಿ ಸಂತೋಷ ಕರವಸೂಲಿಗಾರರಿಂದ ಗ್ರಾ.ಪಂ.ಗೆ ಮಾಹಿತಿ ನೀಡದೆ ಜಿ.ಪಿ.ಎಸ್ ಮಾಡಿದ್ದನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಳ್ಳಿ ಹಾಕಿದ ಕಾರಣಕ್ಕೆ ಅಧ್ಯಕ್ಷರು ಹಾಗೂ ಪಿ.ಡಿ.ಓ ಇವರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಇದು ಸತ್ಯಕ್ಕೆ ದೂರವಾಗಿದ್ದು ಇದರಲ್ಲಿ ಯಾವುದೇ ಹುರುಳಿರುವುದಿಲ್ಲ ಎಂದು ಈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.