ಗಣೇಶ ಉತ್ಸವ ಯುವಕರನ್ನು ಸಂಘಟಿಸುವ ಏಕೈಕ ಉತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಯುವಕರನ್ನು ಸಂಘಟಿಸುವ ಹಾಗೂ ಜನರ ನಡುವೆ ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಬಾಂಧವ್ಯವನ್ನು ವೃದ್ಧಿಸುವ ಎಕೈಕ ಉತ್ಸವ ಅದುವೇ ಗಣೇಶ ಉತ್ಸವ ಎಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.
ಪಟ್ಟಣದ ನ್ಯೂ ಪೊಲೀಸ್ ಕ್ವಾರ್ಟರ್ಸ್ ಏರಿಯಾದಲ್ಲಿ ಶ್ರೀ ಏಕದಂತ ಮಿತ್ರ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಗಣೇಶ ಉತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಣೇಶ ಉತ್ಸವಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಗಣೇಶ ಉತ್ಸವ ಜಾರಿಗೆ ತಂದವರು, ಬಾಲ್ ಗಂಗಾಧರ ತಿಲಕ್ ಅವರು, ಅಂದಿನಿಂದ ಇಲ್ಲಿಯವರೆಗೂ ಸಾರ್ವಜನಿಕರೆಲ್ಲರೂ ಎಲ್ಲ ಜಾತಿ ಜನಾಂಗದವರು ಒಗ್ಗೂಡಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ಹೇಳಿದರು.
ಈ ಏರಿಯಾದಲ್ಲಿ ಕಳೆದ 9 ವರ್ಷಗಳಿಂದ ಯುವಕರು ಒಗ್ಗೂಡಿ ಬಹಳ ಹುಮ್ಮಸ್ಸಿನಿಂದ ಗಣೇಶ ಉತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಿತ್ರ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಉಪ್ಪಾರ, ಪತ್ರಕರ್ತ ಜಗದೇವ ಕುಂಬಾರ, ಪ್ರಮುಖರಾದ ವಿಶ್ವನಾಥ ಸ್ವಾಮಿ, ಸಾಬಣ್ಣ ಹುಣಚೇರಿ, ಉಮೇಶ್ ಕಲಾಲ್, ಆಕಾಶ್ ಬಿರೇದಾರ್, ಕಿರಣ ಮಡಿವಾಳ, ನಾಗರಾಜ ಉಪ್ಪಾರ, ಮಲ್ಲಿಕಾರ್ಜುನ್ ಉಪ್ಪಾರ, ಪ್ರಶಾಂತ ಮಡಿವಾಳ, ಪ್ರೀತಮ್ ಮಡಿವಾಳ, ರಾಜು ಕಲಾಲ್, ಅಭಿಷೇಕ್ ಜಮಾದಾರ, ನಿತೀಶ ಕಲಾಲ್, ಸಿದ್ದಣ್ಣ ಗೌಡ, ಬಸ್ಸು ಸ್ವಾಮಿ, ವಿಶ್ವನಾಥ ಬಿರೇದಾರ್, ನಿಂಗೇಶ್ ಉಪ್ಪಾರ, ಮಂಜುನಾಥ ಸ್ವಾಮಿ, ಬಸವರಾಜ ಉಪ್ಪಾರ, ಸಚೀನ್ ಹುಣಚೇರಿ, ಅಭಿಷೇಕ್ ಪಾಲ್ ಸೇರಿದಂತೆ ಯುವಕರು, ಮಹಿಳೆಯರು ಉಪಸ್ಥಿತರಿದ್ದರು.
ಸಪ್ನಾ ಸ್ವಾಗತಿಸಿದರು, ಯಲ್ಲಯ್ಯ ಕಲಾಲ್ ನಿರೂಪಿಸಿದರು, ಕಿರಣ್ ಮಡಿವಾಳ ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ, ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು, ನಂತರ ಅನ್ನ ಪ್ರಸಾದ ವಿತರಣೆ ನಡೆಯಿತು.