ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಜನ್ಮದಿನ, ಯುವ ಕೋಲಿ ಸಮಾಜದ ವತಿಯಿಂದ ಹಣ್ಣುಹಂಪಲು ವಿತರಣೆ | ಕಮಕನೂರ ಕೋಲಿ ಸಮಾಜದ ಶಕ್ತಿ: ಮಹೇಶ್ ಸಾತನೂರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಜನ್ಮದಿನದ ನಿಮಿತ್ತ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ನಾಟಕ ಪ್ರದೇಶ ತಾಲೂಕು ಯುವ ಕೋಲಿ ಸಮಾಜ ವತಿಯಿಂದ ರೋಗಿಗಳು ಹೆಣ್ಣು ಹಂಪಲು ಮತ್ತು ಆಹಾರ ಪೊಟ್ಟಣ ವಿತರಣೆ ಮಾಡಲಾಯಿತು.
ಈ ವೇಳೆ ತಾಲೂಕು ಯುವ ಅಧ್ಯಕ್ಷ ಮಹೇಶ್ ಸಾತನೂರ ಮಾತನಾಡಿ, ತಿಪ್ಪಣ್ಣಪ್ಪ ಕಮಕನೂರ ಅವರು ಮೂರನೇ ಬಾರಿ ವಿಧಾನ ಪರಿಷತ್ ಸದಸ್ಯರಾಗುತ್ತಿರುವುದು ಕೋಲಿ ಸಮಾಜದ ಶಕ್ತಿ ಇನ್ನಷ್ಟು ಹೆಚ್ಚಿಸಿದಂತಾಗಿದೆ. ವಿಠಲ್ ಹೇರೂರು ನಂತರ ಕಮಕನೂರ ಅವರು ಕೋಲಿ ಸಮಾಜದ ಶಕ್ತಿಯಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೇವಣಸಿದ್ದ ದೊಡ್ಡಮನಿ, ಶ್ರೀಕಾಂತ್ ಚಪಾಟ್ಲಾ, ಮಲ್ಲಿಕಾರ್ಜುನ ರಾಜೋಳಿ, ಶರಣಪ್ಪ ಹೊಸೂರ್, ಚನ್ನು ಸಾತನೂರ, ನಿಂಗಪ್ಪ ದಂಡಗುಂಡ, ರಾಜಕುಮಾರ ಯಾಗಾಪುರ ಸೇರಿದಂತೆ ಇತರರು ಇದ್ದರು.
