ಚಿತ್ತಾಪುರ ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ದಿನಾಚರಣೆ | ಯೋಗದಿಂದ ದೇಹ ಮತ್ತು ಮನಸ್ಸು ಸದೃಢ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರತಿ ದಿನ ಯೋಗ ಅಭ್ಯಾಸ ರೂಡಿಸಿಕೊಳ್ಳುವುದರಿಂದ ದೇಹ ಮತ್ತು ಮನಸ್ಸು ಸದೃಢವಾಗುತ್ತದೆ ಎಂದು ಶಿಕ್ಷಕ ಅಕ್ಷಯ ಕುಲಕರ್ಣಿ ಹೇಳಿದ್ದಾರೆ.
ಪಟ್ಟಣದ ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಅವರು ಯೋಗ ಅಭ್ಯಾಸ ಮಾಡಿಸಿ ಮಾತನಾಡಿದರು.
ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದು ಇಲ್ಲಾ ಅಂತೆಯೇ ನಮ್ಮ ಪೂರ್ವಜರು ಅನಾದಿ ಕಾಲದಿಂದ ಅನೇಕ ಅಭ್ಯಾಸಗಳನ್ನು ರೂಡಿಸಿಕೊಂಡು ಅನೇಕ ಸಾಧನೆ ಮಾಡಿರುವ ನಿದರ್ಶನಗಳು ಇತಿಹಾಸದಲ್ಲಿ ಸಿಗುತ್ತವೆ. ಯೋಗವು ಪುರಾತನ ವಿದ್ಯಾವಾಗಿದ್ದು, ಇತ್ತೀಚಿನ ಕೆಲವು ವರ್ಷಗಳಿಂದ ಅದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಮಾಡುತ್ತಿದ್ದಾರೆ. ಮನುಷ್ಯನು ಆರೋಗ್ಯಕರವಾಗಿರಲು ನಿತ್ಯದ ಯೋಗಾಭ್ಯಾಸ ಉಪಯುಕ್ತವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ವೃದ್ಧಿ ಮಾಡುವುದರಲ್ಲಿ ಯೋಗ ಸಹಾಯಕವಾಗಿದೆ. ಪ್ರತಿ ದಿನ ಸ್ವಲ್ಪ ಸಮಯವನ್ನು ಯೋಗ ಮಾಡಲು ಮಿಸಲಿಡಬೇಕು, ಆರೋಗ್ಯಯುತ ದೇಹದಂತೆ ಮನಸ್ಸು ಕೊಡ ಆರೋಗ್ಯಯಿಂದ ಇರಬೇಕು ಎಂದು ಹೇಳಿದರು.
ಶಿಕ್ಷಕ ಅನಿಲಕುಮಾರ ಮಾತನಾಡಿ, ಯೋಗಕ್ಕೆ ಪುರಾತನ ಕಾಲದಿಂದಲೂ ಇತಿಹಾಸವಿದೆ. ಇಂದು ಸುಮಾರು 177ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ದಿನಾಚರಣೆ ಆಚರಣೆ ಮಾಡುತ್ತಾರೆ. ಜಗತ್ತಿಗೆ ಯೋಗವನ್ನು ಪರಿಚಯಿಸಿದ್ದು ನಮ್ಮ ದೇಶ ಎಂದು ಹೆಮ್ಮೆ ಪಡಬೇಕು ಎಂದರು.
ಶಿಕ್ಷಕಿ ಭಾರತಿ ಗುತ್ತೇದಾರ, ವಿದ್ಯಾರ್ಥಿನಿ ಕು.ವೈಷ್ಣವಿ ಯೋಗ ದಿನಾಚರಣೆ ಮಹತ್ವದ ಬಗ್ಗೆ ಮಾತನಾಡಿದರು. ಶಿಕ್ಷಕಿಯರಾದ ಶಮೀಮ್, ರೋಸ್ ಮೇರಿ, ಪೂಜಾ ಚವ್ಹಾಣ, ರಾಘವಿ ಕಾಶಿ, ಸರಿತಾ, ರಫತ್ ಸುಲ್ತಾನಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.

