ವಾಡಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ | ತಿನ್ನುವ ಆಹಾರದ ಮೇಲೆ ನಿಯಂತ್ರಣವೀರಲಿ: ವೀರಭದ್ರಪ್ಪ

ನಾಗಾವಿ ಎಕ್ಸಪ್ರೆಸ್ 

ವಾಡಿ: ಅಡುಗೆ ರುಚಿಯಾಗಿದೆ ಎಂದು ಸಿಕ್ಕಾಪಟ್ಟೆ ತಿಂದರೆ ಹೊಟ್ಟೆಯೊಳಗಿನ ಜಟರ ಪಚನಕ್ರಿಯೆ ನಿಲ್ಲಿಸುತ್ತದೆ. ತಿನ್ನುವ ಆಹಾರದ ಮೇಲೆ ನಿಯಂತ್ರಣವಿಲ್ಲದಿದ್ದರೆ ಆರೋಗ್ಯ ಹದಗೆಟ್ಟು ಜೀವಾಪಾಯ ಉಂಟಾಗುತ್ತದೆ ಎಂದು ಪ್ರಗತಿಪರ ಚಿಂತಕ, ಶಿಕ್ಷಕ ವೀರಭದ್ರಪ್ಪ ಆರ್.ಕೆ ಹೇಳಿದರು.

ಪಟ್ಟಣದ ದಿ.ಮುನಿಯಪ್ಪ ದಾಸ್ ಶಾಲೆಯ ಮೈದಾನದಲ್ಲಿ ಬೆಳಗಿನ ಬಳಗ, ಪುರಸಭೆ ಹಾಗೂ ಪತಂಜಲಿ ಯೋಗ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೋಗ ಬರುವ ಮೊದಲು ಯೋಗ ಅಭ್ಯಾಸ ರೂಢಿಸಿಕೊಳ್ಳಬೇಕು. ಬಹಳಷ್ಟು ಜನರು ರೋಗಗಳು ಅಂಟಿದ ಮೇಲೆ ವಾಕಿಂಗ್ ಮತ್ತು ವ್ಯಾಯಾಮ ಮಾಡಲು ಮುಂದಾಗುತ್ತಾರೆ. ಇದು ಸರಿಯಲ್ಲ.‌ ಮನುಷ್ಯ ಆರೋಗ್ಯವಂತನಾಗಿರಲು ಜೀವನ ಪದ್ಧತಿ ಸರಿಯಾಗಿಟ್ಟುಕೊಳ್ಳಬೇಕು. ನಿದ್ರಾಹೀನತೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆಹಾರ ಸೇವನೆಯ ಅರಿವಿನ ಕೊರತೆಯಿಂದ ರೋಗಗಳು ಹರಡುತ್ತವೆ. ಬಿಪಿ, ಶುಗರ್, ಅಸ್ತಮಾ, ಕಫ ಪ್ರಾಣಕಂಟಕವಾಗಬಾರದು ಎಂದರೆ ಯೋಗ ಮತ್ತು ವ್ಯಾಯಾಮಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಪತಂಜಲಿ ಯೋಗ ಸಮಿತಿ ಶಿಕ್ಷಕ ವೀರಣ್ಣ ಯಾರಿ ಯೋಗಾಭ್ಯಾಸ ಮಾಡಿಸುತ್ತಾ ಮಾತನಾಡಿ, ಯೋಗಾಭ್ಯಾಸವು ನಮ್ಮ ಆರೋಗ್ಯ ಮತ್ತು ಯೋಗಕ್ಷೇಮ ವನ್ನು ಸುಧಾರಿಸಲು ಇರುವ ಒಂದು ಅದ್ಭುತ ಮಾರ್ಗವಾಗಿದೆ. ಇದರಿಂದ ನಾವು ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಸರಿಪಡಿಸಿ ಕೊಳ್ಳುವ ಮೂಲಕ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸ ಬಹುದಾಗಿದೆ. ಆರೋಗ್ಯಯುತ ಬದುಕು ಸಾಗಿಸಲು ಯೋಗ ಎಲ್ಲರಿಗೂ ಸಾಕ್ಷಿಯಾಗಿದೆ ಎಂದು ಹೇಳಿದರು.

ನೂರಾರು ಜನರು ಯೋಗಾಭ್ಯಾಸ ಮಾಡಿ ಗಮನ ಸೆಳೆದರು. ಹಾಸ್ಯಾಸನ, ಸಿಂಹ ಘರ್ಜನೆ, ವೃಕ್ಷಾಸನ, ವಜ್ರಾಸನ, ಕಪಾಲಭಾತಿ ಸೇರಿದಂತೆ ಯೋಗದ ವಿವಿಧ ಭಂಗಿಗಳನ್ನು ಯೋಗ ಶಿಕ್ಷಕ ವೀರಣ್ಣ ಯಾರಿ ಹಾಗೂ ಮಲ್ಲಯ್ಯಸ್ವಾಮಿ ಮಠಪತಿ ಹೇಳಿಕೊಟ್ಟರು.

ಮುಖಂಡರಾದ ಜೊ.ಮ.ಜಯದೇವ, ದೇವಿಂದ್ರ ಕರದಳ್ಳಿ, ಮಡಿವಾಳಪ್ಪ ಹೇರೂರ, ಶಾಲೆಯ ಮುಖ್ಯಶಿಕ್ಷಕಿ ಭಾರತಿ ದಾಸ್, ಶಿಕ್ಷಕಿಯರಾದ ಸೃಷ್ಟಿ ಮುತ್ತುಲ, ವೈಶಾಲಿ ದಾಸ, ಭಾಗ್ಯವಂತಿ, ಬಸವರಾಜ ಪಂಚಾಳ, ರಮೇಶ ಕಾರಬಾರಿ, ಭೀಮಶಾ ಜಿರೊಳ್ಳಿ, ಭೀಮರಾವ ದೊರೆ, ಬಸವರಾಜ ಕೇಶ್ವಾರ, ಶರಣಗೌಡ ಪಾಟೀಲ ಚಾಮನೂರ, ನಾಗೇಂದ್ರ ಜೈಗಂಗಾ, ಬಾಬುಮಿಯ್ಯಾ ಚಿಸ್ತಿ, ಸೋಮನಾಥ ಚವ್ಹಾಣ, ಪ್ರಕಾಶ ಚಂದನಕೇರಿ, ಗುಂಡು ಗೌಡ ಚಾಮನೂರ, ದಯಾನಂದ ಖಜೂರಿ, ಭೀಮಣ್ಣ ಹವಾಲ್ದಾರ್, ಅರ್ಜುನ ಕಾಳೆಕರ್, ನಾಸಿರ ಹುಸೇನ್, ಗುಂಡಪ್ಪ ಭಂಕೂರ, ರವಿ ಕುಮಾರ ಸಿಂದಗಿ, ಪ್ರಕಾಶ ಪುಜಾರಿ, ಕಾಳಪ್ಪ ಪಂಚಾಳ, ಲಿಂಬಾಜಿ ರಾಠೋಡ, ಪುರಂದರ ದಾಸ, ಕುಮಾರ ದಾಸ, ಮಲ್ಲಿಕಾರ್ಜುನ ಭಜಂತ್ರಿ, ಅಲ್ಲಾಭಕ್ಷ್, ಸಂಜಯ ರಾಠೋಡ, ರೇವಪ್ಪ ಅಣಕಲ್, ಅಜೀಜ ತೇಲಿ, ಶಂಕ್ರಪ್ಪ ಜುಮ್ಲಾಪುರ, ಬಸನಗೌಡ ಯರಗಲ್, ಬಾಲರಾಜ ಪಗಡಿಕರ್, ಶಿವಪ್ಪ ಮುಂಡರಗಿ, ವಿಠ್ಠಲ್ ರಾಠೋಡ, ಲಕ್ಷ್ಮಣ ಸೇರಿದಂತೆ ನೂರಾರು ಜನರು ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!