ಸ್ಥಗಿತಗೊಂಡ ಪಿಂಚಣಿ ಮುಂದುವರಿಕೆ ಸರ್ಕಾರದ ಆದೇಶ | ತಹಸೀಲ್ದಾರ್ ಗೆ ಸನ್ಮಾನಿಸಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಅಂಗವಿಕಲರ ಸಂಘ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸ್ಥಗಿತಗೊಂಡ ಸಾಮಾಜಿಕ ಭದ್ರತಾ ಮಾಸಾಶನಗಳನ್ನು (ಪಿಂಚಣಿ) ಅರ್ಹ ಫಲಾನುಭವಿಗಳಿಗೆ ಮುಂದುವರಿಸಲು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಅವರು ಆದೇಶ ಹೊರಡಿಸಿದ್ದ ಪ್ರಯುಕ್ತ ತಾಲೂಕಾ ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೊದ್ದೇಶ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹದ್ ಇಬ್ರಾಹಿಂ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಶುಕ್ರವಾರ ಸನ್ಮಾನಿಸುವ ಮೂಲಕ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸಿದರು.
ಮಾಸಾಶನ ಸ್ಥಗಿತಗೊಂಡಿದ್ದರಿಂದ ಫಲಾನುಭವಿಗಳು ತೀವ್ರ ತೊಂದರೆಯಿಲ್ಲ ಸಿಲುಕಿದ್ದರು. ಈ ಕುರಿತು ಹಲವು ಬಾರಿ ಮನವಿ ಪತ್ರ ನೀಡುವ ಪ್ರತಿಭಟನೆಗಳು ಸಹ ಮಾಡಿ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದು ಮಹ್ಮದ್ ಇಬ್ರಾಹಿಂ ಹೇಳಿದರು.
ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತು ಅಂಗವಿಕಲ ವೇತನಗಳಿಗೆ ಇದ್ದ ವಾರ್ಷಿಕ ಆದಾಯದ ಮಿತಿಯನ್ನು ₹32,000 ರಿಂದ ₹1.20 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಈ ಹಿಂದೆ ತಡೆಹಿಡಿಯಲಾಗಿದ್ದ ಪಿಂಚಣಿಯನ್ನು ಪುನಃ ನೀಡಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ ಎಂದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಕಲ್ಯಾಣಿ ಪೂಜಾರಿ, ಸಿದ್ದಣ್ಣ ಬಾಹರಪೇಟ್, ಶರಣಪ್ಪ ಸಾತನೂರ, ಮಲ್ಲಿನಾಥ ಪಾಟೀಲ, ಮಹಾದೇವ ಸಾತನೂರ ಇದ್ದರು.

