Oplus_0

ವಿಶ್ವ ಹಿರಿಯ ನಾಗರಿಕರ ದಿನಾಚರಣೆ | ಹಿರಿಯರ ಆದರ್ಶ ಭವಿಷ್ಯದ ಬಾಳಿಗೆ ದಾರಿ ದೀಪ: ಸದಾನಂದ ಪೆರ್ಲ ಅಭಿಮತ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ:  ಹಿರಿಯ ನಾಗರಿಕರ ಅನುಭವ ಮತ್ತು ಆದರ್ಶಗಳು ಭವಿಷ್ಯದ ಬಾಳಿಗೆ ದಾರಿ ದೀಪವಾಗುತ್ತದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಹೇಳಿದರು.

ನಗರದ ದನಗರಗಲ್ಲಿ ಕೋರಿ ಮಠದ ಶ್ರೀ ರೇವಣಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಬಸವೇಶ್ವರ ಸೇವಾ ಸಮಾಜದ ಸಹಯೋಗದೊಂದಿಗೆ ಶುಕ್ರವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 1988ರಲ್ಲಿ ಅಮೆರಿಕದ ಅಧ್ಯಕ್ಷರಾದ ರೊನಾಲ್ಡ್ ರೇಗನ್ ವಿಶ್ವಸಂಸ್ಥೆಯಲ್ಲಿ ಮಂಡಿಸಿದ ನಿರ್ಣಯದಂತೆ ಪ್ರತಿ ವರ್ಷ ಆಗಸ್ಟ್ 21 ದಿನವನ್ನು ವಿಶ್ವ ಹಿರಿಯ ನಾಗರಿಕರ ದಿನವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಹಿರಿಯ ನಾಗರಿಕರ ವೃದ್ಧಾಪ್ಯವನ್ನು ಸಂತೋಷದಾಯಕವಾಗಿ ಆರೋಗ್ಯ ಪೂರ್ಣ ಹಾಗೂ ಆರ್ಥಿಕ ಸಬಲತೆಯಿಂದ ನೆಮ್ಮದಿಯಿಂದ ಕಳೆಯುವಂತಾಗಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಹಿರಿಯರ ಆದರ್ಶ ಹಾಗೂ ಅನುಭವದಲ್ಲಿ ಬದುಕನ್ನು ರೂಪಿಸಲು ಎಲ್ಲರೂ ಮುಂದಾಗಬೇಕಾಗಿದೆ. ಪ್ರಸಕ್ತ ಕಾಲದಲ್ಲಿ ಹಿರಿಯರ ಆತ್ಮ ಗೌರವ ಕಾಪಾಡಿ ನೆಮ್ಮದಿಯ ಬದುಕು ನೀಡುವ ಬದಲು ಹೆತ್ತ ಮಕ್ಕಳೇ ವೃದ್ಧಾಶ್ರಮಕ್ಕೆ ತಳ್ಳುವ ಮತ್ತು ನಿಂದನೆಗಳಿಗೆ ಗುರಿ ಮಾಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಯುವ ಜನಾಂಗವು ಹಿರಿಯರ ಕೊಡುಗೆಯನ್ನು ಗೌರವಿಸಿ ಅವರಿಗೆ ಉತ್ತಮ ಜೀವನ ಕಲ್ಪಿಸಲು ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಡಾ. ಪೆರ್ಲ ಹೇಳಿದರು.

ಬಸವೇಶ್ವರ ಸೇವಾ ಸಮಾಜದ ಅಧ್ಯಕ್ಷ ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ಹಿರಿಯರು ನಮ್ಮ ಸಮಾಜದ ಆಸ್ತಿ. ಹಿರಿ ಜೀವಗಳು ಗೌರವಯುತವಾಗಿ ಜೀವನ ಮಾಡಲು ಕುಟುಂಬದಲ್ಲಿ ಸೌಲಭ್ಯ ಕಲ್ಪಿಸಿ ಅವರು ಬೋಧಿಸುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಲು ನಾವೆಲ್ಲಾ ಮುಂದಾಗಬೇಕು ಎಂದರು.

ಹಿರಿಯರ ಜೀವನವು ಕಿರಿಯರಿಗೆ ಮಾದರಿಯಾಗಿ ಜೀವನದಲ್ಲಿ ಸಂಸ್ಕಾರ ರೂಪಿಸಿಕೊಳ್ಳುವಂತೆ

ಸಾನಿಧ್ಯ ವಹಿಸಿದ ಪ್ರವಚನಕಾರ ಅಗತೀರ್ಥದ ಶ್ರೀ ಬೀರಲಿಂಗೇಶ್ವರ ಸಿದ್ದಾಶ್ರಮದ ಪೂಜ್ಯ ಶ್ರೀ ಮಾಳಿಂಗರಾಯ ದೇವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಕೋರಿ ಮಠದ ಪ್ರಧಾನ ಕಾರ್ಯದರ್ಶಿ , ರಜನಿಕಾಂತ ಮೇಳಕುಂದಿ, ಪತ್ರಕರ್ತ ಶಿವಾಜಿ ಖಂಡೋಜಿ ಉಮೇಶ್ ರಾಥೋಡ್ ಶಾಮರಾವ್ ಎಸ್ ಹೊದಲೂರು, ರಾಜಶೇಖರ ಬಿರಾದಾರ, ಗುರುಲಿಂಗಪ್ಪ ಪೂಜಾರಿ, ಶಿವಯೋಗಪ್ಪ ಬಿರಾದಾರ ಶಿವಶರಣಪ್ಪ ಕೋಲಿ, ಲಲಿತಾ ಕುಮಾರಿ ಕವಿತಾ, ಶೃತಿ ಕೆ, ಕುಲಕರ್ಣಿ ರಾಜೇಶ್ವರಿ ಬನಸೋಡೆ ಅಶ್ವಿನಿ, ವಿಮಲಾ ಭೀಮಳ್ಳಿ, ರೇಖಾರಾಣಿ ಬಾಬುರಾವ್ ಸುಜಾತಾ ಕುಲಕರ್ಣಿ ಮತ್ತಿತರರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!