Oplus_0

ಬಸವರಾಜ ಪೂಜಾರಿ ಅವರಿಗೆ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡುವಂತೆ ಕುರುಬ ಸಮಾಜದ ಮುಖಂಡರಿಂದ ಸಚಿವ ಪ್ರಿಯಾಂಕ್ ಖರ್ಗೆ ಗೆ ಮನವಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕು ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮೊಗಲಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಪೂಜಾರಿ ಅವರನ್ನು ರಾಜ್ಯದ ಯಾವುದಾದರೊಂದು ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಬೇಕು ಎಂದು ಕುರುಬ ಸಮಾಜದ ಮುಖಂಡರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.

ಬಸವರಾಜ ಪೂಜಾರಿ ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರಳು ಶ್ರಮಿಸುತ್ತಾ ಬಂದಿರುತ್ತಾರೆ. ಮೇಲಾಗಿ ಲೋಕಸಭೆ, ವಿಧಾನ ಸಭೆ, ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಶ್ರಮಪಟ್ಟಿರುತ್ತಾರೆ.

ಮೊಗಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಡುಬಡವರಿಗೆ, ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಸಹ ಒದಗಿಸಿ ಕೊಟ್ಟಿರುತ್ತಾರೆ. ಆದರೆ ಪಕ್ಷದ ವತಿಯಿಂದ ಇವರಿಗೆ ಇನ್ನು ಯಾವುದೇ ಒಂದು ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ ಈಗ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ನಿಗಮ ಮಂಡಳಿಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಬಸವರಾಜ ಪೂಜಾರಿ ಅವರನ್ನು ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಿ ಕುರುಬ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿ ಭಂಕೂರ, ಮಹಾಂತೇಶ್ ಕೌಲಗಿ, ಸೂರ್ಯಕಾಂತ ಪೂಜಾರಿ ಚಿತ್ತಾಪುರ,  ಯಲ್ಲಾಲಿಂಗ ದಿಡ್ಡಿಮನಿ ಇವಣಿ, ಹಣಮಂತ ಯಾಗಾಪುರ, ಮಲ್ಲಿಕಾರ್ಜುನ ಡಬ್ಬಿಗೇರಿ ಅಣಿಕೇರಿ, ಮಹೇಶ ಧರಿ ಭಂಕೂರ, ಮಲ್ಲಿಕಾರ್ಜುನ ಪೂಜಾರಿ ಮರಗೋಳ,  ಬಸವರಾಜ ಕೇಶ್ವರ್ ವಾಡಿ, ಸಂತೋಷ ಪೂಜಾರಿ ಚಿತ್ತಾಪುರ, ಭೋಜು ಶೇರಿ ಭಾಗೋಡಿ, ಮಲ್ಲಿನಾಥ ಪೂಜಾರಿ ರಾಜೋಳಾ, ಸಿದ್ದು ಪೂಜಾರಿ ವಾಡಿ, ನಾಗೇಂದ್ರ ಗಂಗಾಣಿ ಚಿತ್ತಾಪುರ, ಪ್ರದೀಪ್ ಪೂಜಾರಿ ಕದ್ದರಗಿ,  ಶಿವರಾಜ್ ಪೂಜಾರಿ ಮೂಡಬೂಳ, ನಾಗೇಶ್ ಪೂಜಾರಿ ಚಿತ್ತಾಪುರ, ಕಲ್ಯಾಣಿ ಪೂಜಾರಿ ಚಿತ್ತಾಪುರ, ಉಲ್ಲಾಸ್ ಪೂಜಾರಿ ಮೊಗಲಾ ಸೇರಿದಂತೆ ಇತರರು ಇದ್ದರು.

“ನಾನು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಸಲ್ಲಿಸಿದ ಸೇವೆ ಹಾಗೂ ಪಕ್ಷದ ನಿಷ್ಠೆಯನ್ನು ಪರಿಗಣಿಸಿ ನನಗೆ ರಾಜ್ಯದ ಯಾವುದಾದರೊಂದು ನಿಗಮ ಮಂಡಳಿಯ ಅಧ್ಯಕ್ಷರ ಹುದ್ದೆಗೆ ನೇಮಕ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದ್ದೇನೆ”.-ಬಸವರಾಜ ಪೂಜಾರಿ ಮೊಗಲಾ.

Spread the love

Leave a Reply

Your email address will not be published. Required fields are marked *

You missed

error: Content is protected !!