ಕೆಎಎಸ್ ಆಕಾಂಕ್ಷಿಗಳಿಗೆ ಪ್ರಜ್ಞಾ ಅಕಾಡೆಮಿಯಿಂದ ಉಚಿತ ಸರಣಿ ಪರೀಕ್ಷೆಗಳು: ಕೆಎಂವಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಪ್ರಸ್ತುತ ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಅಧಿಸೂಚನೆಯಂತೆ ಕೆ.ಎ.ಎಸ್. (KAS) ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರಜ್ಞಾ ಅಕಾಡೆಮಿ ವತಿಯಿಂದ ಉಚಿತ ಸರಣಿ ಪರೀಕ್ಷೆಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ನಿರ್ದೇಶಕ ಕೆ.ಎಂ.ವಿಶ್ವನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸರಣಿ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳು ತಮ್ಮ ವಿಷಯ ಜ್ಞಾನ, ಸಮಯ ನಿರ್ವಹಣೆ, ಪ್ರಶ್ನೆ ಬಿಡಿಸುವ ವೇಗ ಹಾಗೂ ಪರೀಕ್ಷಾ ಸಿದ್ಧತೆಯ ಮಟ್ಟವನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಯ ನೈಜ ವಾತಾವರಣದಲ್ಲಿ ಪರೀಕ್ಷೆ ಬರೆಯುವ ಅನುಭವವೂ ದೊರೆಯಲಿದೆ ಎಂದು ಹೇಳಿದ್ದಾರೆ.
ಪ್ರತಿಭಾವಂತ ಅಭ್ಯರ್ಥಿಗಳಿಗೆ ಉತ್ತಮ ವೇದಿಕೆ ಉಚಿತ ಪರೀಕ್ಷೆ, ಉತ್ತಮ ಸಿದ್ಧತೆ, ಉಜ್ವಲ ಭವಿಷ್ಯ. ಕೆ.ಎ.ಎಸ್. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಎಲ್ಲಾ ಆಸಕ್ತ ಅಭ್ಯರ್ಥಿಗಳು ಪರೀಕ್ಷೆಗಳು ನಡೆಯುವ ಸ್ಥಳ: ಪ್ರಜ್ಞಾ ಅಕಾಡೆಮಿ, ಕಲಬುರಗಿ – ಮೊದಲನೇ ಮಹಡಿ ರೆಡ್ಡಿ ಪೆಟ್ರೋಲ್ ಪಂಪ್ ಎದುರುಗಡೆ, ಕೆ.ಇ.ಬಿ. ಕಲ್ಯಾಣ ಮಂಟಪದ ಪಕ್ಕದಲ್ಲಿ ನ್ಯೂ ಜೇವರ್ಗಿ ರಾಮ ಮಂದಿರ ಮುಖ್ಯ ರಸ್ತೆ ಕಲಬುರಗಿ, ಈ ಪರೀಕ್ಷೆಗಳು ದಿನಾಂಕ: 30-08-2026 ಭಾನುವಾರದಂದು ಬೆಳೆಗ್ಗೆ 11 ಗಂಟೆಗೆ ನಡೆಸಲಾಗುತ್ತದೆ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ 9686714046 ಸಂಪರ್ಕಿಸಿ, ಈ ಉಚಿತ ಸರಣಿ ಪರೀಕ್ಷೆಯ ಸದುಪಯೋಗ ಪಡೆದುಕೊಳ್ಳುವಂತೆ ಪ್ರಜ್ಞಾ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಕೆ.ಎಂ.ವಿಶ್ವನಾಥ ಮನವಿ ಮಾಡಿದ್ದಾರೆ.

