ನಿಜಶರಣ ಅಂಬಿಗರ ಚೌಡಯ್ಯನವರ ಮೂಲ ಗದ್ದುಗೆಯ ಅಭಿವೃದ್ಧಿ ಮತ್ತು ಬಸವ ಕಲ್ಯಾಣದಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಜಾಥಾ ಚಿತ್ತಾಪುರಕ್ಕೆ ಸ್ವಾಗತ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಹಾವೇರಿ ಜಿಲ್ಲೆಯ ಚೌಡದಾನಪೂರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪೀಠದ ಸಂಸ್ಥಾಪಕ ಬಿ.ಜಿ.ಸುಣಗಾರ ಅವರು, ಮೂಲ ಗದ್ದುಗೆಯ ಅಭಿವೃದ್ಧಿ ಮತ್ತು ಬಸವಕಲ್ಯಾಣದಲ್ಲಿ ಬಸವಣ್ಣ ನವರ ಅನುಭವ ಮಂಟಪದಲ್ಲಿ ಸಮಕಾಲೀನ ಶರಣರಾದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಬಸವಕಲ್ಯಾಣದಿಂದ ಬೆಂಗಳೂರಿನ ವರೆಗೆ ಹಮ್ಮಿಕೊಂಡಿದ್ದ ಹೋರಾಟ ಜನಜಾಗೃತಿಯ ಜಾಥಾ ಚಿತ್ತಾಪುರ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಕೋಲಿ ಸಮಾಜದ ಮುಖಂಡರು ಭವ್ಯವಾಗಿ ಸ್ವಾಗತಿಸಿದರು.
ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ ಯಾಗಾಪೂರ ಕುಲದೇವತೆ ಗಂಗಾ ಪರಮೇಶ್ವರಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.
ಸಂಸ್ಥಾಪಕ ಬಿ.ಜಿ.ಸುಣಗಾರ ಅವರು ಮಾತನಾಡಿ, ಸಮಾಜಕ್ಕೆ ಜನ ಜಾಗೃತಿಯ ಸಂದೇಶದ ಕರೆ ಕೊಟ್ಟರು. ಜಾಥಾದ ಕೊನೆಯ ದಿನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಸಂದರ್ಭ ಹೆಚ್ಚಿನ ಜನ ಬಂದು ಸಮಾಜದ ಕಾಳಜಿ ಮೆರೆಯಲು ಮತ್ತು ಮೂಲ ಗದ್ದುಗೆ ಅಭಿವೃದ್ಧಿ ಹೊಂದಲು ಕಾರಣಿಭೂತರಾಗಿ ಎಂದು ಮನವಿ ಮಾಡಿದರು.
ಕೋಲಿ ಸಮಾಜದ ಯುವ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್, ಯುವ ಗೌರವಾಧ್ಯಕ್ಷ ಹಾಗೂ ರಾಜ್ಯ ಗಂಗಾಪುತ್ರ ಘರ್ಜನೆ ಪಡೆಯ ರಾಜ್ಯಾಧ್ಯಕ್ಷ ಗುಂಡು ಐನಾಪೂರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ದಶರಥ ದೊಡ್ಡಮನಿ ಶರಣು ಅರಣಕಲ್, ರಾಜು ಹೊಸ್ಸುರ್, ಕಾಶಿನಾಥ್, ತಿಪ್ಪಣ್ಣ ಇವಣಿ, ಮಲ್ಲು ಮುಗಳನಾಗಾಂವ್, ಆನಂದ ಯರಗಲ್, ಮಲ್ಲಿಕಾರ್ಜುನ ಬೆಣ್ಣೂರಕರ್ ಸೇರಿದಂತೆ ಇತರರು ಇದ್ದರು.

