Oplus_0

ತ್ರಿಮೂರ್ತಿಗಳಿಗೆ ಗೌರವ ಸನ್ಮಾನ | ಜವಾಬ್ದಾರಿಗಳು ಹಾಗೂ ಸನ್ಮಾನಗಳು ಮನುಷ್ಯನ ಬೆಳವಣಿಗೆಗೆ ಸ್ಪೂರ್ತಿ ನೀಡಲಿವೆ: ಗುತ್ತೇದಾರ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಜವಾಬ್ದಾರಿಗಳು ಹಾಗೂ ಸನ್ಮಾನಗಳು ಮನುಷ್ಯನ ಬೆಳವಣಿಗೆಗೆ ಸ್ಪೂರ್ತಿ ನೀಡಲಿವೆ ಎಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಅಭಿಪ್ರಾಯಪಟ್ಟರು.

ನಾಗಾವಿ ಎಕ್ಸಪ್ರೆಸ್ ಕಾರ್ಯಾಲಯದಲ್ಲಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿಮಾನದ ಸನ್ಮಾನ ಸಮಾರಂಭದಲ್ಲಿ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಣ್ಣಗೌಡ ನಾಲವಾರ, ಪಂಚ್ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸುರೇಶ್ ಗುತ್ತೇದಾರ ಹಾಗೂ ಹಿರಿಯ ನಾಗರಿಕರ ಸಂಘದ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಮಹ್ಮದ್ ಇಬ್ರಾಹಿಂ ಅವರಿಗೆ ಸನ್ಮಾನಿಸಿ ಗೌರವಿಸಿ ಅವರು ಮಾತನಾಡಿದರು.

ಜವಾಬ್ದಾರಿಗಳು ಹಾಗೂ ಸನ್ಮಾನಗಳು ಎಲ್ಲರಿಗೂ ಸಿಗುವುದಿಲ್ಲ ಅವು ಸಮರ್ಥರಿಗೆ ಹಾಗೂ ಅರ್ಹರಿಗೆ ಮಾತ್ರ ಸಿಗುತ್ತವೆ. ಸಮಾಜದಲ್ಲಿ ಸಿಗುವ ಸನ್ಮಾನಗಳಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚಿಸುತ್ತದೆ, ನೀವಿರುವ ಕ್ಷೇತ್ರಗಳಲ್ಲಿ ಇನ್ನಷ್ಟು ಬೆಳವಣಿಗೆ ಆಗಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಸಂಗಣ್ಣಗೌಡ ನಾಲವಾರ, ಸುರೇಶ್ ಗುತ್ತೇದಾರ ಕರದಾಳ ಮತ್ತು ಮಹ್ಮದ್ ಇಬ್ರಾಹಿಂ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಶಾಂತಕುಮಾರ್ ಮಳಖೇಡ, ರಾಜಶೇಖರ್ ಬಳ್ಳಾ, ದೇವಪ್ಪ ನಂದೂರಕರ್, ಹಾಜಿ ಸಾಬ್ ಮುಲ್ಲಾ, ಜಗನ್ನಾಥ ಬಡಿಗೇರ, ವಿಜಯಕುಮಾರ್ ಭಂಕಲಗಿ, ವಿಠಲ್ ಕಟ್ಟಿಮನಿ, ರವಿಶಂಕರ್ ಬುರ್ಲಿ, ಸಂತೋಷ ಕಟ್ಟಿಮನಿ, ಪ್ರಕಾಶ್ ವಿಶ್ವಕರ್ಮ, ಚಂದ್ರು ಕಾಶಿ ಸೇರಿದಂತೆ ಇತರರು ಇದ್ದರು. ನರಸಪ್ಪ ಚಿನ್ನಕಟ್ಟಿ ನಿರೂಪಿಸಿ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!