Oplus_0

ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಮಹೋತ್ಸವ | ಅ.7 ರಂದು ಪೂರ್ವಭಾವಿ ಸಭೆ: ಹಿರೇಮಠ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಸ್ಥಾನದ ಪಲ್ಲಕ್ಕಿ, ಮಹೋತ್ಸವ (ಜಾತ್ರೆಯು) ಇದೇ ಅಕ್ಟೋಬರ್ 26 ರಂದು ಜರುಗಲಿರುವ ಪ್ರಯುಕ್ತ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅ.7 ರಂದು ಬೆಳಗ್ಗೆ 11 ಗಂಟೆಗೆ ಪೂರ್ವ ಸಿದ್ಧತಾ ಸಭೆ ಕರೆಯಲಾಗಿದೆ  ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷರು, ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

ಮುಖ್ಯಾಧಿಕಾರಿಗಳು ಪುರಸಭೆ ಚಿತ್ತಾಪುರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ ಉಪ-ವಿಭಾಗ ಚಿತ್ತಾಪುರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ಸಹಾಯಕ ಕಾರ್ಯಾನಿರ್ವಾಹಕ ಅಭಿಯಂತರರು, ವಿದ್ಯುತ್ ಪ್ರಸರಣ ನಿಗಮ, ಆರಕ್ಷಕರ ವೃತ್ತ ನಿರೀಕ್ಷಕರು ಪೋಲೀಸ್ ಠಾಣೆ ಚಿತ್ತಾಪುರ, ಅರಕ್ಷಕ ಉಪ-ನಿರೀಕ್ಷಕರು ಪೋಲೀಸ್ ಠಾಣೆ ಚಿತ್ತಾಪುರ, ಅಗ್ನಿಶಾಮಕ ಠಾಣಾಧಿಕಾರಿಗಳು ಚಿತ್ತಾಪುರ, ವ್ಯವಸ್ಥಾಪಕರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿತ್ತಾಪುರ ಘಟಕ, ತಾಲೂಕು ಆರೋಗ್ಯ ಅಧಿಕಾರಿಗಳು ಸಾರ್ವಜನಿಕರ ಆಸ್ಪತ್ರೆ ಚಿತ್ತಾಪುರ, ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು ಪುರಸಭೆ ಚಿತ್ತಾಪುರ, ರತ್ನಾಕರ ನಾಯಕ ಸರಾಫ್, ಗೌತಮ್ ರಾಮರಾವ ನಾಯಕ, ದೇವಸ್ಥಾನದ ಅರ್ಚಕರು, ಚಿತ್ತಾಪುರಿನ ಎಲ್ಲಾ ಸಮಾಜದ ಮುಖಂಡರು ಸದರಿ ಸಭೆಗೆ ಆಗಮಿಸಿ ಪಲ್ಲಕ್ಕಿ ಮಹೋತ್ಸವ ಬಗ್ಗೆ, ಸಲಹೆ ಸೂಚನೆಗಳು ನೀಡಲು ಪತ್ರಿಕೆ ಪ್ರಕಟಣೆ ಮೂಲಕ ಕೋರಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!