ಚಿತ್ತಾಪುರದಲ್ಲಿ 2.85 ಕೋಟಿ ವೆಚ್ಚದ ವೀರಶೈವ ಕಲ್ಯಾಣ ಮಂಟಪ ಕಾಮಗಾರಿ ಪ್ರಾರಂಭ | ಒಂದು ವರ್ಷದಲ್ಲಿ ಪೂರ್ಣ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಕೇಂದ್ರ ಸ್ಥಾನದಲ್ಲಿ ಸ್ಟೇಷನ್ ರಸ್ತೆಯ ಶಿವರಾವ್ ಪಾಟೀಲ ಬೆಳಗುಂಪಾ ಮನೆಯ ಹತ್ತಿರ ಸುಸಜ್ಜಿತ ಹಾಗೂ ಹವಾ ನಿಯಂತ್ರಿತ ವೀರಶೈವ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು ಬರುವ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಪ್ರಧಾನ ಕಾರ್ಯದರ್ಶಿ ಆನಂದ ಪಾಟೀಲ ನರಿಬೋಳ ಹಾಗೂ ಪ್ರಮುಖರಾದ ಓಂಕಾರೇಶ್ವರ ರೇಷ್ಮಿ ಅವರು ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಮಹಾಸಭಾ ಅಡಿಯಲ್ಲಿ ಹಾಗೂ ಕಲ್ಯಾಣ ಮಂಟಪ ನಿರ್ಮಾಣ ಸಮಿತಿ ಅಧ್ಯಕ್ಷ ರಮೇಶ್ ಮರಗೋಳ ನೇತೃತ್ವದಲ್ಲಿ ರೂ. 2.85 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಉದ್ದೇಶಿತ ವೀರಶೈವ ಕಲ್ಯಾಣ ಮಂಟಪದಲ್ಲಿ, ಕೆಳ ಮಹಡಿ ಊಟ ಮಾಡುವ ಹಾಲ್ ಹಾಗೂ ಅಡುಗೆ ಮನೆ, ಎರಡನೇ ಮಹಡಿಯಲ್ಲಿ ಕಾರ್ಯಕ್ರಮದ ಸಭಾಂಗಣ, ಮೂರನೇ ಮಹಡಿಯಲ್ಲಿ ಎಂಟು ಕೊಠಡಿಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ದಾನಿಗಳಿಂದ 80 ಲಕ್ಷ ಸಂಗ್ರಹವಾಗಿದೆ ಇನ್ನೂ ಅನೇಕ ದಾನಿಗಳು ದೇಣಿಗೆ ನೀಡುವುದಾಗಿ ಹೇಳಿದ್ದಾರೆ, ಹೀಗಾಗಿ ಸ್ವ ಇಚ್ಛೆಯಿಂದ ಇನ್ನೂ ಯಾರಾದರೂ ದೇಣಿಗೆ ನೀಡುವವರಿದ್ದರೆ ಆನಂದ ಪಾಟೀಲ ನರಿಬೋಳ 7483918742 ಮತ್ತು ಓಂಕಾರೇಶ್ವರ ರೇಷ್ಮಿ 9845194545 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಚಿತ್ತಾಪುರ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪ ಎಲ್ಲರಿಗೂ ಅನುಕೂಲವಾಗಲಿದೆ. ವಿಶೇಷವಾಗಿ ಹವಾ ನಿಯಂತ್ರಿತ (ಎಸಿ) ಕಲ್ಯಾಣ ಮಂಟಪ ಜೊತೆಗೆ ಸುಸಜ್ಜಿತ ಹಾಗೂ 1200 ಜನರು ಕೂಡುವ ಸಾಮರ್ಥ್ಯ ಹೊಂದಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಾಗರಾಜ ಹೂಗಾರ, ಸಂಗಮೇಶ ಪಾಟೀಲ, ಮಲ್ಲಿಕಾರ್ಜುನ ಇಟಗಿ, ಸಂಜೀವಕುಮಾರ ಕೊಟ್ರಕಿ, ಸಂತೋಷ ಪೂಜಾರಿ, ಹನುಮಾನ್ ಜೀ ಇದ್ದರು.

