ಸ್ಮಿತ್ ಶೀಘ್ರ ಗುಣಮುಖಕ್ಕಾಗಿ ವಿಶೇಷ ಪೂಜೆ ಪ್ರಾರ್ಥನೆ | ಆಪತ್ಬಾಂಧವ ಸ್ಮಿತ್ ನಮ್ಮೆಲ್ಲರ ಹೆಮ್ಮೆ : ವೀರಣ್ಣ ಯಾರಿ

ನಾಗಾವಿ ಎಕ್ಸಪ್ರೆಸ್ 

ವಾಡಿ: ತಾನು ಬದುಕುವುದು ಮಾತ್ರವಲ್ಲದೆ, ಇತರರ ಜೀವ ಉಳಿಸಿ ಬದುಕಿಸುವುದೇ ನಿಜವಾದ ಧರ್ಮ ಹಾಗೂ ಶ್ರೇಷ್ಠ ಭಕ್ತಿ ಎಂಬುದನ್ನು ತನ್ನ ನಿಸ್ವಾರ್ಥ ಸೇವೆಯ ಮೂಲಕ ಸಾಬೀತು ಪಡಿಸಿದ ಆಪತ್ಬಾಂಧವ ಸ್ಮಿತ್ ನಮ್ಮೆಲ್ಲರ ಹೆಮ್ಮೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.

ಅವರ ಶೀಘ್ರ ಗುಣಮುಖಕ್ಕಾಗಿ ಪಟ್ಟಣದ ಶ್ರೀ ಶಕ್ತಿ ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜೆ, ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೆಪ್ಟೆಂಬರ್‌ 30ರಂದು ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್ ನಗರಕ್ಕೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ, ಭಾರತೀಯ ಮೂಲದ ಮುಖ್ಯ ಪೈಲಟ್ ಆದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆಯೇ ಒಮಾನಿ ಮೂಲದ ಸಹ-ಪೈಲಟ್ ಹಠಾತ್ ಚಾಕುವಿನಿಂದ ಭೀಕರವಾಗಿ ದಾಳಿ ನಡೆಸಿದ್ದು ವಿವರಿಸಿದರು.

ವಿಮಾನವನ್ನು ಪತನಗೊಳಿಸುವ ಉದ್ದೇಶದಿಂದ ಸಹ-ಪೈಲಟ್ ಈ ಕೃತ್ಯ ಎಸಗಿದ್ದ ಎನ್ನಲಾಗಿದೆ. ತೀವ್ರ ಇರಿತಕ್ಕೊಳಗಾಗಿ ರಕ್ತಸ್ರಾವದಿಂದ ಜೀವನ್ಮರಣದ ಹೋರಾಟದಲ್ಲಿದ್ದರೂ ಕ್ಯಾಪ್ಟನ್ ಸ್ಮಿತ್ ಧೈರ್ಯ ಕಳೆದುಕೊಳ್ಳಲಿಲ್ಲ. ವಿಮಾನ ಸ್ವಯಂಚಾಲಿತವಾಗಿ ದುರಂತಕ್ಕೀಡಾಗುವುದನ್ನು ತಪ್ಪಿಸಲು ಪ್ರಜ್ಞೆ ತಪ್ಪುವ ಮುನ್ನವೇ ಕಾಕ್‌ಪಿಟ್ ಬಾಗಿಲನ್ನು ಅನ್‌ಲಾಕ್ ಮಾಡಿದರು. ತನ್ಮೂಲಕ ವಿಮಾನದಲ್ಲಿದ್ದ 170ಕ್ಕೂ ಹೆಚ್ಚು ಪ್ರಯಾಣಿಕರ ಜೀವವನ್ನು ಯಶಸ್ವಿಯಾಗಿ ರಕ್ಷಿಸಿದರು.

ಈ ಭೀಕರ ಕ್ಷಣದಲ್ಲಿ ತಮಗೆ ಎದುರಾದ ಮರಣಭಯ ಮತ್ತು ಆತಂಕವನ್ನು ಜಯಿಸಲು ‘ಹನುಮಾನ್ ಚಾಲೀಸಾ’ ಪಠಿಸುತ್ತಿದ್ದಾಗಿ ಸ್ಮಿತ್ ಪ್ರಧಾನಿಯವರ ಬಳಿ ಹಂಚಿಕೊಂಡ್ಡಿದ್ದು ನಮ್ಮ ಧರ್ಮದ ಸಾರವನ್ನು ಜಗತ್ತಿನ ಕಣ್ಮುಂದೆ ಮತ್ತೊಮ್ಮೆ ಸಾಕ್ಷಿಮಾಡಿಸಿದ ಸ್ಮಿತ್ ನಮ್ಮ ನೆಲದ ಗೌರವ ಮತ್ತಷ್ಟು ಉನ್ನತಕೇರಿಸಿದ್ದಾರೆ ಎಂದರು.

ಯುವ ಮೋರ್ಚಾ ಅಧ್ಯಕ್ಷ ಭಾಗಣ್ಣ ದೊರೆ ಮಾತನಾಡಿ, ಸಮಾಜ ಮತ್ತು ಸುತ್ತಲಿನ ಜನರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಯುವಕರು ಕೇವಲ ತಮ್ಮ ವೃತ್ತಿಜೀವನ ಮಾತ್ರವಲ್ಲದೆ, ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂಬುದಕ್ಕೆ ಇವರ ಜೀವನ ಉದಾಹರಣೆಯಾಗಿದೆ ಎಂದರು.

ಈ ಸಂಧರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಸಾತಖೇಡ, ಪ್ರಕಾಶ ಪುಜಾರಿ, ದತ್ತಾ ಖೈರೆ, ಯಂಕಮ್ಮ ಗೌಡಗಾಂವ, ನಿರ್ಮಲಾ ಇಂಡಿ, ಮನಿಷ್ ವಾಲಿಯ, ರಾಜು ಶಾಲಿ, ರಾಚಪ್ಪ ವಿಶ್ವಕರ್ಮ, ಪ್ರದೀಪ ಜಾಧವ್, ರೊಷಿನಿ ರಾಠೋಡ, ಸೊಮು ಚವ್ಹಾಣ, ಶರಣಪ್ಪ ರಾಯಿಚೂರಕರ್, ವಿಠಲ ಕದಮ್, ಆಕಾಶ ಕದಮ, ದೇವೇಂದ್ರ ನಾಟೆಕರ, ವಿನಾಯಕ ಚವ್ಹಾಣ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!