ಚಿತ್ತಾಪುರ ಕೈಗಾರಿಕಾ ಸಮಸ್ಯೆಗಳ ಕುರಿತು ಕೆಎಎಸ್ಎಸ್ಐಎ ಗೆ ಸಿಟಿಎಸ್ಎಸ್ಐಎ ಮನವಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಚಿತ್ತಾಪುರ ಸಣ್ಣ ಕೈಗಾರಿಕೆಗಳ ಸಂಘ (CTSSIA) ವತಿಯಿಂದ ಮಂಗಳವಾರ KKCCI, ಕಲಬುರಗಿಯಲ್ಲಿ ನಡೆದ ಜಿಲ್ಲಾ ಸಂಯೋಜಿತ ಸಂಘಗಳ ಸಭೆಯಲ್ಲಿ, KASSIA ಬೆಂಗಳೂರಿನ ಉಪಾಧ್ಯಕ್ಷರಿಗೆ ಚಿತ್ತಾಪುರದ ಪ್ರಮುಖ ಕೈಗಾರಿಕಾ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು.
1ನೇ ಹಂತದ (ಹಳೆಯ) KSSIDC ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ಚರಂಡಿ, ನೀರು, ಬೀದಿದೀಪ, ಬಾಕಿ ಇರುವ ಮಾರಾಟ ಪತ್ರಗಳು, ಖಾತಾ ಮತ್ತು ಇತರ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು, ಈಗಾಗಲೇ ಅಭಿವೃದ್ಧಿಪಡಿಸಿರುವ 2ನೇ ಹಂತದ KSSIDC ಕೈಗಾರಿಕಾ ಪ್ರದೇಶದಲ್ಲಿನ ಅತ್ಯಧಿಕ ಪ್ಲಾಟ್ ದರವನ್ನು ಪರಿಷ್ಕರಿಸುವಂತೆ ಒತ್ತಾಯಿಸಲಾಯಿತು.
ಅರ್ಹ MSME ಉದ್ಯಮಿಗಳಿಗೆ ಕೈಗಾರಿಕಾ ಪ್ಲಾಟ್ ದರದ ಮೇಲೆ 50% ವರೆಗೆ KKRDB ಸಹಾಯಧನ/ಆರ್ಥಿಕ ನೆರವು ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಈ ಸಮಸ್ಯೆಗಳನ್ನು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆಗಳ ಸಚಿವರು, KKRDB, KSSIDC ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ KASSIA ಮೂಲಕ ಮುಂದುವರಿಸಿ, ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಸಭೆಯಲ್ಲಿ ಎಚ್.ಎನ್. ರಾಮಕೃಷ್ಣಯ್ಯ, ಉಪಾಧ್ಯಕ್ಷರು KASSIA, ಮಲ್ಲೇಶ್ ಜಾದರ್ ಜಂಟಿ ಕಾರ್ಯದರ್ಶಿ ಗ್ರಾಮೀಣ, ಕೆ.ಎಸ್. ಅಶ್ವತ್ಥನಾರಾಯಣ, ಭೀಮಾಶಂಕರ ಬಿ. ಪಾಟೀಲ್, ಸಿ.ಸಿ. ನಂದಿಕೋಲ್, ಶರಣು ಪಪ್ಪಾ, ಅಧ್ಯಕ್ಷರು, KKCCI ಕಲಬುರಗಿ, ಶಿವರಾಜ್ ಇಂಗಿನಶೆಟ್ಟಿ ಕಾರ್ಯದರ್ಶಿ KKCCI ಕಲಬುರಗಿ, ಸಯ್ಯದ್ ನಿಜಾಮುದ್ದೀನ್ ಚಿಸ್ತಿ ಅಧ್ಯಕ್ಷರು, CTSSIA ಹಾಗೂ ಅಬ್ದುಲ್ ಬಾಸಿತ್ ಕಾರ್ಯದರ್ಶಿ CTSSIA ಉಪಸ್ಥಿತರಿದ್ದರು.
ಚಿತ್ತಾಪುರದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ, ಹೊಸ ಕೈಗಾರಿಕಾ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ CTSSIA ನಿರಂತರವಾಗಿ ಶ್ರಮಿಸಲಿದೆ ಎಂದು ತಾಲೂಕು ಅಧ್ಯಕ್ಷ ಸೈಯ್ಯದ್ ನಿಜಾಮುದ್ದೀನ್ ಚಿಸ್ತಿ ತಿಳಿಸಿದ್ದಾರೆ.
