Oplus_0

ಚಿತ್ತಾಪುರ: ಅ.23 ರಂದು ಲಿಂ.ಸೋಮಶೇಖರ ಶಿವಾಚಾರ್ಯರ ಕರ್ತೃ ಗದ್ದುಗೆಯ ಕಟ್ಟಡದ ಲೋಕಾರ್ಪಣೆ ಅ.24 ರಂದು ಕರ್ತೃ ಗದ್ದುಗೆಯಲ್ಲಿ ಶಿವಲಿಂಗ ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮಸಭೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಶ್ರೀ ಋಗ್ವದ ವೈಧಿಕ ಪುರೋಹಿತರ ಟ್ರಸ್ಟ್ ಚಿತ್ತಾಪುರ ವತಿಯಿಂದ ಪಟ್ಟಣದ ಬಾಹರಪೇಟ್ ಶ್ರೀ ನಾಗಾವಿ ಮಠದ ಆವರಣದಲ್ಲಿ ಅಕ್ಟೋಬರ್ 23 ಮತ್ತು 24 ರಂದು ನಾಗಾವಿ ಮಠದ ಪೀಠಾಧಿಪತಿಗಳಾಗಿದ್ದ ಲಿಂ. ಶ್ರೀ ಸೋಮಶೇಖರ ಶಿವಾಚಾರ್ಯರ ಕರ್ತೃ ಗದ್ದುಗೆಯ ಕಟ್ಟಡದ ಲೋಕಾರ್ಪಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿವಶರಣಯ್ಯ ಸ್ವಾಮಿ, ಕರಿಬಸಯ್ಯ ಶಾಸ್ತ್ರಿ ಅವರು ತಿಳಿಸಿದ್ದಾರೆ.

ಅ.23 ರಂದು ಬೆಳಿಗ್ಗೆ 7.30 ಗಂಟೆಗೆ ಶಿವಲಿಂಗ ಮೂರ್ತಿಯ ಗಂಗಾಸ್ನಾನ ನಂತರ ಕುಂಭ ಕಳಶಗಳೊಂದಿಗೆ ಭವ್ಯ ಮೆರವಣಿಗೆ ನಂತರ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ, ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಮತ್ತು ರಾಜಕೀಯ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಹೊನ್ನಕಿರಣೆಗಿ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದ ಶ್ರೀ ಚಂದ್ರಗುಂಡ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ದಿಗ್ಗಾಂವ ಶ್ರೀ ಸಿದ್ಧವೀರ ಶಿವಾಚಾರ್ಯರು ಉದ್ಘಾಟಿಸುವರು, ಕೋತ್ತಲಬಸವೇಶ್ವರ ದೇವಾಲಯ ಸೇಡಂ ಶ್ರೀ ಸದಾಶಿವ ಮಹಾಸ್ವಾಮಿಗಳು ನೇತೃತ್ವ ವಹಿಸುವರು, ತೊಟ್ನಳ್ಳಿ ಶ್ರೀ ಡಾ. ತ್ರಿಮೂರ್ತಿ ಶಿವಾಚಾರ್ಯರು ಸಂಗಾವಿ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಅಳ್ಳೋಳ್ಳಿ ಶ್ರೀ ಸಂಗಮನಾಥ ಮಹಾಸ್ವಾಮಿಗಳು, ಮುಖ್ಯ ಅತಿಥಿಗಳಾಗಿ ಬಸವರಾಜಗೌಡ ಹೊನ್ನಾಳ, ಅಯ್ಯಣ್ಣ ಸಾಹು ಗಡೆಸೂರ, ಡಾ. ಚಂದ್ರಶೇಖರ ಕಾಂತಾ, ಬಸವರಾಜ ಪಾಟೀಲ್ ಬೆಳಗುಂಪಾ, ರವೀಂದ್ರ ಸಜ್ಜನಶೆಟ್ಟಿ, ಪ್ರಭುದೇವ ಬೊಮ್ಮನಹಳ್ಳಿ, ಮಲ್ಲಿಕಾರ್ಜುನರಡ್ಡಿ ಇಜಾರ್, ಶಿವನರಡ್ಡಿ ಪೋತರಡ್ಡಿ, ಶ್ರೀನಿವಾಸರಡ್ಡಿ ಪಾಲಪ್, ಚಂದ್ರಶೇಖರ ಉಟಗೂರ, ಮಲ್ಲಿಕಾರ್ಜುನ ತೆಂಗಳಿ, ಸುಧಾಕರ ಡೆಂಗಿ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.

ಅ. 24 ರಂದು ಬೆಳಿಗ್ಗೆ 10.30 ಕ್ಕೆ ಚಿತ್ತಾಪುರ ನಾಗಾವಿ ಮಠದ ಪೀಠಾಧಿಪತಿಗಳಾಗಿದ್ದ ಲಿಂ. ಶ್ರೀ ಸೋಮಶೇಖರ ಶಿವಾಚಾರ್ಯರ ಕರ್ತೃ ಗದ್ದುಗೆಯಲ್ಲಿ ಶಿವಲಿಂಗ ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮಸಭೆ ನಡೆಯಲಿದೆ.

ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಕಂಬಳೇಶ್ವರ ಸಂಸ್ಥಾನ ಮಠ ಶ್ರೀ ಸೋಮಶೇಖರ ಶಿವಾಚಾರ್ಯರು, ಪಾಳಾ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಹಲಕರ್ಟಿ ಹಿರೇಮಠ ಶ್ರೀ ಅಭಿನವ ಮುನೀಂದ್ರ ಶಿವಾಚಾರ್ಯರು, ಬೆಳಗುಂಪಾ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಸೂಗೂರು ಶ್ರೀ ಡಾ. ಚನ್ನರುದ್ರಮುನಿ ಶಿವಾಚಾರ್ಯರು, ಹಲಕರ್ಟಿ ಶ್ರೀ ರಾಜಶೇಖರ ಶಿವಾಚಾರ್ಯರು, ರಾವೂರ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀನಿವಾಸ ಸರಡಗಿ ಶ್ರೀ ಅಪ್ಪರಾವದೇವಿ ಮುತ್ಯಾ, ಕಲಬುರಗಿ ಶರಣಬಸವೇಶ್ವರ ಸಂಸ್ಥಾನ ಶ್ರೀ ಲಿಂಗರಾಜಪ್ಪ ಅಪ್ಪಾ, ದಿಗ್ಗಾಂವ ಶ್ರೀ ಮಲ್ಲಯ್ಯ ಸ್ವಾಮಿಗಳು, ಮಾಲಗತ್ತಿ ಶ್ರೀ ಚನ್ನಬಸವ ಶರಣರು, ತೋನಸನಳ್ಳಿ ಶ್ರೀ ಶ್ರೀ ಮಲ್ಲಣಪ್ಪ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಮುಖಂಡರಾದ ಸೋಮಶೇಖರ ಪಾಟೀಲ್ ಬೆಳಗುಂಪಾ, ನಾಗರೆಡ್ಡಿ ಪಾಟೀಲ ಕರದಾಳ, ಹಿರಿಯ ನ್ಯಾಯವಾದಿ ಚಂದ್ರಶೇಖರ ಅವಂಟಿ, ಡಾ. ಪ್ರಭುರಾಜ ಕಾಂತಾ, ಚಂದ್ರಶೇಖರ ತೆಂಗಳಿ ಸಾತನೂರು, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಅಣ್ಣಾರಾವ್ ಪಾಟೀಲ ಮುಡಬೂಳ, ಅಶೋಕ ನಿಪ್ಪಾಣಿ, ಮಲ್ಲರಡ್ಡಿ ಗೋಪಸೇನ್, ಆನಂದ ಪಾಟೀಲ ನರಿಬೋಳ, ಶರಣಬಸಪ್ಪ ಬೊಮ್ಮನಳ್ಳಿ, ನಾಗರಾಜ ಪರಂಡೆ, ಶಿವರಡ್ಡಿ ಪಾಲಪ್, ಓಂಕಾರೇಶ್ವರ ರೇಷ್ಮಿ, ಬಸವರಾಜ ಎ. ಕಾಳಗಿ, ಪುರಸಭೆ ಸದಸ್ಯರಾದ ರಮೇಶ ಬಮ್ಮನಹಳ್ಳಿ, ಶಿವರಾಜ್ ಪಾಳೇದ್ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ವಿವಿಧ ಸೇವಾಧಾನಿಗಳಾದ ಮಮತಾ ಕರಬಸಯ್ಯ ಶಾಸ್ತ್ರೀ, ವೆಂಕಟಮ್ಮ ಎಮ್. ಪಾಲಪ್, ಪೂರ್ಣಿಮಾ ವೀರಭದ್ರಪ್ಪ ಪಾಟೀಲ್ ಹುಮನಾಬಾದ, ಸವಿತಾ ಬಸವರಡ್ಡಿಗೌಡ ಪಾಲಪ್,ಮೇ॥ ಗುರು ಗ್ಯಾಸ್ ಏಜೇನ್ಸಿ ಚಿತ್ತಾಪುರ ಅವರಿಗೆ ವಿಶೇಷ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!