ದಿಗ್ಗಾಂವ ಪುರಾಣ ಕಾರ್ಯಕ್ರಮಕ್ಕೆ ಚಾಲನೆ, ಶರಣಬಸವೇಶ್ವರರು ಕಲ್ಯಾಣ ಕರ್ನಾಟಕ ಶ್ರೇಷ್ಠ ಶರಣರು: ದಿಗ್ಗಾಂವ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಶರಣಬಸವೇಶ್ವರರು ತ್ರಿವಿಧ ದಾಸೋಹ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಶ್ರೇಷ್ಠ ಶರಣಾಗಿದ್ದಾರೆ ಎಂದು ದಿಗ್ಗಾಂವ ಪಂಚಗೃಹ ಹಿರೇಮಠ ಶ್ರೀ ಸಿದ್ದವೀರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಶ್ರೀ ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಕಲಬುರಗಿಯ ಮಹಿಮಾ ಪುರುಷ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಲಣಬಸವೇಶ್ವರರು ತಮ್ಮ ಕಾಯಕದಲ್ಲಿಯೇ ಕೈಲಾಸವನ್ನು ಕಂಡಿದ್ದರು ಎಂದು ಹೇಳಿದರು.
ದಾಸೋಹಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಶರಣಬಸವೇಶ್ವರರು ಈ ಭಾಗದ ಕಾಮಧೇನು ಕಲ್ಪವೃಕ್ಷರಾಗಿದ್ದಾರೆ. ಬೇಡಿದ್ದನ್ನು ಕರುಣಿಸುವ ಶರಣಬಸವೇಶ್ವರರು ಸದಾ ಭಕ್ತರ ಹೃದಯ ಮಂದಿರದಲ್ಲಿ ನೆಲೆ ನಿಂತಿದ್ದಾರೆ ಎಂದು ನುಡಿದರು.
ದೇವಸ್ಥಾನದ ಅಧ್ಯಕ್ಷ ಸಿದ್ದಣ್ಣಗೌಡ ಮಾಲಿಪಾಟೀಲ, ಸಿದ್ದಣಗೌಡ ಪೊಲೀಸ್ ಪಾಟೀಲ್ ದಳಪತಿ, ಗ್ರಾಮ ಪಂಚಾಯತಿ ಅಧ್ಯಕ್ಷ ಹರಳಯ್ಯ ಎಸ್. ಬಡಿಗೇರ್ ಉಪಾಧ್ಯಕ್ಷ ಜಗನ್ನಾಥ್ ಸೀದಾ, ಶ್ರೀಶೈಲ್ ಪೊಲೀಸ್ ಪಾಟೀಲ, ಮಲ್ಲಿನಾಥ್ ಬಾಗೋಡಿ, ದೇವಿಂದ್ರ ಆಣಿಕೇರಿ, ಲಿಂಗಣಗೌಡ ಸಜ್ಜನ್, ಪಂಪಣ್ಣ ಸಜ್ಜನ್, ಮಲ್ಲಿನಾಥ್ ಮಾಲಿಪಾಟೀಲ ಕುಸುನೂರ, ಬಸವರಾಜ್ ಹಾಗರಗಿ, ಚನ್ನವೀರ ಕಣಗಿ, ಸುರೇಶ್ ಅಚೇಲಿ, ಬನಶಂಕರ ಕೋರಿ, ವೀರೇಶ್ ಸಂಗಾವಿ, ಮಲಶೆಟ್ಟಪ್ಪ ಸಂಗವಿ, ಶಿವನಾಗಪ್ಪ ಮುತ್ತಲಗಡ್ಡಿ, ದೇವೇಂದ್ರಪ್ಪ ಇಟಗಿ, ಸೂರ್ಯಕಾಂತ ಇಟಗಿ, ಸಂಪತ್ ಸಜ್ಜನ್, ಬಸವರಾಜ್ ತೆಗ್ಗಿನಮನಿ, ರಾಜಶೇಖರ ಪುಟಪಾಕ್, ಅಭಿವೃದ್ಧಿ ಅಧಿಕಾರಿ ಸಾಯಿಬಣ್ಣ ಇವಣಿ ಸೇರಿದಂತೆ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪುರಾಣಿಕ ಪಂಡಿತ್ ಶ್ರೀ ಸಿದ್ದೇಶ್ವರ ಶಾಸ್ತ್ರಿಗಳು ಹಿರೇಮಠ ಸುಂಟನೂರ್, ಸಂಗೀತಗಾರ ಕಲ್ಲಿನಾಥ್ ಶಾಸ್ತ್ರಿಗಳು ಹಿರೇಮಠ ಹಿತ್ತಲು ಶಿರೂರು, ವೀರಯ್ಯ ಸ್ವಾಮಿ ಮಾಡ್ಯಾಳ ತಬಲಾ ಸೇವೆ ಸಲ್ಲಿಸಿದರು. ಶಂಭುಲಿಂಗ ಸಂಗಾಂವಿ ಸ್ವಾಗತಿಸಿದರು, ನಾಗಭೂಷಣ್ ಸ್ವಾಮಿ ಹಿರೇಮಠ್ ನಿರೂಪಿಸಿದರು.

