ಚಿತ್ತಾಪುರದಲ್ಲಿ ಅ.18 ರಂದು ಉಮೇಶಬಾಬು ಎಂ. ಸಾಸಾಬಾಳ ಅವರ ಮೂರು ಕೃತಿಗಳ ಲೋಕಾರ್ಪಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಅ.18 ರಂದು ಬೆಳಗ್ಗೆ 10.30 ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಚಿತ್ತಾಪುರ ಹಾಗೂ ಸುವನಾ ಪ್ರಕಾಶನ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಖ್ಯಾತ ಚಿತ್ರಕಲಾವಿದ ಉಮೇಶಬಾಬು ಎಂ. ಸಾಸಾಬಾಳ ವಿರಚಿತ “ಮೌನಡಂಗುರ” ಕವನ ಸಂಕಲನ, “ಭಾವಬಂಧುರ” ಗಜಲ್ ಸಂಕಲನ ಮತ್ತು “ಭಾವಭೃಂಗ” ಗಜಲ್ ಸಂಕಲನ ಕೃತಿಗಳ ಲೋಕಾರ್ಪಣಾ ಸಮಾರಂಭ ಆಯೋಜಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್ ತಿಳಿಸಿದ್ದಾರೆ.
ದಿಗ್ಗಾಂವ ಶ್ರೀ ಸಿದ್ಧವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ತಹಸೀಲ್ದಾರ್ ನಾಗಯ್ಯ ಹಿರೇಮಠ ಉದ್ಘಾಟಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ನಿವೃತ್ತ ಶಿಕ್ಷಕ ಸುಧಾಕರರಾವ್ ಸರಾಫ್, ಸುವನಾ ಪ್ರಕಾಶನ ಸಂಸ್ಥಾಪಕಿ ಡಾ. ಅಂಬುಜಾ ಮಳಖೇಡ್ಕರ್, ಕವಿ ಅಶೋಕಕುಮಾರ ಎಂ. ಬಿ, ಕಸಾಪ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.
ಕೃತಿಗಳ ಲೋಕಾರ್ಪಣೆ:
ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ನಾಡೋಜ ಡಾ. ಜೆ. ಎಸ್. ಖಂಡೇರಾವ್ ಮೌನಡಂಗುರ (ಕವನ ಸಂಕಲನ), ಮಕ್ಕಳ ಸಾಹಿತಿ ಎ. ಕೆ. ರಾಮೇಶ್ವರ ಭಾವಬಂಧುರ (ಗಜಲ್ ಸಂಕಲನ), ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ಅವಂಟಿ ಭಾವಭೃಂಗ (ಗಜಲ್ ಸಂಕಲನ)
ಕೃತಿಗಳ ಪರಿಚಯ:
ಮೌನಡಂಗುರ (ಕನನ ಸಂಕಲನ) ಸೇಡಂ ಸಾಹಿತಿ ಲಿಂಗಾರೆಡ್ಡಿ ಶೇರಿ, ಭಾವಬಂಧುರ ಹಾಗೂ ಭಾವಭ್ರಂಗ (ಗಜಲ್ ಸಂಕಲನಗಳು) ಸೇಡಂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್.

