Oplus_0

ದಲಿತ ಸೇನೆ ಯುವ ಘಟಕದ ಪದಾಧಿಕಾರಿಗಳ ನೇಮಕ | ದಲಿತ ಸೇನೆ ಸಂಘಟನೆ ಬಲಿಷ್ಠಗೊಳಿಸಿ: ಅಬ್ದುಲ್ ಖಾದರ್

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ದಲಿತ ಸೇನೆ ಸಂಘಟನೆಯ ಆಶಯ, ಉದ್ದೇಶ ಹಾಗೂ ತತ್ವಗಳಿಗೆ ಅನುಗುಣವಾಗಿ ಚಿತ್ತಾಪುರ ತಾಲೂಕಿನಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಆದೇಶದ ಮೇರೆಗೆ ತಾಲೂಕು ಸಮಿತಿಯ ಯುವ ಘಟಕವನ್ನು ರಚಿಸಲಾಗಿದೆ ಎಂದು ಯುವ ಅಧ್ಯಕ್ಷ ಅಬ್ದುಲ್ ಖಾದರ್ ತಿಳಿಸಿದ್ದಾರೆ.

ಸಂಘಟನೆಯ ಸಾಮಾಜಿಕ ನ್ಯಾಯ, ಸಮಾನತೆ, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಶೋಷಿತ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳ ರಕ್ಷಣೆಯ ಉದ್ದೇಶದಿಂದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ದಲಿತ ಸೇನೆ ಯುವ ಘಟಕದ ಪದಾಧಿಕಾರಿಗಳ ನೇಮಕ:

ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಅಬ್ದುಲ್ ಖಾದರ್, ಉಪಾಧ್ಯಕ್ಷರಾಗಿ ಬಾಬಾ ಮಕಾನದಾರ, ಫಿರೋಜ್ ಗದವಾಲ್, ಸೈಯ್ಯದ್ ಮಶಾಕ್, ನಾಗಪ್ಪ ಮುತ್ತಗಿ, ಶೇಖ್ ಇರ್ಫಾನ್ ಗುಲಫರೋಶ್, ಸಂಘಟನಾ ಕಾರ್ಯದರ್ಶಿಗಳಾಗಿ ಸೈಯ್ಯದ್ ಸದ್ಧಾಮ್, ಮಲ್ಲಿಕಾರ್ಜುನ ಕರದಾಳ, ಸೈಯ್ಯದ್ ರಫೀಕ್, ಅಂಬರೀಷ್ ತೆಲಗೂರ, ಪ್ರಧಾನ ಕಾರ್ಯದರ್ಶಿ ದೀಪಕ್ ಬೊಮ್ಮನೂರ, ಖಜಾಂಚಿ ಎಂ.ಡಿ ಜಾಕೀರ ಹುಸೇನ್ ಅವರು ನೇಮಕವಾಗಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!