ಛಲವಾದಿ ನಾರಾಯಣಸ್ವಾಮಿ ಅವರಿಗೆ ಬಿಜೆಪಿ ಮುಖಂಡರಿಂದ ಗೌರವ ಸನ್ಮಾನ 

ನಾಗಾವಿ ಎಕ್ಸಪ್ರೆಸ್ 

ವಾಡಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಪ್ರಚಾರ ಕಾರ್ಯ ಮುಗಿಸಿ ಹುಬ್ಬಳ್ಳಿಗೆ ಹೊರಟಿದ್ದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಕಲಬುರಗಿ ನಗರದ ರೈಲು ನಿಲ್ದಾಣದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ದಿವ್ಯ ಸಮ್ಮುಖದಲ್ಲಿ, ವಾಡಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ವಿಪಕ್ಷ ನಾಯಕರಿಗೆ ಶಾಲ ಹೊದಿಸಿ ಆತ್ಮೀಯವಾಗಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೀರಣ್ಣ ಯಾರಿ, “ಚಲವಾದಿ ನಾರಾಯಣಸ್ವಾಮಿ ಅವರ ಪಕ್ಷಾಭಿಮಾನದ ನುಡಿಗಳು ಮತ್ತು ಕಾರ್ಯವೈಖರಿ ನಮ್ಮೆಲ್ಲ ಕಾರ್ಯಕರ್ತರಿಗೂ ದೊಡ್ಡ ಸ್ಪೂರ್ತಿಯಾಗಿದೆ” ಎಂದರು.

ಈ ಸೌಹಾರ್ದ ಭೇಟಿಯ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ, ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬರಾಯ ಅಷ್ಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್, ಪ್ರಮುಖ ಮುಖಂಡರಾದ ಶಿವರಾಜಗೌಡ ಪಾಟೀಲ, ಧರ್ಮಣ್ಣ ಇಟಗಿ, ಮಹೇಂದ್ರ ಕುಮಾರ ಪೂಜಾರಿ, ಶಿವಕುಮಾರ ಮೂಲಗೆ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಇತರ ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!